ಪುನೀತ್ ರಾಜ್ ಕುಮಾರ್ 'ಅಂಜನಿಪುತ್ರ' ಆಗಮನಕ್ಕೆ ವೇದಿಕೆ ಸಿದ್ಧ!
ಪುನೀತ್ ರಾಜ್ ಕುಮಾರ್ ಅಭಿನಯದ 'ಅಂಜನಿಪುತ್ರ' ಸಿನಿಮಾ ಇದೀಗ ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾದ ಬಿಡುಗಡೆಯ ದಿನಾಂಕ ನಿಗದಿ ಆಗಿದ್ದು, ಚಿತ್ರ ಡಿಸೆಂಬರ್ 21ಕ್ಕೆ ಬಿಡುಗಡೆಯಾಗಲಿದೆ.
'ರಾಜಕುಮಾರ' ನಂತರ 'ಅಂಜನಿಪುತ್ರ' ಸಿನಿಮಾವನ್ನು ಪುನೀತ್ ಮಾಡಿದ್ದು ಚಿತ್ರದ ಮೇಲೆ ನಿರೀಕ್ಷೆ ದೊಡ್ಡದಿದೆ. ಅದೇ ರೀತಿ ಸಿನಿಮಾದ ಹಾಡುಗಳು ಮತ್ತು ಟ್ರೇಲರ್ ಈಗಾಗಲೇ ರಿಲೀಸ್ ಆಗಿ ಎಲ್ಲರ ಮೆಚ್ಚುಗೆ ಗಳಿಸಿದೆ. ಚಿತ್ರಕ್ಕೆ ಹರ್ಷ ನಿರ್ದೇಶನ ಮಾಡಿದ್ದು, ಇಲ್ಲಿಯೂ ತಮ್ಮ ಆಂಜನೇಯನ ಆರಾಧನೆಯನ್ನು ಅವರು ಮುಂದುವರೆಸಿದ್ದಾರೆ.

ರಶ್ಮಿಕಾ ಮಂದಣ್ಣ ಎರಡನೇ ಸಿನಿಮಾ ಇದಾಗಿದೆ. ಪುನೀತ್ ರಾಜ್ ಕುಮಾರ್ ಜೋಡಿಯಾಗಿ ಕಿರಿಕ್ ಹುಡುಗಿ ಕಾಣಿಸಿಕೊಂಡಿದ್ದಾರೆ. 'ಅಂಜನಿಪುತ್ರ' ತಮಿಳಿನ 'ಪೂಜೈ' ಚಿತ್ರದ ರಿಮೇಕ್ ಆಗಿದೆ. ನಟಿ ರಮ್ಯ ಕೃಷ್ಣ ಪುನೀತ್ ತಾಯಿಯ ಪಾತ್ರದಲ್ಲಿ ಕಾಣಿಸಕೊಂಡಿದ್ದಾರೆ. ಎನ್ ಕುಮಾರ್ ನಿರ್ಮಾಣದ ಈ ಸಿನಿಮಾ ಇದೇ ತಿಂಗಳ 21ಕ್ಕೆ ರಿಲೀಸ್ ಆಗಲಿದೆ.
More from Filmibeat
English summary
Puneeth Rajkumar's 'Anjaniputra' movie will releasing on December 21st.
puneeth rajkumar rashmika mandanna a harsha release sandalwood ಪುನೀತ್ ರಾಜ್ ಕುಮಾರ್ ರಶ್ಮಿಕಾ ಮಂದಣ್ಣ ಬಿಡುಗಡೆ ಸ್ಯಾಂಡಲ್ ವುಡ್


Click it and Unblock the Notifications











