For Quick Alerts
  ALLOW NOTIFICATIONS  
  For Daily Alerts

  ಪೊಗರು, ಮದಗಜ ನಂತರ ತೆಲುಗಿಗೆ ಮತ್ತೊಂದು ಚಿತ್ರ: ಡಬ್ ಮಾಡಿದ ನಿಶ್ವಿಕಾ

  |

  ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಹೆಚ್ಚಾಗುತ್ತಿದ್ದಂತೆ ಕನ್ನಡ ಸಿನಿಮಾಗಳ ಮಾರುಕಟ್ಟೆ ಸಹ ವಿಸ್ತರಿದೆ. ಬಹುತೇಕ ಸ್ಟಾರ್ ನಟರ ಚಿತ್ರಗಳು ಕನ್ನಡದ ಜೊತೆಗೆ ತೆಲುಗು, ತಮಿಳಿನಲ್ಲಿ ಬಿಡುಗಡೆಯಾಗುತ್ತಿವೆ. ಈ ಸಾಲಿನಲ್ಲಿ ಯುವರತ್ನ, ಪೊಗರು, ಮದಗಜ ಅಂತಹ ಮುಂಚೂಣಿಯಲ್ಲಿದೆ.

  ಈಗ ಅನಿಶ್ ತೇಜೇಶ್ವರ್ ಮತ್ತು ನಿಶ್ವಿಕಾ ನಾಯ್ಡು ನಟನೆಯಲ್ಲಿ ತಯಾರಾಗಿರುವ ರಾಮಾರ್ಜುನ ಸಿನಿಮಾ ಟಾಲಿವುಡ್‌ಗೆ ಪ್ರವೇಶ ಮಾಡುತ್ತಿದೆ. ಕನ್ನಡದಲ್ಲಿ ಈಗಾಗಲೇ ಟ್ರೈಲರ್ ಮತ್ತು ಹಾಡುಗಳನ್ನು ಬಿಡುಗಡೆ ಮಾಡಿ ಗಮನ ಸೆಳೆದಿರುವ ರಾಮಾರ್ಜುನ ಈಗ ತೆಲುಗಿನಲ್ಲಿ ತೆರೆಕಾಣುತ್ತಿದೆ.

  ಅನಿಶ್ 'ರಾಮಾರ್ಜುನ' ಚಿತ್ರಕ್ಕೆ ರಕ್ಷಿತ್ ಶೆಟ್ಟಿ ನಿರ್ಮಾಪಕ!ಅನಿಶ್ 'ರಾಮಾರ್ಜುನ' ಚಿತ್ರಕ್ಕೆ ರಕ್ಷಿತ್ ಶೆಟ್ಟಿ ನಿರ್ಮಾಪಕ!

  ವಿಶೇಷ ಅಂದ್ರೆ ತೆಲುಗು ವರ್ಷನ್‌ಗೆ ನಟಿ ನಿಶ್ವಿಕಾ ನಾಯ್ಡು ವಾಯ್ಸ್ ಡಬ್ ಮಾಡ್ತಿದ್ದಾರೆ. ತೆಲುಗಿನಲ್ಲಿ ಹಿನ್ನೆಲೆ ಧ್ವನಿ ನೀಡುತ್ತಿರುವ ನಿಶ್ವಿಕಾ ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

  ''ನಿಮ್ಮೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ನಮ್ಮ ರಾಮಾರ್ಜುನ ಸಿನಿಮಾ ತೆಲುಗಿನಲ್ಲೂ ಬಿಡುಗಡೆಯಾಗುತ್ತಿದೆ ಎಂಬ ವಿಚಾರ ಹಂಚಿಕೊಳ್ಳಲು ಸಂತಸವಾಗುತ್ತಿದೆ. ನಾನು ತೆಲುಗಿನಲ್ಲಿ ಡಬ್ಬಿಂಗ್ ಆರಂಭಿಸಿದ್ದೇನೆ. ನಿಮ್ಮೆಲ್ಲರ ಪ್ರೀತಿ, ಹಾರೈಕೆ ಇರಲಿ'' ಎಂದು ಟ್ವೀಟ್ ಮಾಡಿದ್ದಾರೆ.

  ಅಂದ್ಹಾಗೆ, ರಾಮಾರ್ಜುನ ಚಿತ್ರದಲ್ಲಿ ನಟಿಸುವುದರ ಜೊತೆಗೆ ಅನಿಶ್ ತೇಜೇಶ್ವರ್ ಚೊಚ್ಚಲ ಬಾರಿಗೆ ನಿರ್ದೇಶನ ಸಹ ಮಾಡಿದ್ದಾರೆ. ಹಾಗಾಗಿ ಈ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ವಿಶೇಷವೆನಿಸಿಕೊಂಡಿದೆ.

  ವಿಂಕ್ ವಿಶ್ಯೂಲ್ ಪ್ರೊಡಕ್ಷನ್ ಸಂಸ್ಥೆ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಿದ್ದು, ರಕ್ಷಿತ್ ಶೆಟ್ಟಿ ಸಹ ನಿರ್ಮಾಣದಲ್ಲಿ ಪಾಲುದಾರರಾಗಿದ್ದಾರೆ ಎಂಬ ಸುದ್ದಿ ಇತ್ತೀಚಿಗಷ್ಟೆ ಹೊರಬಿದ್ದಿತ್ತು. ಅನಿಶ್ ಮತ್ತು ರಕ್ಷಿತ್ ಶೆಟ್ಟಿ ಬಹಳ ವರ್ಷದಿಂದಲೂ ಗೆಳೆಯರು. 'ನಮ್ ಏರಿಯಾಲ್ ಒಂದಿನಾ' ಸಿನಿಮಾದಿಂದಲೂ ರಕ್ಷಿತ್ ಮತ್ತು ಅನಿಶ್ ಒಟ್ಟಿಗೆ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿದ್ದಾರೆ.

  ಮಾತಾಡೋರು ಇದ್ರೇನೆ ಅವರು ಬದುಕಿದ್ದಾರೆ ಅನೋದು ಗೊತ್ತಾಗೋದು | Filmibeat Knnada

  ಸದ್ಯಕ್ಕೆ ರಾಮಾರ್ಜುನ ಚಿತ್ರದ ಬಿಡುಗಡೆ ದಿನಾಂಕ ಬಹಿರಂಗವಾಗಿಲ್ಲ. ಆದರೆ, ಆದಷ್ಟೂ ಬೇಗ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದೆ. ಇನ್ನುಳಿದಂತೆ ಅನಿಶ್, ನಿಶ್ವಿಕಾ ಜೊತೆಯಲ್ಲಿ ಪ್ರಮೋದ್ ಶೆಟ್ಟಿ, ರಂಗಾಯಣ ರಘು, ಅರುಣಾ ಬಾಲರಾಜ್ ಸೇರಿದಂತೆ ಮುಂತಾದವರು ತಾರಬಳಗದಲ್ಲಿದ್ದಾರೆ.

  English summary
  Anish tejeshwar and Nishvika Naidu Starrer Ramarjuna Movie to Release in Telugu.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  Desktop Bottom Promotion