For Quick Alerts
  ALLOW NOTIFICATIONS  
  For Daily Alerts

  ಸ್ಯಾಂಡಲ್ ವುಡ್ಡಿನ ಆಂಗ್ರಿ ಯಂಗ್ ಮ್ಯಾನ್ ಕಿಚ್ಚ 'ಬಚ್ಚನ್'

  |

  ಈಗ ಚಿತ್ರ ನಿರೀಕ್ಷೆಗೂ ಮೀರಿ ಪಡೆದ ಯಶಸ್ಸು ಮತ್ತು ಚಿತ್ರದಲ್ಲಿನ ನಟನೆಯ ಬಗ್ಗೆ ವ್ಯಾಪಕ ಪ್ರಶಂಸೆ ಮೂಲಕ ಕಿಚ್ಚ ಸುದೀಪ್ ಸಿನಿಮಾ ವೃತ್ತಿ ಜೀವನ ಮತ್ತೊಂದು ಮಜಲನ್ನು ಏರಿದೆ.

  ಮಹೂರ್ತ ಹಂತದಿಂದಲೂ ಭಾರೀ ಸುದ್ದಿಯಲ್ಲಿರುವ ಚಿತ್ರ ಶಶಾಂಕ್ ನಿರ್ದೇಶನದ 'ಬಚ್ಚನ್'. ಚಿತ್ರದ ತಾರಾಗಣದಲ್ಲಿ ಸುದೀಪ್, ತುಲಿಪ್ ಜೋಶಿ, ಭಾವನ, ಪರುಲ್ ಯಾದವ್ ಇದ್ದಾರೆ. ಚಿತ್ರಕ್ಕೆ ಹರಿಕೃಷ್ಣ ಸಂಗೀತ ನೀಡಿದ್ದಾರೆ.

  ಸುದೀಪ್ ಆಂಗ್ರಿ ಯಂಗ್ ಮ್ಯಾನ್ ಲುಕ್

  ಸುದೀಪ್ ಆಂಗ್ರಿ ಯಂಗ್ ಮ್ಯಾನ್ ಲುಕ್

  ಚಿತ್ರದಲ್ಲಿ ಸುದೀಪ್ ಆಂಗ್ರಿ ಯಂಗ್ ಮ್ಯಾನ್ ಲುಕ್ ಪ್ರಮೋಗಳು ವಿಶಿಷ್ಟವಾಗಿ ಮೂಡಿಬಂದಿವೆ. ಈಗ ಚಿತ್ರದ ಹೇರ್ ಸ್ಟೈಲ್ ಅನ್ನು ಸುದೀಪ್ ಇಲ್ಲೂ ಮುಂದುವರಿಸಿದ್ದಾರೆ.

  ಚಿತ್ರದಲ್ಲಿ ಡೈಸಿ ಶಾ ಐಟಂ ಸಾಂಗ್

  ಚಿತ್ರದಲ್ಲಿ ಡೈಸಿ ಶಾ ಐಟಂ ಸಾಂಗ್

  ಈ ಹಿಂದೆ ಕೆಲ ಕನ್ನಡ ಚಿತ್ರಗಳಲ್ಲಿ ನಟಿಸಿದ್ದ ಡೈಸಿ ಶಾ ಐಟಂ ಸಾಂಗಿನಲ್ಲಿ ಸುದೀಪ್ ಮತ್ತು ರವಿಶಂಕರ್ ಜೊತೆ ಹೆಜ್ಜೆ ಹಾಕಲಿದ್ದಾರೆ. ಹಾಡಿನ ಚಿತ್ರೀಕರಣ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಚಿನ್ನಿಪ್ರಕಾಶ್ ಸಾರಥ್ಯದಲ್ಲಿ ಮುಕ್ತಾಯಗೊಂಡಿದೆ.

  ರವಿ ವರ್ಮಾ ಸಾರಥ್ಯದಲ್ಲಿ ಸ್ಟಂಟ್ ದೃಶ್ಯಗಳ ಚಿತ್ರೀಕರಣ

  ರವಿ ವರ್ಮಾ ಸಾರಥ್ಯದಲ್ಲಿ ಸ್ಟಂಟ್ ದೃಶ್ಯಗಳ ಚಿತ್ರೀಕರಣ

  ಸಾಹಸ ನಿರ್ದೇಶಕ ರವಿ ವರ್ಮಾ ಸಾರಥ್ಯದಲ್ಲಿ ಹೈವೋಲ್ಟೇಜ್ ಸ್ಟಂಟ್ ದೃಶ್ಯಗಳ ಚಿತ್ರೀಕರಣದ ವೇಳೆ ಖಳನಟ ರವಿಶಂಕರ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಗ್ಗದ ಮೇಲೆ ಸಾಹಸ ಮಾಡುವ ದೃಶ್ಯವನ್ನು ಸೆರೆಹಿಡಿಯಲಾಗುತ್ತಿದ್ದ ಸಂದರ್ಭದಲ್ಲಿ ರವಿಶಂಕರ್ ಆಯತಪ್ಪಿ ಕೆಳಗೆ ಬಿದ್ದು ಗಾಯಗೊಂಡರು.

  ಅತಿಥಿ ಪಾತ್ರದಲ್ಲಿ ಜಗಪತಿ ಬಾಬು

  ಅತಿಥಿ ಪಾತ್ರದಲ್ಲಿ ಜಗಪತಿ ಬಾಬು

  ತೆಲುಗಿನ ಹೆಸರಾಂತ ನಟ ಜಗಪತಿ ಬಾಬು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ಮೊದಲು ನಾಯಕಿಯಾಗಿ ದೀಪಾ ಸನ್ನಿಧಿ ಆಯ್ಕೆ ಮಾಡಲಾಗಿತ್ತು. ಸ್ಕ್ರಿಪ್ಟ್ ಬದಲಾವಣೆಯ ನಂತರ ಈಕೆಯ ಸ್ಥಾನದಲ್ಲಿ ಪರುಲ್ ಯಾದವ್ ಆಯ್ಕೆಯಾದರು.

  ರವಿಚಂದ್ರನ್ ಬಚ್ಚನ್ ಚಿತ್ರಕ್ಕೆ ಕ್ಲಾಪ್ ಮಾಡಿದ್ದರು

  ರವಿಚಂದ್ರನ್ ಬಚ್ಚನ್ ಚಿತ್ರಕ್ಕೆ ಕ್ಲಾಪ್ ಮಾಡಿದ್ದರು

  ಶೇಖರ್ ಚಂದ್ರು ಚಿತ್ರದ ಛಾಯಾಗ್ರಾಹಕರು. ಕ್ರೇಜಿ ಸ್ಟಾರ್ ರವಿಚಂದ್ರನ್ ಬಚ್ಚನ್ ಚಿತ್ರಕ್ಕೆ ಕ್ಲಾಪ್ ಮಾಡಿದ್ದರು.

  ತೆಲುಗು ಚಿತ್ರದ ಹೆಸರಾಂತ ನಟ ಜಗಪತಿ ಬಾಬು ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಆಶಿಶ್ ವಿದ್ಯಾರ್ಥಿ, ರವಿಶಂಕರ್, ಪ್ರದೀಪ್ ರಾವತ್ ಖಳನಾಯಕರ ಪಾತ್ರದಲ್ಲಿ ಆರ್ಭಟಿಸಲಿದ್ದಾರೆ.

  ಡೈಸಿ ಶಾ ಐಟಂ ಸಾಂಗಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಪ್ರಮೋಗಳು ಸುದೀಪ್ ಅಭಿಮಾನಿಗಳಲ್ಲಿ ಭಾರೀ ಕ್ರೇಜ್ ಹುಟ್ಟಿಹಾಕಿವೆ. ಭಾರೀ ಬಜೆಟಿನ ಈ ಚಿತ್ರವನ್ನು ಉದಯ್ ಮೆಹ್ತಾ ನಿರ್ಮಿಸುತ್ತಿದ್ದಾರೆ.

  ಬಚ್ಚನ್ ಚಿತ್ರದ ಕೆಲವೊಂದು ಸ್ಟಿಲ್ಸ್ ಗಳು ಅಂತರ್ಜಾಲದಲ್ಲಿ ಭಾರೀ ಸದ್ದು ಮಾಡುತ್ತಿದೆ. ಮೂರು ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಚಿತ್ರ ಮೇ 2013ರಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

  ಬಚ್ಚನ್ ಚಿತ್ರದ ಗ್ಯಾಲರಿ

  English summary
  The posters of Sudeep in Bachchan have been doing a lot of noise on internet. The pictures of Sudeep's angry avatars have hit the internet, it appears like the photos were taken during the shooting of action sequences.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X