»   » ನ್ಯೂಯಾರ್ಕ್ ನ ಆಂಡ್ರ್ಯೂ, ಮಾರ್ಟಿನ್ ಮೆಚ್ಚಿದ 'ಬೆಳ್ಳಿ'

ನ್ಯೂಯಾರ್ಕ್ ನ ಆಂಡ್ರ್ಯೂ, ಮಾರ್ಟಿನ್ ಮೆಚ್ಚಿದ 'ಬೆಳ್ಳಿ'

Posted By:
Subscribe to Filmibeat Kannada

ಸೆಂಚುರಿ ಸ್ಟಾರ್, ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಅಭಿನಯದ 'ಬೆಳ್ಳಿ' ಚಿತ್ರ ರಾಜ್ಯದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಶಿವಣ್ಣ ಮತ್ತೊಮ್ಮೆ ಲಾಂಗ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

ಇದು ಪಕ್ಕಾ ಮಾಸ್ ಸಿನಿಮಾ ಆದರೂ ಸೆಂಟಿಮೆಂಟ್, ಭೂಗತ ಜಗತ್ತಿನ ಕಥಾವಸ್ತು ಇದ್ದು ಶಿವಣ್ಣ ಹುಚ್ಚನ ಪಾತ್ರದಲ್ಲಿ ಗಮನಸೆಳೆಯುತ್ತಾರೆ. ಚಿತ್ರ ತೆರೆಕಂಡ ದಿನವೇ ಬೆಂಗಳೂರಿನ ಕಪಾಲಿ ಚಿತ್ರಮಂದಿರದಲ್ಲಿ ನ್ಯೂಯಾರ್ಕ್ ನ ಇಬ್ಬರು ಆಂಡ್ರ್ಯೂ ಮತ್ತು ಮಾರ್ಟಿನ್ ಅವರು ಬ್ಲ್ಯಾಕ್ ಟಿಕೆಟ್ ಪಡೆದು 'ಬೆಳ್ಳಿ' ಚಿತ್ರ ವೀಕ್ಷಿಸಿದರು. [ಬೆಳ್ಳಿ ಚಿತ್ರ ವಿಮರ್ಶೆ]

Andrew and Martin

ಅವರಿಗೆ ಕನ್ನಡ ಭಾಷೆ ಅರ್ಥವಾಗದಿದ್ದರೂ ಅಭಿಮಾನಿಗಳ ಸಂಭ್ರಮ, ಶಿವಣ್ಣನ ಅಭಿನಯಕ್ಕೆ ಮರುಳಾಗಿದ್ದಾರೆ. ಭಾರತ ಪ್ರವಾಸದಲ್ಲಿರುವ ಇವರಿಬ್ಬರೂ ತಲಾ ರು.200 ಕೊಟ್ಟು ಬ್ಲ್ಯಾಕ್ ನಲ್ಲಿ ಟಿಕೆಟ್ ಖರೀದಿಸಿದರು. ಇನ್ನೇನು ಥಿಯೇಟರ್ ಒಳಗೆ ಹೋಗಲು ಜೇಬಿಗೆ ಕೈಹಾಕಿದರೆ ಟಿಕೆಟ್ ಮಂಗಮಾಯ.

ಜೇಬುಗಳ್ಳಲು ಅಷ್ಟರಲ್ಲಾಗಲೇ ತಮ್ಮ ಕೈಚಳಕ ತೋರಿಸಿದ್ದರು. ಕಡೆಗೆ ಇವರ ನೆರವಿಗೆ ಬಂದವರು ಚಿತ್ರದ ಸಂಗೀತ ನಿರ್ದೇಶಕ ವಿ ಶ್ರೀಧರ್. ಬೆಳ್ಳಿ ಚಿತ್ರವನ್ನು ನೋಡುವ ಅವಕಾಶವನ್ನು ಶ್ರೀಧರ್ ಇವರಿಬ್ಬರಿಗೂ ಕಲ್ಪಿಸಿದರು.

ತಮ್ಮ ಕ್ಯಾಮೆರಾಗಳಲ್ಲಿ ಅಭಿಮಾನಿಗಳ ಸಂಭ್ರಮ, ಸಡಗರವನ್ನು ಸೆರೆಹಿಡಿಯುತ್ತಾ 'ಬೆಳ್ಳಿ' ಚಿತ್ರವನ್ನು ಎಂಜಾಯ್ ಮಾಡಿದರು. ತಮಗಂತೂ ಚಿತ್ರ ಸಖತ್ ಇಷ್ಟವಾಯಿತು ಎಂದರು. ನಟ ಶಿವರಾಜ್ ಕುಮಾರ್, ಅವರ ಚಿತ್ರಗಳ ಬಗ್ಗೆ ಪತ್ರಕರ್ತರೊಂದಿಗೆ ಕೇಳಿ ತಿಳಿಕೊಂಡರು. (ಫಿಲ್ಮಿಬೀಟ್)

English summary
Two New York citizens Andrew and Martin recently watched Kananda movie Belli, the movie starer Shivrajkumar and Kriti Kharbanda in lead. Both lauds Shivanna performance and felt satisfied.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada