»   »  80ರಷ್ಟು ಶೂಟಿಂಗ್ ಮುಗಿಸಿದ 'ಅಂಜನಿಪುತ್ರ', ಕ್ಲೈಮ್ಯಾಕ್ಸ್ ಎಲ್ಲಿ?

80ರಷ್ಟು ಶೂಟಿಂಗ್ ಮುಗಿಸಿದ 'ಅಂಜನಿಪುತ್ರ', ಕ್ಲೈಮ್ಯಾಕ್ಸ್ ಎಲ್ಲಿ?

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು 'ಕಿರಿಕ್' ಬೆಡಗಿ ರಶ್ಮಿಕಾ ಮಂದಣ್ಣ ನಟಿಸುತ್ತಿರುವ 'ಅಂಜನಿಪುತ್ರ'ದ ಚಿತ್ರೀಕರಣ ಭರದಿಂದ ಸಾಗುತ್ತಿದೆ.

ಹರ್ಷ.ಎ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ದೊಡ್ಡ ತಾರಬಳಗವನ್ನ ಚಿತ್ರದಲ್ಲಿ ನೋಡಬಹುದು. ಸದ್ಯ ಬಹುಭಾಷಾ ನಟಿ ರಮ್ಯಾಕೃಷ್ಣ ಚಿತ್ರತಂಡವನ್ನ ಸೇರಿಕೊಂಡಿದ್ದು, ಇತ್ತಿಚೇಗಷ್ಟೇ ರಮ್ಯಾಕೃಷ್ಣ ಅವರ ಭಾಗದ ಶೂಟಿಂಗ್ ನಡೆದಿದೆ.

ಶೇಕಡಾ 80 ರಷ್ಟು ಚಿತ್ರೀಕರಣ ಮುಗಿಸಿರುವ 'ಅಂಜನಿಪುತ್ರ' ಕ್ಲೈಮ್ಯಾಕ್ಸ್ ಗಾಗಿ ಹೊರರಾಜ್ಯಕ್ಕೆ ಜಿಗಿದಿದೆ. ಹಾಗಿದ್ರೆ, 'ಅಂಜನಿಪುತ್ರ'ನ ಕ್ಲೈಮ್ಯಾಕ್ಸ್ ಎಲ್ಲಿ? ಮುಂದೆ ಓದಿ......

(ಚಿತ್ರಕೃಪೆ: ಪುನೀತ್ ಫ್ಯಾನ್ಸ್ ಕ್ಲಬ್)

80 ರಷ್ಟು ಶೂಟಿಂಗ್ ಕಂಪ್ಲೀಟ್

'ಅಂಜನಿಪುತ್ರ' ಚಿತ್ರದ ಸುಮಾರು 80 ರಷ್ಟು ಚಿತ್ರೀಕರಣ ಮುಗಿದಿದೆ. ಈಗೇನಿದ್ರೂ ಚಿತ್ರದ ಕ್ಲೈಮ್ಯಾಕ್ಸ್ ಹಾಗೂ ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ.

ಪುನೀತ್ 'ಅಂಜನೀಪುತ್ರ' ಶೂಟಿಂಗ್ ಸೆಟ್ ನಲ್ಲಿ ಕಾಣಿಸಿಕೊಂಡ ನಟ ಬಾಲಕೃಷ್ಣ

ರಾಜಸ್ತಾನದಲ್ಲಿ ಕ್ಲೈಮ್ಯಾಕ್ಸ್

'ಅಂಜನಿಪುತ್ರ'ದ ಕ್ಲೈಮ್ಯಾಕ್ಸ್ ನ ದೃಶ್ಯಗಳಿಗಾಗಿ ರಾಜಸ್ತಾನದಲ್ಲಿ ಚಿತ್ರೀಕರಣ ನಡೆಸಲಾಗುತ್ತೆ. ಈಗಾಗಲೇ ಚಿತ್ರತಂಡ ರಾಜಸ್ತಾನಕ್ಕೆ ಹಾರಿದೆ ಎಂಬ ಮಾಹಿತಿ ಸಿಕ್ಕಿದೆ.

ಬಾಲಿವುಡ್ ನಟನ ದೃಶ್ಯ ಚಿತ್ರೀಕರಣ

'ಅಂಜನಿಪುತ್ರ'ದ ಕ್ಲೈಮ್ಯಾಕ್ಸ್ ನಲ್ಲಿ ಬಾಲಿವುಡ್ ನಟ ಮುಖೇಶ್ ತಿವಾರಿಯ ದೃಶ್ಯಗಳನ್ನ ಚಿತ್ರೀಕರಣ ಮಾಡಲಾಗುತ್ತಿದೆ. ಚಿತ್ರದಲ್ಲಿ ಮುಖೇಶ್ ತಿವಾರಿ ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ.

ಸ್ಕಾಟ್ಲೆಂಡ್ ನಲ್ಲಿ ಹಾಡಿನ ಚಿತ್ರೀಕರಣ

ರಾಜಸ್ತಾನದಲ್ಲಿ ಕ್ಲೈಮ್ಯಾಕ್ಸ್ ಮುಗಿದ ನಂತರ ಎರಡು ಹಾಡುಗಳಿಗಾಗಿ ಸ್ಕಾಟ್ಲೆಂಡ್ ಗೆ ಹಾರಲಿದೆ ಅಂಜನಿಪುತ್ರ.

ಫ್ಯಾಮಿಲಿ ಫೋಟೋ

'ಅಂಜನಿಪುತ್ರ' ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅವರ ಫ್ಯಾಮಿಲಿ ದೃಶ್ಯಗಳ ಚಿತ್ರೀಕರಣ ಇತ್ತೀಚೆಗಷ್ಟೇ ನಡೆದಿತ್ತು. ಈ ವೇಳೆ ಕ್ಲಿಕ್ಕಿಸಿದ ಫೋಟೋಗಳಿವು.

ವಿಶೇಷ ಪಾತ್ರದಲ್ಲಿ ರವಿಶಂಕರ್

ಅಂಜನಿಪುತ್ರ ಚಿತ್ರದಲ್ಲಿ ಖ್ಯಾತ ಖಳನಟ ರವಿಶಂಕರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪುನೀತ್ ಜೊತೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾಗ ಸೆರೆಯಾದ ಚಿತ್ರವಿದು.

Puneeth Rajkumar Is Anjaniputra | Filmibeat Kannada

ಅಂಜನಿಪುತ್ರ ಚಿತ್ರದ ಬಗ್ಗೆ

ಹರ್ಷ ಎ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ಎಂ.ಎನ್ ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ಪುನೀತ್ ರಾಜ್ ಕುಮಾರ್, ರಶ್ಮಿಕಾ ಮಂದಣ್ಣ, ರಮ್ಯಾಕೃಷ್ಣ, ರವಿಶಂಕರ್, ಮುಖೇಶ್ ತಿವಾರಿ, ಚಿಕ್ಕಣ್ಣ, ಹರಿಪ್ರಿಯಾ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ರವಿಬಸ್ರೂರು ಚಿತ್ರಕ್ಕೆ ಸಂಗೀತ ಒದಗಿಸುತ್ತಿದ್ದಾರೆ.

English summary
Puneeth Rajkumar and Rashmika Mandanna-starrer Anjaniputra Having completed 80 per cent of the shoot, the team will head to Rajasthan for few more scenes will be shot.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada