Don't Miss!
- News
Breaking; ಹಾಲಿ ಶಾಸಕನಿಗೆ ಟಿಕೆಟ್ ನೀಡದಂತೆ ಎಚ್ಡಿಕೆಗೆ ಮನವಿ!
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Sports
ಜಿಂಬಾಬ್ವೆ vs ವೆಸ್ಟ್ ಇಂಡೀಸ್: ಮೊದಲ ಟೆಸ್ಟ್ 2ನೇ ದಿನ: Live score
- Lifestyle
ತಿಂದ ಆಹಾರ ಸರಿಯಾಗಿ ಜೀರ್ಣವಾಗ್ತಿಲ್ವಾ ಹಾಗಾದ್ರೆ ಈ ಆಸನಗಳನ್ನ ಮಾಡಿ
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Finance
LIC Jeevan Umang: ದಿನಕ್ಕೆ 150 ರೂ ಹೂಡಿಕೆ ಮಾಡಿ, 10 ಲಕ್ಷ ಪಡೆಯಿರಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮತ್ತೆ ತೆರೆಯ ಮೇಲೆ ಸಾಹಸಸಿಂಹ ವಿಷ್ಣುವರ್ಧನ್ ಘರ್ಜನೆ
ದಿವಂಗತ ನಟ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಅಳಿಯ ನಟ ಅನಿರುದ್ಧ್ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವ 'ರಾಜಾ ಸಿಂಹ' ಸಿನಿಮಾ ಗುರುವಾರ (ಮಾರ್ಚ್ 31) ದಂದು ಅದ್ದೂರಿಯಾಗಿ ಮುಹೂರ್ತ ನೆರವೇರಿಸಿಕೊಂಡಿದೆ.
ಅಂದಹಾಗೆ ಈ ಸಿನಿಮಾದ ವಿಶೇಷ ಏನಪ್ಪಾ ಅಂದ್ರೆ ಈ ಚಿತ್ರದಲ್ಲಿ ಅಭಿನಯ ಭಾರ್ಗವ ಸಾಹಸ ಸಿಂಹ ವಿಷ್ಣುವರ್ಧನ್ ದಂಪತಿಗಳು ಸುಮಾರು 36 ವರ್ಷಗಳ ನಂತರ ಮತ್ತೆ ತೆರೆಯ ಮೇಲೆ ರಾರಾಜಿಸಲಿದ್ದಾರೆ.[ರಾಜ ಸಿಂಹನಿಗೆ ಸಿಂಹಿಣಿಯಾಗಿ ನಿಖಿತಾ ತುಕ್ರಲ್]
ಇತ್ತೀಚೆಗಿನ ತಂತ್ರಜ್ಞಾನದಲ್ಲಿ ಆಗಿರುವ ಬೆಳವಣಿಗೆಗಳಿಂದ ಅಪ್ಪನವರನ್ನು(ವಿಷ್ಣುವರ್ಧನ್) ತೆರೆಯ ಮೇಲೆ ತರಲು ಸಾಧ್ಯವಾಗುತ್ತಿದೆ. ಅಲ್ಲದೇ ಇದೇ ಮೊದಲ ಬಾರಿಗೆ ಅಪ್ಪ ಮತ್ತು ಅಮ್ಮ(ವಿಷ್ಣುವರ್ಧನ್ ಮತ್ತು ಭಾರತಿ) ನವರ ಜೊತೆ ನಾನು ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದೇನೆ. ಇದು ನನಗೆ ಖುಷಿಯ ವಿಚಾರ' ಎಂದು ನಟ ಅನಿರುದ್ಧ್ ನುಡಿಯುತ್ತಾರೆ.
ಈ ಚಿತ್ರದಲ್ಲಿ ಆಕ್ಷನ್-ಹೀರೋ ಪಾತ್ರದಲ್ಲಿ ನಟಿಸುತ್ತಿರುವ ಅನಿರುದ್ಧ್ 'ಅಪ್ಪನವರ ಎಲ್ಲಾ ಸಿನಿಮಾಗಳಂತೆ 'ರಾಜ ಸಿಂಹ' ಸಿನಿಮಾ ಕೂಡ ಸಂದೇಶ ಭರಿತ ಸಿನಿಮಾ. ಇದು ಹಳ್ಳಿಯಲ್ಲಿ ನಡೆಯಲಿರುವ ಒಂದು ಕುಟುಂಬ ಡ್ರಾಮಾ, ಇದು ಇತ್ತೀಚಿನ ದಿನಗಳಲ್ಲಿ ತುಂಬಾ ವಿರಳ' ಎನ್ನುತ್ತಾರೆ.[ವಾಟ್ಸಾಪ್ ಮೂಲಕ 'ಶಬರಿಮಲೆ ಯಾತ್ರೆ' ಆಡಿಯೋ]
ನಿರ್ದೇಶಕ ರವಿ ರಾಮ್ ಆಕ್ಷನ್-ಕಟ್ ಹೇಳುತ್ತಿರುವ ಚಿತ್ರಕ್ಕೆ ನಿರ್ಮಾಪಕ ಸಿ.ಡಿ ಬಸಪ್ಪ ಅವರು ಬಂಡವಾಳ ಹೂಡುತ್ತಿದ್ದು, ಸಂಗೀತ ನಿರ್ದೇಶಕ ಜೆಸ್ಸಿ ಗಿಫ್ಟ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಚಿತ್ರೀಕರಣಕ್ಕೆ ಚಾಲನೆ ನೀಡಿದ್ದು, ಕೀರ್ತಿ ವಿಷ್ಣುವರ್ಧನ್ ಅವರು ಕ್ಯಾಮರಾಗೆ ಚಾಲನೆ ನೀಡಿದರು.
ಚಿತ್ರದಲ್ಲಿ ಅನಿರುದ್ಧ್ ಅವರ ಜೊತೆ ನಾಯಕಿ ನಟಿಯಾಗಿ ನಿಖಿತಾ ತುಕ್ರಾಲ್ ಅವರು ಮಿಂಚಿದ್ದು, ಇನ್ನುಳಿದಂತೆ ಶರತ್ ಲೋಹಿತಾಶ್ವ, ಅರುಣ್ ಸಾಗರ್ ಮತ್ತು ಬುಲೆಟ್ ಪ್ರಕಾಶ್ ಮುಂತಾದವರು ಕಾಣಿಸಿಕೊಳ್ಳುತ್ತಿದ್ದಾರೆ.[ಗಾಯಕನಾಗಿ ಬದಲಾದ ನಾಯಕ ಅನಿರುದ್ಧ್!]
ಅಂತೂ ಇಂತೂ ಮತ್ತೆ ವಿಷ್ಣುದಾದಾ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿರುವುದರಿಂದ ಅವರ ಅಭಿಮಾನಿಗಳು ಮತ್ತೆ ಫುಲ್ ಖುಷ್ ಆಗಿದ್ದಂತೂ ಸತ್ಯ. ಫೊಟೋ ಗ್ಯಾಲರಿ ನೋಡಲು ಸ್ಲೈಡ್ಸ್ ಕ್ಲಿಕ್ಕಿಸಿ..