Don't Miss!
- News
ಕತ್ತಿಯಿಂದ ಕೇಕ್ ಕಟ್: ಅತ್ಯಾಚಾರ ಅಪರಾಧಿ ರಾಮ್ ರಹೀಮ್ ಸಂಭ್ರಮ
- Technology
ಐಫೋನ್ 15 ಸರಣಿಯ ಬೆಲೆ ಲೀಕ್!..ಬೆಲೆ ತಿಳಿದ್ರೆ, ಅಚ್ಚರಿ ಪಡ್ತೀರಾ!
- Sports
ಟಿ20 ಕ್ರಿಕೆಟ್ನಿಂದ ಕೊಹ್ಲಿ, ರೋಹಿತ್ಗೆ ವಿಶ್ರಾಂತಿ; ಸ್ಪಷ್ಟನೆ ನೀಡಿದ ಕೋಚ್ ರಾಹುಲ್ ದ್ರಾವಿಡ್
- Automobiles
ನವ ದಂಪತಿ ಕೆ.ಎಲ್ ರಾಹುಲ್-ಅಥಿಯಾ ಶೆಟ್ಟಿ...ಶ್ರೀಮಂತ ಸೆಲಬ್ರಿಟಿ ಯಾರು? ಇವರ ಕಾರ್ ಕಲೆಕ್ಷನ್ ನೋಡಿ ಸಾಕು...
- Lifestyle
ತನ್ನ ಪುರುಷನಲ್ಲಿ ಮಹಿಳೆ ಹುಡುಕುವ ಗುಣಗಳಿವು
- Finance
ಬ್ಯಾಂಕ್ ಲಾಕರ್ ಒಪ್ಪಂದ ರಿನಿವಲ್ ಗಡುವು ವಿಸ್ತರಣೆ, ಹೊಸ ಡೆಡ್ಲೈನ್ ತಿಳಿಯಿರಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ತಲೆಯಲ್ಲಿ ಕೂದಲೇ ಇಲ್ಲ ನೀನು ನನ್ನ ಮದುವೆ ಆಗ್ತೀಯಾ?' ಮದುವೆ ಪ್ರಪೋಸಲ್ ನಿರಾಕರಿಸಿದ ಅನುಶ್ರೀ!
ಸದ್ಯ ಚಿಕ್ಕಬಳ್ಳಾಪುರದಲ್ಲಿ ನಡೆಯುತ್ತಿರುವ ಚಿಕ್ಕಬಳ್ಳಾಪುರ ಉತ್ಸವ ಕಾರ್ಯಕ್ರಮ ದಿನದಿಂದ ದಿನಕ್ಕೆ ವಿವಿಧ ಕಾರಣಕ್ಕೆ ಸುದ್ದಿಯಾಗುತ್ತಿದೆ. ರಾಜ್ಯ ಸರ್ಕಾರದ ಪ್ರಾಯೋಕತ್ವ ಇರುವ ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಕನ್ನಡದ ನಟ ಹಾಗೂ ನಟಿಯರು ಮಿಂಚಿದ್ದಾರೆ. ಕೇವಲ ಕನ್ನಡ ನಟ ಹಾಗೂ ನಟಿಯರು ಮಾತ್ರವಲ್ಲದೇ ತೆಲುಗಿನ ಕಲಾವಿದರನ್ನೂ ಸಹ ಈ ಕಾರ್ಯಕ್ರಮಕ್ಕೆ ಕರೆಸಲಾಗಿದೆ.
ಇನ್ನು ಮೊದಲಿಗೆ ಕಿಚ್ಚ ಸುದೀಪ್, ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ಚಿಕ್ಕಬಳ್ಳಾಪುರ ಉತ್ಸವ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದರು. ಈ ಇಬ್ಬರೂ ಸಹ ನೆರೆದಿದ್ದ ಚಿಕ್ಕಬಳ್ಳಾಪುರ ಜನ ಸಾಗರವನ್ನು ಉದ್ದೇಶಿಸಿ ಮಾತನಾಡಿ ಹೊಗಳಿದ್ದರು. ಇನ್ನು ಕಳೆದ ವರ್ಷ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದು ಅಬ್ಬರಿಸಿ ಸದ್ಯ ಆಸ್ಕರ್ ಪ್ರಶಸ್ತಿಗೂ ಸಹ ಅರ್ಹತೆಯನ್ನು ಗಿಟ್ಟಿಸಿಕೊಂಡಿರುವ ಕಾಂತಾರ ಚಿತ್ರದ ನಟ ರಿಷಬ್ ಶೆಟ್ಟಿ ಹಾಗೂ ನಟಿ ಸಪ್ತಮಿ ಗೌಡ ಸಹ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಈ ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿಯನ್ನು ಅನುಶ್ರೀ ಹೊತ್ತುಕೊಂಡಿದ್ದು, ರಿಷಬ್ ಶೆಟ್ಟಿ ಹಾಗೂ ತಂಡ ಕಾರ್ಯಕ್ರಮಕ್ಕೆ ಆಗಮಿಸಿದ್ದ ದಿನ ವೇದಿಕೆ ಮೇಲೆ ನಿರೂಪಕಿ ಅನುಶ್ರೀ ಸ್ವತಃ ತಾವೇ ತಮ್ಮ ಮದುವೆ ವಿಷಯವನ್ನು ತೆಗೆದುಕೊಂಡು ಹಾಸ್ಯಾಸ್ಪದವಾಗಿ ಮಾತನಾಡಿ ನೆರೆದಿದ್ದ ಜನರನ್ನು ರಂಜಿಸಿದರು. ಇದೇ ವೇಳೆ ತಮ್ಮನ್ನು ಮದುವೆಯಾಗಲು ಪ್ರಪೋಸಲ್ ನೀಡಿದವರಿಗೆ ಅನುಶ್ರೀ ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿದರು. ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಚಿಕ್ಕಬಳ್ಳಾಪುರದಲ್ಲಿ ಹುಡುಗ ಸಿಕ್ತಾನಾ?
ಇನ್ನು ನಿರೂಪಣೆ ಮಾಡುವ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಯುವತಿಯೋರ್ವಳನ್ನು ಚೆನ್ನಾಗಿ ಕಾಣಿಸುತ್ತಿದ್ದೀರ ಎಂದು ಹೊಗಳಿದ ಅನುಶ್ರೀ ಮದುವೆ ಆಗಿದೆಯಾ ಎಂದು ಕೇಳಿದರು ಹಾಗೂ ಆ ಯುವತಿ ಇನ್ನೂ ಸಿಂಗಲ್ ಎಂದು ಉತ್ತರ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅನುಶ್ರೀ ತುಂಬಾ ಒಳ್ಳೆಯದು ನಾನೂ ಸಹ ಸಿಂಗಲ್, ನೋಡಣ ಚಿಕ್ಕಬಳ್ಳಾಪುರದಲ್ಲಿ ಒಳ್ಳೆ ಹುಡುಗ ಇದ್ರೆ ಹುಡುಕೋಣ, ಯಾರಾದ್ರೂ ಇದ್ದಾರಾ ಎಂದು ಹೇಳಿದರು.

ಕ್ಷಣದಲ್ಲಿಯೇ ಬಂತು ಅನುಶ್ರೀಗೆ ಮದುವೆ ಪ್ರಪೋಸಲ್
ಅನುಶ್ರೀ ಹೀಗೆ ಚಿಕ್ಕಬಳ್ಳಾಪುರದಲ್ಲಿ ಯಾರಾದರೂ ಹುಡುಗ ಇದ್ದಾರಾ ಎಂದು ಅನುಶ್ರೀ ಪ್ರಶ್ನೆಯನ್ನು ಕೇಳಿದ ಕೂಡಲೇ ಪ್ರೇಕ್ಷಕರ ಗುಂಪಿನಲ್ಲಿ ಇದ್ದ ಯುವಕರು ಕೈ ಮೇಲೆತ್ತಿ ನಾವು ರೆಡಿ ಎಂದು ಹೇಳಲು ಶುರು ಮಾಡಿದರು. ಯುವಕರು ಮಾತ್ರವಲ್ಲದೇ ವಯಸ್ಕರೂ ಸಹ ಅನುಶ್ರೀಯನ್ನು ಮದುವೆಯಾಗಲು ಸಿದ್ಧ ಎಂದು ಕೈ ಎತ್ತಿದ್ದರು. ಇದನ್ನು ಕಂಡ ಅನುಶ್ರೀ 'ಅಂಕಲ್ ಮೂರು ಮೊಮ್ಮಕ್ಕಳು ವಯಸ್ಸಿನಲ್ಲಿ ಇದೀನಿ ಎದೀನಿ ಎಂದು ಹೇಳ್ತಿದ್ದೀರಿ ನೀವು, ಈಗೇನ್ ನಿಮಗೆ ಮದುವೆಯಾಗೋ ಆಸೆ?' ಎಂದು ಕಾಲೆಳೆದರು.

ತಲೆಯಲ್ಲಿ ಕೂದಲೇ ಇಲ್ಲ ಮದುವೆ ಆಗ್ತೀಯಾ?
ಇನ್ನು ಮತ್ತೋರ್ವ ಯುವಕ ಅನುಶ್ರೀಯನ್ನು ಮದುವೆಯಾಗಲು ನಾನು ರೆಡಿ ಎಂದು ಕುರ್ಚಿ ಮೇಲತ್ತಿ ನಿಂತು ಕೈ ಬೀಸಿದ್ದ. ಇದನ್ನು ಕಂಡ ಅನುಶ್ರೀ 'ಏಯ್ ಕೂತ್ಕೊಳೋ.. ತಲೆಯಲ್ಲಿ ಕೂದಲಿಲ್ಲ ನೀನು ನನ್ನನ್ನು ಮದುವೆ ಆಗ್ತೀಯಾ?' ಎಂದು ಕಾಲೆಳೆದರು. ಅಷ್ಟೇ ಅಲ್ಲದೇ ಕಾಂತಾರದ ಜನಪ್ರಿಯ 'ಕಾಡಲ್ಲೊಂದು ಸೊಪ್ಪು ಸಿಗ್ತದೆ' ಡೈಲಾಗ್ ಅನ್ನು ಹೇಳಿ ಆ ಯುವಕನ ಕಾಲೆಳೆದರು. ಇನ್ನೂ ಮುಂದುವರಿದು ಆ ಹುಡುಗನಿಗೆ ಪರವಾಗಿಲ್ಲ, ಚೆನ್ನಾಗಿದ್ದೀಯಾ, ಮುಂದೆ ನೋಡೋಣ ಮದುವೆ ಎಂದರೆ ಸಮಾಧಾನಕರವಾಗಿ ಯೋಚಿಸಬೇಕು ಎಂದು ತಮಾಷೆಯಾಗಿ ಹೇಳಿಕೆ ನೀಡಿದರು. ಈ ರೀತಿ ಅನುಶ್ರೀ ಮದುವೆ ವಿಚಾರದ ಬಗ್ಗೆ ತಮಾಷೆ ಮಾಡಿ ಮನರಂಜನೆ ನೀಡಿದರು.