»   » ಅನೂಪ್ ಸೀಳಿನ್ ಹೃದಯದ ಅರಸಿಯಾದ ತಾರೆ ಕೃತಿ

ಅನೂಪ್ ಸೀಳಿನ್ ಹೃದಯದ ಅರಸಿಯಾದ ತಾರೆ ಕೃತಿ

Posted By:
Subscribe to Filmibeat Kannada

ಹಾಸನ ಮೂಲದ ಸಂಗೀತ ನಿರ್ದೇಶಕ ಹಾಗೂ ಗಾಯಕ ಅನೂಪ್ ಸೀಳಿನ್ ಗೃಹಸ್ಥಾಶ್ರಮಕ್ಕೆ ಅಡಿಯಿಟ್ಟಿದ್ದಾರೆ. ತಮಿಳು ಚಿತ್ರಗಳ ತಾರೆ ಹಾಗೂ ಭರತನಾಟ್ಯ ಕಲಾವಿದೆ ಕೃತಿ ಈಗವರ ಅವರ ಹೃದಯದ ಅರಸಿ. ಇದೇ ಅಕ್ಟೋಬರ್ 22ರಂದು ಇವರಿಬ್ಬರ ಮದುವೆ ಬೆಂಗಳೂರಿನಲ್ಲಿ ನೆರವೇರಿತು.

ಬೆಳ್ಳಿತೆರೆಯಲ್ಲಿ ಕೃತಿ ಅವರು ಅದ್ವೈತ ಎಂದೇ ಚಿರಪರಿಚಿತರು. ತಮಿಳಿನ 'ಅಳಗರಸ್ವಾಮಿಯಿನ್ ಕುದಿರೈ' ಹಾಗೂ 'ಕೊಂಡುತಾನ್ ಕೊಡುತಾನ್' ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಬೆಂಗಳೂರು ವಿಜಯನಗರದಲ್ಲಿ ಇವರಿಬ್ಬರ ಮದುವೆ ನೆರವೇರಿತು.

ಹೊಸ ಬಾಳಿನ ಹೊಸಿಲಲಿ ಹೊಸ ಜೋಡಿ

ಕಿಚ್ಚ ಸುದೀಪ್ ಹಾಗೂ ಮಮತಾ ಮೋಹನ್ ದಾಸ್ ಜೋಡಿಯ 'ಗೂಳಿ' ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿ ಕನ್ನಡ ಚಿತ್ರರಂಗದಲ್ಲಿ ಅನೂಪ್ ಸೀಳಿನ್ ಪರಿಚಿತರಾಗಿದ್ದರು. ಬಳಿಕ ಅವರ ಸಂಗೀತ ನಿರ್ದೇಶನದ ಹತ್ತಾರು ಚಿತ್ರಗಳ ಹಾಡುಗಳು ಹಿಟ್ ಆಗಿವೆ.

ಸಪ್ತಪದಿ ಇದು ಏಳುಜನ್ಮಗಳ ಅನುಬಂಧ

ಎದ್ದೇಳು ಮಂಜುನಾಥ, ಪ್ರೀತ್ಸೆ ಪ್ರೀತ್ಸೆ, ಐ ಯಾಮ್ ಸಾರಿ ಮತ್ತೆ ಬನ್ನಿ ಪ್ರೀತ್ಸೋಣ, ಮನಸಾಲಜಿ, ಗಲ್ಲ ಸಿದ್ಲಿಂಗು, ಪ್ರೇಮಗಾಮಿ ಹಾಗೂ ಜನ್ಮ ಚಿತ್ರಗಳಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸಿದರು.

ಏಳೇಳು ಜನುಮಗಳು ತೀರದ ಸಂಬಂಧ

ಕೆ.ಎಂ.ಚೈತನ್ಯ ನಿರ್ದೇಶಿಸುತ್ತಿರುವ 'ಪರಾರಿ' ಚಿತ್ರಕ್ಕೂ ಸಂಗೀತ ಸಂಯೋಜಿಸುತ್ತಿದ್ದಾರೆ ಅನೂಪ್. ಮಾಜಿ ನ್ಯಾಯಮೂರ್ತಿ ಹಾಗೂ ಕನ್ನಡದ ಬರಹಗಾರ ಕೋ.ಚನ್ನಬಸಪ್ಪ ಅವರ ಹತ್ತಿರದ ಸಂಬಂಧಿಕರು ಅನೂಪ್ ಸೀಳಿನ್.

ಸಂಸಾರದ ಸರಿಗಮಕ್ಕೆ ಸ್ವರಸಂಯೋಜನೆ

ಕೃತಿ ಅವರು ಕನ್ನಡದ 'ಸರಿಗಮಪ' ಎಂಬ ಚಿತ್ರಕ್ಕೂ ಸಹಿಹಾಕಿದ್ದರು. ಆದರೆ ಕಾರಣಾಂತರಗಳಿಂದ ಅವರು ಚಿತ್ರವನ್ನು ಮಧ್ಯದಲ್ಲೇ ಕೈಬಿಟ್ಟಿದ್ದರು. ಹೊಸ ಬಾಳಿನ ಹೊಸಿಲಲಿ ನಿಂತಿರುವ ಹೊಸ ಜೋಡಿಗೆ ಶುಭವಾಗಲಿ ಎಂದು ಹಾರೈಸೋಣ.

ಯಶಸ್ವಿಯಾಗಿ ಸಾಗಲಿ ಜೀವನ ಜೋಕಾಲಿ

ಸದ್ಯಕ್ಕೆ ಅನೂಪ್ ಸೀಳಿನ್ ಅವರು ಗುರು ಪ್ರಸಾದ್ ಅವರ ಡೈರೆಕ್ಟರ್ಸ್ ಸ್ಪೆಷಲ್, B3, ಮದರಂಗಿ, ನೀರ್ ದೋಸೆ ಚಿತ್ರಗಳಿಗೆ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ.


ಅಕ್ಟೋಬರ್ 22ರಂದು ಸಂಜೆ 7.30ಕ್ಕೆ ನಡೆದ ಆರತಕ್ಷತೆ ಕಾರ್ಯಕ್ರಮದ ಕೆಲ ಚಿತ್ರಗಳು ಇಲ್ಲಿವೆ. ಇವರಿಬ್ಬರ ಮದುವೆಗೆ ಕನ್ನಡ ಚಿತ್ರೋದ್ಯಮದ ಹಲವಾರು ಗಣ್ಯರು ಆಗಮಿಸಿ ಶುಭಕೋರಿದರು. 'ನಾದಬ್ರಹ್ಮ' ಹಂಸಲೇಖ ಅವರ ಗರಡಿಯಲ್ಲಿ ಪಳಗಿದವರು ಅನೂಪ್ ಸೀಳಿನ್.

"ಯಾರೋ ಯಾರೋ ನನ್ನವಳು ಯಾರೋ" (ಚಿತ್ರ 'ಒಂದಾಗೋಣ ಬಾ') ಮೂಲಕ ಗಾಯಕರಾಗಿ ಅನೂಪ್ ಪರಿಚಿತರಾದರು. ಅದಾದ ಬಳಿಕ ಅವರು ಮದನ, ಧರ್ಮ, ನೆನಪಿರಲಿ, ಸಿಕ್ಸರ್, ತಬ್ಬಲಿ ಚಿತ್ರಗಳಲ್ಲಿ ಹಾಡಿದರು. ಒಟ್ಟು 6 ವರ್ಷಗಳ ಕಾಲ ಹಂಸಲೇಖ ಅವರ ಬಳಿ ಕೆಲಸ ಮಾಡಿ ಬಳಿಕ ಸ್ವತಂತ್ರವಾಗಿ ಹಾಡಲು ಆರಂಭಿಸಿದರು.

English summary
Kannada films music director and singer Anoop Seelin weds Tamil actress Kriti on 22nd October in Bangalore. Watch Anoop Seelin and Kirti Wedding Reception photos. Anoop has filmed movies such as Gooli, YeddeLu Manjunatha, Preethse Preethse, Yaksha, I Am Sorry Mathe Banni Preethsona, Manasology and Sidlingu.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada