»   » ವಿಡಿಯೋ : ಹನುಮಂತನ ಭಕ್ತನಾದ 'ಅಂಜನೀಪುತ್ರ' ಪುನೀತ್

ವಿಡಿಯೋ : ಹನುಮಂತನ ಭಕ್ತನಾದ 'ಅಂಜನೀಪುತ್ರ' ಪುನೀತ್

Written By:
Subscribe to Filmibeat Kannada
ಹನುಮಂತನ ಭಕ್ತನಾದ 'ಅಂಜನೀಪುತ್ರ' ಪುನೀತ್ | FIlmibeat Kannada

'ಅಂಜನೀಪುತ್ರ' ಸಿನಿಮಾದ ಟ್ರೇಲರ್ ನಿನ್ನೆ ಬಿಡುಗಡೆಯಾಗಿದೆ. ಹಾಡುಗಳ ನಿರೀಕ್ಷೆಯಲ್ಲಿ ಇದ್ದ ಪ್ರೇಕ್ಷಕರಿಗೆ ಹಾಡುಗಳ ಜೊತೆ ಟ್ರೇಲರ್ ನೋಡುವ ಭಾಗ್ಯ ಕೂಡ ಸಿಕ್ಕಿದೆ.

'ಅಂಜನೀಪುತ್ರ' ಟ್ರೇಲರ್ ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಶುರು ಮಾಡಿದೆ. 'ಭಜರಂಗಿ' ಸಿನಿಮಾದ ನಂತರ ಆಂಜನೇಯನ ಆರಾಧನೆ ಮಾಡುತ್ತಿರುವ ನಿರ್ದೇಶಕ ಹರ್ಷ ಇಲ್ಲಿಯೂ ಅದನ್ನು ಮುಂದುವರೆಸಿದ್ದಾರೆ. ಪುನೀತ್ ಚಿತ್ರದಲ್ಲಿ ಹನುಮಂತನ ಭಕ್ತನಾಗಿ ಅಬ್ಬರಿಸಿದ್ದಾರೆ.

 'Anjaniputra' trailer released

ಟ್ರೇಲರ್ ಸಿನಿಮಾದ ಮೇಲೆ ನಿರೀಕ್ಷೆ ಹುಟ್ಟಿಸುವಲ್ಲಿ ಯಶಸ್ವಿಯಾಗಿದೆ. ಸಿಕ್ಕಾಪಟ್ಟೆ ಆಕ್ಷನ್ ಸಿನಿಮಾದಲ್ಲಿ ಇರುವುದು ಟ್ರೇಲರ್ ಮೂಲಕ ತಿಳಿಸಿದೆ. ಜೊತೆಗೆ ನಟಿ ರಶ್ಮಿಕಾ ಮಂದಣ್ಣ ಅಪ್ಪು ಪ್ರೇಯಸಿಯಾಗಿ ಮತ್ತು ರಮ್ಯಕೃಷ್ಣ ಪುನೀತ್ ತಾಯಿಯಾಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರವಿಶಂಕರ್ ಖಡಕ್ ಪೋಲೀಸ್ ಆಫೀಸರ್ ಆಗಿ ನಟಿಸಿದ್ದಾರೆ.

English summary
Watch Video : Puneeth Rajkumar's 'Anjaniputra' movie trailer released.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada