»   » 'ಅನ್ನದಾತರ ಅನ್ನದಾತ' ಸುದೀಪ್ ಬಗ್ಗೆ ಫೇಸ್ ಬುಕ್ ನಲ್ಲಿ ಘೋರ ಸಮರ.!

'ಅನ್ನದಾತರ ಅನ್ನದಾತ' ಸುದೀಪ್ ಬಗ್ಗೆ ಫೇಸ್ ಬುಕ್ ನಲ್ಲಿ ಘೋರ ಸಮರ.!

Posted By:
Subscribe to Filmibeat Kannada

ಕಾಲಿವುಡ್ ನ ಖ್ಯಾತ ನಿರ್ದೇಶಕ ಕೆ.ಎಸ್.ರವಿಕುಮಾರ್ ಆಕ್ಷನ್ ಕಟ್ ಹೇಳುತ್ತಿರುವ ಕಿಚ್ಚ ಸುದೀಪ್ ಅಭಿನಯಿಸುತ್ತಿರುವ 'ಕೋಟಿಗೊಬ್ಬ-2' ಚಿತ್ರದ ಬಗ್ಗೆ ಖಾಸ್ ಖಬರ್ ನೀಡುವುದರಲ್ಲಿ ನಿಮ್ಮ 'ಫಿಲ್ಮಿಬೀಟ್ ಕನ್ನಡ' ಎಂದೂ ಹಿಂದೆ ಬಿದ್ದಿಲ್ಲ.

ಈ ಬಾರಿ 'ಕೋಟಿಗೊಬ್ಬ-2' ಚಿತ್ರತಂಡದಿಂದ ಎಕ್ಸ್ ಕ್ಲೂಸಿವ್ ಸುದ್ದಿ ಹೊತ್ತು ತರುವ ಬದಲು, ಅದೇ ಚಿತ್ರದ ಬಗ್ಗೆ, ಅದರಲ್ಲೂ ಕಿಚ್ಚ ಸುದೀಪ್ ರವರಿಗೆ ನೀಡಿರುವ 'ಅನ್ನದಾತರ ಅನ್ನದಾತ' ಬಿರುದು ಬಗ್ಗೆ ಕನ್ನಡ ಸಿನಿ ಪ್ರಿಯರು, ಕನ್ನಡದ ಮಣ್ಣಿನ ಮಕ್ಕಳು ಹಾಗೂ ಸುದೀಪ್ ಅಪ್ಪಟ ಭಕ್ತರ ನಡುವೆ ಫೇಸ್ ಬುಕ್ ನಲ್ಲಿ ನಡೆಯುತ್ತಿರುವ ಘೋರ ಸಮರದ ಸಣ್ಣ ಝಲಕ್ ನಿಮ್ಮ ಮುಂದೆ ಇಡ್ತಿದ್ದೀವಿ.['ಅನ್ನದಾತರ ಅನ್ನದಾತ' ಅಂತೆ ಕಿಚ್ಚ ಸುದೀಪ್.!]

ಕಳೆದ ವರ್ಷ ಅಭಿನಯ ಚಕ್ರವರ್ತಿ ಸುದೀಪ್ ಹುಟ್ಟುಹಬ್ಬದಂದು ಬಿಡುಗಡೆ ಆದ 'ಕೋಟಿಗೊಬ್ಬ-2' ಚಿತ್ರದ ಮೊದಲ ಟೀಸರ್ ನಲ್ಲಿ ಸುದೀಪ್ ಗೆ 'ಅನ್ನದಾತರ ಅನ್ನದಾತ' ಅಂತ ಚಿತ್ರತಂಡ ಬಿರುದು ನೀಡಿತ್ತು.[ಬರ್ತಡೆ ಬಾಯ್ ಕಿಚ್ಚ ಸುದೀಪ್ ಗೆ ಹೊಸ ಬಿರುದು]

ಆಗ, ಅದನ್ನ ಅಷ್ಟಾಗಿ ಗಮನಿಸದ ಮಣ್ಣಿನ ಮಕ್ಕಳು, ಇತ್ತೀಚೆಗಷ್ಟೇ ಬಿಡುಗಡೆ ಆದ 'ಕೋಟಿಗೊಬ್ಬ-2' ಪೋಸ್ಟರ್ ನಲ್ಲಿ ಸುದೀಪ್ ಗೆ ಕೊಟ್ಟಿರುವ 'ಅನ್ನದಾತರ ಅನ್ನದಾತ' ಬಿರುದು ನೋಡಿ ಫೇಸ್ ಬುಕ್ ನಲ್ಲಿ ಮಹಾ ಸಮರಕ್ಕೆ ನಾಂದಿ ಹಾಡಿದ್ದಾರೆ. ಮುಂದೆ ಓದಿ....

ಮೊದಲು ಪೋಸ್ಟರ್ ನೋಡಿ....

ಕೆಲ ದಿನಗಳ ಹಿಂದೆಯಷ್ಟೇ 'ಕೋಟಿಗೊಬ್ಬ-2' ಚಿತ್ರದ ನೂತನ ಪೋಸ್ಟರ್ ಬಿಡುಗಡೆ ಆಗಿತ್ತು. ಅದರಲ್ಲಿ 'ಅನ್ನದಾತರ ಅನ್ನದಾತ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-2' ಅಂತ ಇದೆ. ಅದನ್ನ ನೋಡಿ ಸಿಟ್ಟಿಗೆದ್ದ ಕೆಲವರು ಫೇಸ್ ಬುಕ್ ನಲ್ಲಿ ಸುದೀಪ್ ವಿರುದ್ಧ ಯುದ್ಧ ಶುರು ಮಾಡಿದ್ದಾರೆ. [ಕಿಚ್ಚನ ಬರ್ತ್ ಡೇ ಸ್ಪೆಷಲ್: ಫಸ್ಟ್ ಲುಕ್ ಟೀಸರ್ ಝಲಕ್]

'ಯಾವುದರಲ್ಲಿ ಹೊಡಿಬೇಕು.?!'

ಕಿಚ್ಚ ಸುದೀಪ್ ರವರಿಗೆ 'ಅನ್ನದಾತರ ಅನ್ನದಾತ' ಅಂತ ಬಿರುದು ಕೊಟ್ಟಿರುವ ಚಿತ್ರತಂಡವರಿಗೆ ಕನ್ನಡ ಸಿನಿ ಪ್ರಿಯರು ಕೇಳಿರುವ ಪ್ರಶ್ನೆ ಇದು.! [ನಿಮಗೆ ಗೊತ್ತಿಲ್ಲದ 'ನಲ್ಲ' ಸುದೀಪ್ ಇನ್ನೊಂದು ಮುಖ]

ಮಣ್ಣಿನ ಮಕ್ಕಳು ಪುಟಿದೆದ್ದರು.!

ರೈತರ ಪರ ನಿಂತ ಮಣ್ಣಿನ ಮಕ್ಕಳು ಸುದೀಪ್ ಗೆ ಕೊಟ್ಟಿರುವ ಬಿರುದು ವಿರುದ್ಧ ಫೇಸ್ ಬುಕ್ ನಲ್ಲಿ ಸಮರ ಸಾರುತ್ತಿರುವ ಪರಿ ಇದು.

'ವಿಷ್ಣುದಾದಾ ಹೆಸರು ಹಾಳು.?!'

'ಅನ್ನದಾತರ ಅನ್ನದಾತ' ಅಂತ ಬಿರುದು ನೀಡಿರುವ ಚಿತ್ರತಂಡದವರು ರೈತರಿಗೆ ಕ್ಷಮೆ ಕೇಳುವವರೆಗೂ ಬಿಡಬಾರದು ಅಂತ ಕೆಲವರು ಒತ್ತಾಯ ಮಾಡಿದ್ರೆ, ಇನ್ನೂ ಕೆಲವರು 'ಕೋಟಿಗೊಬ್ಬ-2' ಚಿತ್ರ ಮಾಡುವ ಮೂಲಕ ವಿಷ್ಣುದಾದಾ ಹೆಸರು ಹಾಳು ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ವೈಯುಕ್ತಿಕ ಜೀವನ ಬಗ್ಗೆ ಕಾಮೆಂಟ್.!

ಸುದೀಪ್ ವೈಯುಕ್ತಿಕ ಜೀವನದ ಬಗ್ಗೆ ಕೂಡ ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.

ಫೇಸ್ ಬುಕ್ ನಲ್ಲಿ ವಾರ್ ಶುರು.!

ಇಂತಹ ಕಾಮೆಂಟ್ ಗಳು ಹೆಚ್ಚಾಗ್ತಿದ್ದಂತೆ, ಅಲರ್ಟ್ ಆದ ಸುದೀಪ್ ಅಭಿಮಾನಿಗಳು ಸುದೀಪ್ ಪರ ಬ್ಯಾಟಿಂಗ್ ಆರಂಭಿಸಿದ್ದಾರೆ.

ಚಾಟಿ ಬೀಸಿದ ಸುದೀಪ್ ಭಕ್ತರು.!

'ಅನ್ನದಾತರ ಅನ್ನದಾತ' ಸುದೀಪ್ ವಿರುದ್ಧ ದನಿ ಎತ್ತಿದ ಕನ್ನಡ ಕಣ್ಮಣಿಗಳಿಗೆ ಸುದೀಪ್ ಅಪ್ಪಟ ಭಕ್ತರು ಚಾಟಿ ಬೀಸಿದ್ದಾರೆ.

ಲಿಮಿಟ್ ಇರಬೇಕು.!

ಅಭಿಮಾನ ಇರಬೇಕು ಆದ್ರೆ, ಹುಚ್ಚು ಅಭಿಮಾನ ಇರಬಾರದು ಅನ್ನೋದು ಕನ್ನಡ ಸಿನಿಪ್ರಿಯರ ಅಭಿಪ್ರಾಯ.

ಧೈರ್ಯ ಮೆಚ್ಚಬೇಕು.!

ಸುದೀಪ್ ಗೆ ನೀಡಿರುವ ಬಿರುದು ಬಗ್ಗೆ ದನಿ ಎತ್ತಿದವರ ಧೈರ್ಯವನ್ನ ಕೆಲವರು ಕೊಂಡಾಡಿದ್ದಾರೆ.

ನಿರ್ಮಾಪಕರು ಅನ್ನದಾತರು!

ನಿರ್ಮಾಪಕರು ಅನ್ನದಾತರು ಅಂತಾದರೆ ಒಪ್ಪಿಕೊಳ್ಳೋಣ. ಆದ್ರೆ, ಅನ್ನದಾತರ ಅನ್ನದಾತ ಅಂತಾದರೆ ಅಲ್ಲ ಅಂತ ಸ್ಪಷ್ಟನೆ ಕೂಡ ಸಿಕ್ಕಿದೆ.

ರೈತರಿಗೆ ಸರಿ ಸಮಾನರು ಯಾರೂ ಇಲ್ಲ.!

ರೈತರಿಗೆ ಯಾರೂ ಸರಿಸಾಟಿ ಇಲ್ಲ ಅನ್ನೋದು ಅನೇಕರಿಂದ ವ್ಯಕ್ತವಾಗಿರುವ ಅಭಿಪ್ರಾಯ.

ರೈತರಿಗೆ ಧೈರ್ಯ ಹೇಳೋಕೆ ಯಾರೂ ಬರಲ್ಲ.!

ಸಾಲದಿಂದಾಗಿ ರೈತರು ಸಾಯುವಾಗ, ಅವರಿಗೆ ಧೈರ್ಯ ಹೇಳೋಕೆ ಯಾವ ಹೀರೋಗಳೂ ಬರಲ್ಲ ಅಂತ ಕೆಲವರು ಕಾಮೆಂಟ್ ಮಾಡಿದ್ದಾರೆ.

ವಾದ-ವಿವಾದ-ವಾಗ್ವಾದ.!

ಹೇಳುತ್ತಾ ಹೋದರೆ, ಮುಗಿಯಲ್ಲ. ಈ ವಿಚಾರವಾಗಿ ಫೇಸ್ ಬುಕ್ ನಲ್ಲಿ ವಾದ-ವಿವಾದ-ವಾಗ್ವಾದ ನಡೆಯುತ್ತಲೇ ಇದೆ.

ಸೈನಿಕರೇ ಹೀರೋಗಳು.!

ಇನ್ನೂ ಕೆಲವರು ಸೈನಿಕರೇ ನಿಜವಾದ ಹೀರೋಗಳು ಎಂದಿದ್ದಾರೆ.

ರೈತರಿಗೆ ಸುದೀಪ್ ಏನು ಮಾಡಿದ್ದಾರೆ?

ರೈತರಿಗೆ ಸುದೀಪ್ ಏನು ಒಳಿತು ಮಾಡಿದ್ದಾರೆ ಎಂಬ ಪ್ರಶ್ನೆ ಎದ್ದಿದೆ.

ಗೆದ್ದವರು ಯಾರು? ಸೋತವರು ಯಾರು?

'ಅನ್ನದಾತರ ಅನ್ನದಾತ' ವಾಕ್ಸಮರ ಇನ್ನೂ ನಿಂತಿಲ್ಲ. ಫೇಸ್ ಬುಕ್ ನಲ್ಲಿ ಕಾಡ್ಗಿಚ್ಚು ಎಬ್ಬಿಸಿದೆ. ಅದು ಎಲ್ಲಿವರೆಗೂ ಹೋಗಿ ತಲುಪುತ್ತೋ ಕಾದು ನೋಡ್ಬೇಕು.!

English summary
A new title for Kannada Actor Sudeep 'Annadatara Annadata' have created a topic of debate in Facebook. Most of them are annoyed with this title for Sudeep.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada