»   » ಅಣ್ಣಾಬಾಂಡ್ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಗಳಿಕೆ

ಅಣ್ಣಾಬಾಂಡ್ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಗಳಿಕೆ

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ದುನಿಯಾ ಸೂರಿ ಸಂಗಮದ ಅಣ್ಣಾಬಾಂಡ್ ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ದೊರೆತಿದೆ. ಖಂಡಿತ ಜನರಿಗೆ ಇಷ್ಟವಾಗುತ್ತೆ, ಜಾಕಿ ದಾಖಲೆ ಮುರಿಯುತ್ತೆ ಎನ್ನಲಾಗಿದ್ದ ಚಿತ್ರ ಪ್ರೇಕ್ಷಕರಿಗೆ ಅಷ್ಟೊಂದು ಇಷ್ಟವಾಗಿಲ್ಲ. ಆದಾಗ್ಯೂ ಬಾಕ್ಸ್ ಆಫೀಸ್ ಗಳಿಕೆ ದೃಷ್ಟಿಯಿಂದ ಅಣ್ಣಾಬಾಂಡ್ ಸಾಕಷ್ಟು ಎತ್ತರದಲ್ಲೇ ಇದೆ. ಗಳಿಕೆ ರು. 12 ಕೋಟಿ ದಾಟಿದೆ ಎಂಬ ಮಾಹಿತಿ ಬಂದಿದೆ.

ಸುದ್ದಿ ಮೂಲಗಳ ಪ್ರಕಾರ, ಇದುವರೆಗಿನ ಅಣ್ಣಾಬಾಂಡ್ ಗಳಿಕೆ 12 ಕೋಟಿ ರು. ದಾಟಿದ್ದು ಮೊದಲ ದಿನದ ಗಳಿಕೆಯೇ ರು. 3 ಕೋಟಿ ಮೀರಿದೆ. ಮೊದಲವಾರದ ಗಳಿಕೆಯೇ ಅತೀ ಹೆಚ್ಚಾಗಿದ್ದು ನಂತರ ಗಳಿಕೆ ಸ್ವಲ್ಪ ಕುಸಿದಿದೆ. ಚಿತ್ರಕ್ಕೆ ಖರ್ಚಾಗಿದ್ದು ಕೇವಲ ರು. 5 ಕೋಟಿ ಮಾತ್ರ. ಬಿಡುಗಡೆಯಾಗಿ ಕೇವಲ ಹತ್ತೇ ದಿನಗಳಲ್ಲಿ 12 ಕೋಟಿ ರು. ಬಾಚಿಕೊಂಡು ಪವರ್ ಫುಲ್ ಎನಿಸಿದೆ. ಹಾಗಾಗಿ ಅಣ್ಣಾಬಾಂಡ್ ಲಾಭದ ಹಾದಿಯಲ್ಲಿ ಸಾಗುತ್ತಿದೆ ಎಂದು ನಿಸ್ಸಂದೇಹವಾಗಿ ಹೇಳಬಹುದು.

ಸ್ವತಃ ಸೂರಿಗೂ ಇದು ಜಾಕಿ ಹಾಗೂ ಜಂಗ್ಲಿಯ ಮುಂದುವರಿದ ಭಾಗ ಎನ್ನಿಸಿದೆ. ಈ ಚಿತ್ರ ಪ್ರೇಕ್ಷಕರ ವಲಯದಲ್ಲೂ ನಿರೀಕ್ಷೆಯ ಮಟ್ಟ ಮುಟ್ಟಿಲ್ಲ. ಆದರೂ, ದುನಿಯಾ ಐವತ್ತು ದಿನಗಳಲ್ಲಿ ಗಳಿಸಿದ್ದನ್ನು ಅಣ್ಣಾಬಾಂಡ್ ಮೂರೇ ದಿನದಲ್ಲಿ ಗಳಿಸಿದೆ ಎಂಬುದನ್ನು ಸೂರಿ ಬಹಿರಂಗ ಪಡಿಸಿದ್ದಾರೆ. ಕರ್ನಾಟಕದಾದ್ಯಂತ ಒಟ್ಟೂ 145 ಚಿತ್ರಮಂದಿರಗಳಲ್ಲಿ ಅಣ್ಣಾಬಾಂಡ್ ಓಟ ಮುಂದುವರಿದಿದೆ. ಲಾಭದ ಹಾದಿಯಲ್ಲಿರುವ ಈ ಚಿತ್ರವು ಅದೆಷ್ಟು ಲಾಭ ಗಳಿಸಲಿದೆಯೆಂಬುದು ಸದ್ಯಕ್ಕೆ ಸಸ್ಪೆನ್ಸ್. (ಒನ್ ಇಂಡಿಯಾ ಕನ್ನಡ)

English summary
Despite getting mixed response, Anna Bond has done an earth shattering business in the first week at Kannada Box Office. It collected Rs. 12 crores according to the sources. 
 
Please Wait while comments are loading...