For Quick Alerts
  ALLOW NOTIFICATIONS  
  For Daily Alerts

  ಚಿಕಿತ್ಸೆ ಫಲಕಾರಿಯಾಗದೆ ನಿರೂಪಕ ಚಂದನ್ ಪತ್ನಿ ಸಾವು

  By Pavithra
  |
  ಒಂದು ಸಿನೆಮಾಗೆ ಎಷ್ಟು ನಿರ್ದೇಶಕರಿದ್ದಾರೆ ನೋಡಿ | Filmibeat Kannada

  ರಸ್ತೆ ಅಪಘಾತದಲ್ಲಿ ಸಾವನಪ್ಪಿದ್ದ ಅಚ್ಚ ಕನ್ನಡದ ನಿರೂಪಕ ಚಂದನ್ ಅವರ ಪತ್ನಿ ಮೀನಾ, ಚಂದನ್ ದೂರವಾದ ಬೇಸರದಲ್ಲಿ ಪುತ್ರ ತುಷಾರ್ ಕತ್ತು ಸೀಳಿ ಹತ್ಯೆಗೈದು, ತಾನು ಆಸಿಡ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಮೀನಾ ಅವರನ್ನು ಬೆಂಗಳೂರಿನ ವಿಕ್ಟೋರಿ ಆಸ್ಪತ್ರೆಗೆ ಸೇರಿಸಲಾಗಿತ್ತು.

  ಆಸಿಡ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಮೀನಾ ಅವರ ಪರಿಸ್ಥಿತಿ ಗಂಭೀರವಾಗಿತ್ತು. ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೀನಾ ನಿನ್ನೆ ತಡರಾತ್ರಿ ಚಿಕಿತ್ಸೆ ಫಲಕಾರಿ ಆಗದೆ ಕೊನೆ ಉಸಿರೆಳೆದಿದ್ದಾರೆ.

  ನಿರೂಪಕ ಚಂದನ್ ದುರ್ಮರಣ: ಮಗನ ಕತ್ತು ಸೀಳಿ, ಆಸಿಡ್ ಸೇವಿಸಿದ ಪತ್ನಿ ಮೀನಾ ನಿರೂಪಕ ಚಂದನ್ ದುರ್ಮರಣ: ಮಗನ ಕತ್ತು ಸೀಳಿ, ಆಸಿಡ್ ಸೇವಿಸಿದ ಪತ್ನಿ ಮೀನಾ

  ಮೀನಾ ಹಾಗೂ ಅವರ ಪುತ್ರ ತುಷಾರ್ ಇಬ್ಬರ ಕಣ್ಣನ್ನು ಲಯನ್ಸ್ ಕ್ಲಬ್ ನೇತ್ರಾಲಯಕ್ಕೆ ಚಂದನ್ ಕುಟುಂಬಸ್ಥರು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಬೆಳಗ್ಗೆ ಮಗುವಿನ ಕಣ್ಣು ದಾನ ಮಾಡಿ ರಾತ್ರಿ ಮೀನಾ ಅವರ ಕಣ್ಣನ್ನು ನೀಡಿದ್ದಾರೆ.

  ಚಂದನ್ ಸಾವಿನ ವಿಚಾರ ತಿಳಿದು ಇಡೀ ರಾಜ್ಯದ ಜನರೇ ಬೇಸರ ವ್ಯಕ್ತ ಪಡಿಸಿದ್ದರು. ಆದರೆ ಈಗ ಚಂದನ್ ಕುಟುಂಬದ ಸಾವು ಜನರ ಮನಸ್ಸಿಗೆ ತುಂಬಾನೇ ನೋವು ಉಂಟು ಮಾಡಿದೆ.

  English summary
  Kannada TV anchor Chandan's wife Meena breathed her last at 10 pm on Thursday, May 31. Her husband died in a road accident last week. She killed her son before consuming poison..

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X