Don't Miss!
- Sports
IPL 2022: ಕ್ವಾಲಿಫೈಯರ್ ಪಂದ್ಯದಲ್ಲಿ ಕೊಹ್ಲಿ ಆರ್ಸಿಬಿಗೆ ಕೈಕೊಟ್ಟು ಫ್ಲಾಪ್ ಆದದ್ದು ಇದು ಮೂರನೇ ಬಾರಿ!
- Lifestyle
ಮಂಕಿಪಾಕ್ಸ್ vs ಕೊರೊನಾವೈರಸ್: ಈ ಎರಡು ವೈರಸ್ನಲ್ಲಿ ಮೈ ಮೇಲೆ ಏಳುವ ಗುಳ್ಳೆಗಳು ಹೇಗೆ ಭಿನ್ನವಾಗಿವೆ?
- Technology
ಇನ್ಮುಂದೆ ನಿಮ್ಮ ಕೆಮ್ಮು ಮತ್ತು ಗೊರಕೆಗಳನ್ನು ಕೂಡ ಟ್ರ್ಯಾಕ್ ಮಾಡಲು ಗೂಗಲ್ ಪ್ಲಾನ್!
- Automobiles
ಭಾರತದಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಬಹುನೀರಿಕ್ಷಿತ ಕಾರು ಮಾದರಿಗಳಿವು!
- News
ಪಂಕ್ಚರ್ ಅಂಗಡಿ ಅನಕ್ಷರಸ್ಥನಿಂದ ವರ್ಷಕ್ಕೆ 7 ಕೋಟಿ ಸಂಪಾದನೆ
- Finance
ಕಾರು, ಬೈಕು ಖರೀದಿಗೆ ಮುನ್ನ ಗಮನಿಸಿ, ಜೂನ್ 1ರಿಂದ ವಿಮೆ ಮೊತ್ತ ಏರಿಕೆ
- Education
KCET 2022 Syllabus : 2022ರ ಸಿಇಟಿ ಪರೀಕ್ಷೆಯ ಪಠ್ಯಕ್ರಮ ರಿಲೀಸ್
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಗುಜರಾತ್ ಮಾದರಿ'ಗಾಗಿ ಸಿಎಂ ಗೆ ಮನವಿ ಮಾಡಿದ ನಟ ಅನಿರುದ್ಧ
ನಟ ಅನಿರುದ್ಧ, ನಟನೆಯ ಜೊತೆಗೆ ಕೆಲವು ಸಾಮಾಜಿಕ ಕಾರ್ಯಗಳಲ್ಲಿಯೂ ತೊಡಗಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಸಾಮಾಜಿಕ ಜಾಲತಾಣ ಬಳಸಿಕೊಂಡು ಸ್ಥಳೀಯ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವ ಕಾರ್ಯವನ್ನೂ ಮಾಡುತ್ತಿದ್ದಾರೆ.
ಇದೀಗ ನಟ ಅನಿರುದ್ಧ ಅವರು, ಸಾಮಾಜಿಕ ಜಾಲತಾಣ ಮೂಲಕ ಸಿಎಂ ಯಡಿಯೂರಪ್ಪ ಬಳಿ ಮನವಿಯೊಂದನ್ನು ಮಾಡಿದ್ದಾರೆ.
'ನಮ್ಮ ರಾಜ್ಯದಲ್ಲಿನ ತೆರೆದ ಕಾಲುವೆಗಳನ್ನ ಸೌರ ಫಲಕಗಳಿಂದ ಮುಚ್ಚಿ ಗುಜರಾತ್ ಮಾದರಿಯ ವಿದ್ಯುತ್ಚಕ್ತಿ ಉತ್ಪಾದನೆಗೆ ಸೌರಫಲಕಗಳನ್ನ ಬಳಿಸಬಹುದು ಮತ್ತು ಏರಡೂ ಬದಿಯಲ್ಲಿ ಗೋಡೆಗಳನ್ನ ಕಟ್ಟಿ ಅವುಗಳ ಮೇಲೆ ವರ್ಟಿಕಲ್ ಗಾರ್ಡನಿಂಗ್ ಮಾಡಬಹುದು' ಎಂಬ ಸಲಹೆ ನೀಡಿದ್ದಾರೆ ಅನಿರುದ್ಧ.
ದೊಡ್ಡ ನೀರಿನ ಕಾಲುವೆಗಳ ಮೇಲೆ ಸೌರ ಫಲಕಗಳನ್ನು ಅಳವಡಿಸಿದಲ್ಲಿ, ಕಾಲುವೆಗಳನ್ನು ಮುಚ್ಚಿದಂತೆ ಆಗುವ ಜೊತೆಗೆ ವಿದ್ಯುಚ್ಛಕ್ತಿ ಉತ್ಪಾದನೆಯೂ ಆಗುತ್ತದೆ. ವಿಜಯ್ ರೂಪಾಣಿ ಸಿಎಂ ಆಗಿರುವ ಗುಜರಾತ್ ರಾಜ್ಯದಲ್ಲಿ ಈಗಾಗಲೇ ಈ ಕಾರ್ಯವನ್ನು ಪ್ರಾರಂಭಿಸಲಾಗಿದೆ.
ಇದು ಮಾತ್ರವಲ್ಲದೆ, ಕಸ ತುಂಬಿಕೊಂಡ ರಸ್ತೆಗಳ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿ ಬಿಬಿಎಂಪಿ ಗಮನ ಕೊಡುವಂತೆ ಆಗ್ರಹಿಸುತ್ತಿರುತ್ತಾರೆ ಅನಿರುದ್ಧ. ಬೇರೆ ಎಲ್ಲೆಡೆಯೇ ಕಸ ಬಿದ್ದ ದೃಶ್ಯಗಳನ್ನು ಕಂಡುಬಂದರೆ ಅದರ ಚಿತ್ರವನ್ನು ಹಂಚಿಕೊಂಡು ಸಂಬಂಧಪಟ್ಟವರನ್ನು ಸ್ವಚ್ಚತೆಗಾಗಿ ಆಗ್ರಹಿಸೋಣ ಎಂದು ಕರೆ ಸಹ ನೀಡಿದ್ದಾರೆ.