twitter
    For Quick Alerts
    ALLOW NOTIFICATIONS  
    For Daily Alerts

    ಡಬ್ಬಿಂಗ್ ವಿರೋಧಿಗಳಿಗೆ ಸಾಮಾನ್ಯ ಪ್ರೇಕ್ಷಕನ ಪ್ರಶ್ನೆ

    By ಸಾಮಾನ್ಯ ಕನ್ನಡಿಗ ಪ್ರೇಕ್ಷಕ
    |

    ಬೇರೆಲ್ಲೂ ಇಲ್ಲದ ಡಬ್ಬಿಂಗ್ ನಿಷೇಧವನ್ನು ಅಸಂವಿಧಾನಿಕವಾಗಿ ಜಾರಿಗೆಗೊಳಿಸಿ ಕನ್ನಡದಲ್ಲಿ ಡಬ್ಬಿಂಗ್ ವಿರೋಧಿಸುವ ನೀವು ಕನ್ನಡದ ಮುಗ್ದ ಪ್ರೇಕ್ಷಕರನ್ನ ತನ್ನ ಮನೋರಂಜನೆನೆಗೆ ಬೇರೆ ಭಾಷೆಯನ್ನೂ ಅವಲಂಬಿಸಿವಂತೆ ಮಾಡುತ್ತಿರುವುದು ನೀವೇ ಅಲ್ಲವೇ!?. ಇನ್ನೆಲ್ಲಿ ಬಂತು ನಿಮ್ಮ ಕನ್ನಡ ಪ್ರೇಮ !?- ಸಾಮಾನ್ಯ ಪ್ರೇಕ್ಷಕ

    ನಮಗೆ ಡಬ್ಬಿಂಗ್ ಬೇಡ. ಅದಕ್ಕೂ ಮುಂಚೆ ಈ ಕೆಳಗಿನ ಅಂಶಗಳು ಜಾರಿಗೆ ಬರಲಿ... ಇದು ಸಾಧ್ಯವೇ ಯೋಚಿಸಿ. ಸಾಧ್ಯವಾಗುವುದೇ ಆದರೇ ನಮಗೆ ಡಬ್ಬಿಂಗ್ ಬೇಡ. ಇಲ್ಲದಿದರೆ ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್ ವಿರೋಧಿಸಿ ಚಿತ್ರೋದ್ಯಮ ಬಂದ್ ಮಾಡುವುದರಲ್ಲಿ ಅರ್ಥವಿಲ್ಲ ಎಂದಿದ್ದಾರೆ ಯುವ ಚಿತ್ರ ಸಾಹಿತಿ ಹೃದಯಶಿವ.[ಅವರ ಪ್ರಶ್ನೆಗಳು ಇಲ್ಲಿವೆ]

    ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್ ಭೂತ ಕಾಲಿಡದಂತೆ ಮೆಟ್ಟಿ ಹಾಕಲು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನೇತೃತ್ವದಲ್ಲಿ ಕನ್ನಡ ಚಿತ್ರರಂಗ ತೊಡೆ ತಟ್ಟಿ ನಿಂತು, ಡಬ್ಬಿಂಗ್ ವಿರೋಧಿಸಿ ಸೋಮವಾರ(ಜ.27) ದಂದು ಬೃಹತ್ ಮೆರಣಿಗೆ ಹಾಗೂ ಪ್ರತಿಭಟನೆಯನ್ನು ಯಶಸ್ವಿಗೊಳಿಸಿದ ಉತ್ಸಾಹದಲ್ಲಿದ್ದಾರೆ. [ಗ್ಯಾಲರಿ ನೋಡಿ]

    ಕನ್ನಡ ಚಿತ್ರರಂಗದ ಕಲಾವಿದರ ಸಂಘ, ಕನ್ನಡ ಪರ ಸಂಘಟನೆಗಳು ಕರೆದಿರುವ ಚಿತ್ರೋದ್ಯಮ ಬಂದ್ ಗೆ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಬೆಂಬಲ ಸಿಕ್ಕಿರಲಿಲ್ಲ. ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ದ್ವಾರಕೀಶ್, ಪವನ್ ಕುಮಾರ್ ಸೇರಿದಂತೆ ಹಲವಾರು ಚಿತ್ರಕರ್ಮಿಗಳು ಬಂದ್ ವಿರೋಧಿಸಿ, ಡಬ್ಬಿಂಗ್ ಪರ ಮಾತನಾಡಿದ್ದಾರೆ. ಈ ನಡುವೆ ಸಾಮಾನ್ಯ ಪ್ರೇಕ್ಷಕ ಕೇಳಿರುವ ಪ್ರಶ್ನೆಗಳು ಫೇಸ್ ಬುಕ್ ಪುಟದಲ್ಲಿ ಕಂಡು ಬಂದಿದ್ದು ಇಲ್ಲಿ ನೀಡಲಾಗಿದೆ...

    ಡಬ್ಬಿಂಗ್ ವಿರೋಧಿಗಳಿಗೆ ಕನ್ನಡ ಪ್ರೇಕ್ಷಕನ ಪ್ರಶ್ನೆಗಳು

    ಡಬ್ಬಿಂಗ್ ವಿರೋಧಿಗಳಿಗೆ ಕನ್ನಡ ಪ್ರೇಕ್ಷಕನ ಪ್ರಶ್ನೆಗಳು

    • ಬೇರೆ ಭಾಷೆ ಚಿತ್ರಗಳನ್ನು ರಿಮೇಕ್ ಮಾಡುವ ನಿಮಗೆ ಅದೇ ಚಿತ್ರಗಳನ್ನ ಡಬ್ ಮಾಡಿದ್ರೆ ಯಾಕೆ ವಿರೋಧಿಸುತ್ತೀರ.!? ಇದು ಸ್ವಾರ್ಥದ ಪರಮಾವಧಿಯಲ್ಲವೇ !? ಇನ್ನೆಲಿ ಬಂತು ನಿಮ್ಮ ಸೃಜನಶೀಲತೆ !?

    • ಹಲವಾರು ಕನ್ನಡ ಚಿಂತಕರು, ಪ್ರೇಕ್ಷಕರು,ಸಾಹಿತಿಗಳು, ಹೋರಾಟಗಾರರ ಅಭಿಲಾಶೆಯಂತೆ ಡಬ್ಬಿಂಗ್ ಬಂದಿದ್ದರೆ ಕನ್ನಡ ಇನ್ನಷ್ಟು ಬೆಳೆಯುತ್ತಿತ್ತು ,ಕನ್ನಡ ಪ್ರೇಕ್ಷಕ,ಮಕ್ಕಳು ಕನ್ನಡ ಭಾಷೆಗೆ ಹತ್ತಿರವಾಗುತ್ತಿದ್ದರು ಮತ್ತು ಎಲ್ಲಾ ಮನರಂಜನೆಯು ಕನ್ನಡೀಕರಣಗೊಳ್ಳುತ್ತಿತ್ತು.

    ಸಂಸ್ಕೃತಿ, ಸೃಜನಶೀಲತೆ ಮತ್ತು ಸಂಪ್ರದಾಯ ನಾಶ?

    ಸಂಸ್ಕೃತಿ, ಸೃಜನಶೀಲತೆ ಮತ್ತು ಸಂಪ್ರದಾಯ ನಾಶ?

    • ಡಬ್ಬಿಂಗ್ ಬಂದರೆ ಸಂಸ್ಕೃತಿ, ಸೃಜನಶೀಲತೆ ಮತ್ತು ಸಂಪ್ರದಾಯ ನಾಶವಗುತ್ತೆ ಅನ್ನುವ ಹೇಳಿಕೆ ಕೊಟ್ಟ ಎಲ್ಲಾ ನಟಿಮಣಿಗಳು ತಮ್ಮ ಅರೆಬರೆ ದೇಹಸಿರಿಯನ್ನು ಪ್ರದರ್ಶಿದವರೆ !. ಇನ್ನೆಲಿ ಬಂತು ನಿಮ್ಮ ಸಂಪ್ರದಾಯ & ಸಂಸ್ಕೃತಿ!?

    • ಡಬ್ಬಿಂಗ್ ತಡೆಯುವುದಕ್ಕಾಗಿ ಪ್ರಾಣ ಕೊಡ್ತೀನಿ,ತ್ಯಾಗ ಮಾಡುತ್ತೀನಿ ಅನ್ನುವ ನೀವು ಕಾವೇರಿ,ಕೃಷ್ಣಾ ವಿವಾದದಲ್ಲಿ,ಸಂಭಾಜಿ ಪಾಟೀಲನ ಕನ್ನಡಿಗರ ಶವಯಾತ್ರೆ ಮಾಡುವ ವಿಚಾರದಲ್ಲಿ,ಉತ್ತರ ಭಾರತದಲ್ಲಿ ಕನ್ನಡಿಗರಿಗೆ ಅವಕಾಶ ಕೊಡಬೇಡಿ ಎಂದ ನಿತ್ಯಾನಂದನ ವಿಚಾರದಲ್ಲಿ,ಇನ್ನು ಹತ್ತು ಹಲವು ಕನ್ನಡ/ಕರ್ನಾಟಕ ವಿರೋಧಿ ವಿಚಾರದಲ್ಲಿ ಎಲ್ಲಿ ಹೋಗಿತ್ತು ನಿಮ್ಮ "ಪುರುಷತ್ವ" !?

    ಕನ್ನಡವನ್ನು ಕಾಪಾಡುವ ನಿಮ್ಮ ಕಾಳಜಿ !?

    ಕನ್ನಡವನ್ನು ಕಾಪಾಡುವ ನಿಮ್ಮ ಕಾಳಜಿ !?

    • ಕನ್ನಡದ ಮಕ್ಕಳನ್ನು ಈಗಾಗಲೇ ಮಕ್ಕಳಿಗಿರುವ ಪರಭಾಷಾ ಚಾನೆಲ್ ಗಳಿಗೆ (ವಾಹಿನಿಗಳಿಗೆ) ಮೊರೆಹೊಗುವಂತೆ ಮಾಡಿ ಕನ್ನಡದ ಮಕ್ಕಳನ್ನು ತಾಯ್ನುಡಿಯಿಂದ ಬೇರ್ಪಡಿಸುತ್ತಿರುವ ನಿಮಗೆ ಪಾಪ ಪುಣ್ಯವಿಲ್ಲವೆ?. ಇನ್ನೆಲಿ ಬಂತು ಕನ್ನಡವನ್ನು ಕಾಪಾಡುವ ನಿಮ್ಮ ಕಾಳಜಿ !?

    • ಡಬ್ಬಿಂಗ್ ನಿಂದ ಕನ್ನಡ ಮನೋರಂಜನೆಯನ್ನು ಕನ್ನಡೀಕರಣಗೊಳಿಸಬಹುದು ಎಂದು ಮಾತನಾಡಿದ ಸಾಹಿತಿಗಳ ಬಗ್ಗೆ ಅವಹೇಳನಕರವಾಗಿ ಮಾತನಾಡುವ ಮತ್ತು ಡಬ್ಬಿಂಗ್ ಪರವಿರುವ ನಿರ್ದೇಶಕ, ನಿರ್ಮಾಪಕರ ಗಂಡಸತ್ವವನ್ನು ಪ್ರಶ್ನಿಸುವ ನೀವು ಬೌದ್ಧಿಕವಾಗಿ ಮತ್ತು ನೈತಿಕವಾಗಿ ದಿವಾಳಿಯಾಗಿದ್ದೀರಿ.

    ಯಾವುದು ಸ್ವಾರ್ಥ ,ಯಾವುದು ಜನಪರ ಅಂತ

    ಯಾವುದು ಸ್ವಾರ್ಥ ,ಯಾವುದು ಜನಪರ ಅಂತ

    • ಕನ್ನಡಿಗರು ತಾಯ್ನುಡಿ ಕನ್ನಡದಲ್ಲಿ ಮನೋರಂಜನೆ ಪಡೆದುಕೊಳ್ಳಲು ಇರುವ ಡಬ್ಬಿಂಗ್ಅನ್ನು ವಿರೋಧಿಸುವ ನೀವು ಯಾವ ದೊಣ್ಣೆನಾಯಕರು !? ಈಗಾಗಲೇ ನೀವು ಒಂದು ನ್ಯಾಯ ಸಂಸ್ಥೆಯಿಂದ(ಸಿ ಸಿ ಐ) ಹೊಡೆತ ತಿಂದಿದ್ದೀರಿ.

    • ನಮ್ಮಂತಹ ಸಾಮಾನ್ಯ ಕನ್ನಡ ಪ್ರೇಕ್ಷಕ/ವೀಕ್ಷಕ ಡಬ್ಬಿಂಗ್ ಪರವಾಗಿ "ಸುಪ್ರೀಂ ಕೋರ್ಟ್' ಅಥವಾ "ಹೈ ಕೋರ್ಟ್" ಮೊರೆಹೋದಲ್ಲಿ ಇದರಿಂದ ಆಗುವ ಆಗುವ ಘಟನೆಗಳ ಬಗ್ಗೆ "ಕನ್ನಡ ಚಿತ್ರರಂಗ" ಕ್ಕೆ ಅರಿವಿದೆಯೇ ? ಆಗ ಸಾಮಾನ್ಯ ಕನ್ನಡ ಪ್ರೇಕ್ಷಕ/ವೀಕ್ಷಕರ ಪರ ತೀರ್ಪು ಬಂದಲ್ಲಿ ನಿಮಗೆ ಗೊತ್ತಾಗುತ್ತೆ ಯಾವುದು ಸ್ವಾರ್ಥ ,ಯಾವುದು ಜನಪರ ಅಂತ !

    ಬೇರೆ ಭಾಷೆಗೆ ಮಾರುಹೊಗುವುದು ಸಹಜ

    ಬೇರೆ ಭಾಷೆಗೆ ಮಾರುಹೊಗುವುದು ಸಹಜ

    • ತಾಯ್ನುಡಿಯಲ್ಲಿ ಮನೋರಂಜನೆ ಸಿಗದಾಗ ಬೇರೆ ಭಾಷೆಯ ಮನೋರಂಜನೆಗೆ ಮಾರುಹೊಗುವುದು ಸಹಜ. ಈ ಬೆಳವಣಿಗೆ ಇನ್ನೊಂದು ಭಾಷೆಯ ಚಿತ್ರರಂಗಕ್ಕೆ,ಆ ಭಾಷೆಯ ಬೆಳವಣಿಗೆಗೆ ಮತ್ತು ಪರಭಾಷಿಕರಿಗೆ ಕರ್ನಾಟಕದಲ್ಲಿ ಮಣೆಹಾಕಿ ಕೂರಿಸಿಕೊಂಡಂತೆಯೆ. ಇನ್ನೆಲ್ಲಿ ಬಂತು ನಿಮ್ಮ ಕನ್ನಡ/ಕರ್ನಾಟಕ ಕಾಪಾಡುವ "ಪುರುಷತ್ವ"

    • ಪ್ರಜಾಸತ್ತಾತ್ಮಕವಾಗಿ ತಾಯ್ನುಡಿ ಕನ್ನಡದಲ್ಲಿ ಮನೋರಂಜನೆ ಪಡೆಯುವುದಕ್ಕೆ ಪ್ರತಿಯೊಬ್ಬ ಕನ್ನಡಿಗರಿಗೆ ಹಕ್ಕಿದೆ. ಡಬ್ಬಿಂಗ್ ವಿರೋಧಿಸಿ ಕನ್ನಡಿಗನ ಮನೋರಂಜನ ಹಕ್ಕನ್ನು ಕಿತ್ತುಕೊಳ್ಳುತ್ತಿರುವ ನೀವು ಸಂವಿಧಾನ,ಪ್ರಜಾಪ್ರಭುತ್ವಕ್ಕಿಂತ ದೊಡ್ಡವರಲ್ಲ .

    ಮೊದಲು ಬೇರೆ ಭಾಷೆಯ ಚಿತ್ರಗಳ ಬಿಡುಗಡೆ ತಡೆಗಟ್ಟಿ

    ಮೊದಲು ಬೇರೆ ಭಾಷೆಯ ಚಿತ್ರಗಳ ಬಿಡುಗಡೆ ತಡೆಗಟ್ಟಿ

    • ಬೇರೆ ಭಾಷೆಯ ಚಿತ್ರಗಳು ಕರ್ನಾಟಕದಲ್ಲಿ ಅಂಕುಶವಿಲ್ಲದೆ ಬಿಡುಗಡೆಯಾಗುತ್ತಿರುವಾಗ ಬೀದಿಗೆ ಬೀಳದ ಕಲಾವಿದರು "ಅದೇ ಚಿತ್ರಗಳನ್ನು ಕನ್ನಡದಲ್ಲಿ ಡಬ್ ಆಗಿ ಬಿಡುಗಡೆಯಾದರೆ ಕಲಾವಿದರು ಹೇಗೆ ಬೀದಿಗೆ ಬೀಳುತ್ತಾರೆ !?" ಬೀದಿಗೆ ಬೀಳುತ್ತಾರೆ ಅನ್ನುವುದು ಶುದ್ಧ ಪೊಳ್ಳುವಾದ.

    • 2 ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆ ಮತ್ತು ಕನ್ನಡಿಗ ಪ್ರೇಕ್ಷಕನಿಂದ ಕನ್ನಡ ಚಿತ್ರರಂಗ ಹುಟ್ಟಿಕೊಂಡಿತೆ ಹೊರತು ಕನ್ನಡ ಚಿತ್ರರಂಗದಿಂದ ಏನು ಕನ್ನಡ ಭಾಷೆ,ಕನ್ನಡ ಸಂಸ್ಕೃತಿ ಮತ್ತು ಕನ್ನಡಿಗ ಪ್ರೇಕ್ಷಕ ಹುಟ್ಟಿಕೊಂಡಿಲ್ಲ. ಒಬ್ಬ ಸಾಮಾನ್ಯ ಕನ್ನಡ ಪ್ರೇಕ್ಷಕನಿಗೆ ಏನು ನೋಡಬೇಕು/ಬೇಡ ಎಂದು ನಿರ್ಧರಿಸುವ ಹಕ್ಕನ್ನು ನಿಮಗೆ ಕೊಟ್ಟವರು ಯಾರು?

    ಒಬ್ಬ ಸಾಮಾನ್ಯ ಕನ್ನಡಿಗನ ಮನೋರಂಜನೆ ತಣಿಸಲು

    ಒಬ್ಬ ಸಾಮಾನ್ಯ ಕನ್ನಡಿಗನ ಮನೋರಂಜನೆ ತಣಿಸಲು

    • ಈಗೀಗ ಒಳ್ಳೆಯ ಕನ್ನಡ ಚಿತ್ರಗಳು & ಕಿರುತೆರೆ ಕಾರ್ಯಕ್ರಮಗಳು ಬರುತ್ತಿರುವುದು ಸ್ವಾಗತಾರ್ಹ ಮತ್ತು ಪ್ರಶಂಸನೀಯ ಅದರೆ "ಬೇರೆ ಭಾಷಿಕರು ಪ್ರಪಂಚದ ಎಲ್ಲ ಮನೋರಂಜನೆಗಳನ್ನು ತಮ್ಮ ತಮ್ಮ ಭಾಷೆಯಲ್ಲಿ ನೋಡುತ್ತಿರುವಾಗ" ಕೇವಲ 4-5 ಒಳ್ಳೆಯ ಚಿತ್ರಗಳು & ಕಾರ್ಯಕ್ರಮಗಳು ಸಾಕೆ ಒಬ್ಬ ಸಾಮಾನ್ಯ ಕನ್ನಡಿಗನ ಮನೋರಂಜನೆ ತಣಿಸಲು !??

    • ಡಬ್ಬಿಂಗ್ ಅನ್ನು ಬೆಂಬಲಿಸಿ ಎಲ್ಲವನ್ನು ಕನ್ನಡೀಕರಣಗೊಳಿಸುವಲ್ಲಿ ಹೋರಾಡುತ್ತಿರುವ ನೂರಾರು ಜನರು ಹತ್ತಾರು ವರ್ಷಗಳಿಂದ ಕನ್ನಡ/ಕರ್ನಾಟಕ/ಕನ್ನಡಿಗ ಚಿಂತನೆಗಳನ್ನು,ಹೋರಾಟಗಳನ್ನು ಮಾಡುತ್ತಾ ಬಂದಿದ್ದಾರೆ. ಹಾಗಾದ್ರೆ ಏಕೆ ಅವರು ತಮ್ಮ ದೈನಂದಿನ ಜೀವನವನ್ನು ಬದಿಗಿಟ್ಟು ಕನ್ನಡಕ್ಕೆ ಹೋರಾಡುತ್ತಿದ್ದಾರೆ? ಏಕೆಂದರೆ ನಿಜವಾಗಿಯೂ ಕನ್ನಡ/ಕರ್ನಾಟಕ ಚಿಂತನೆಗಳನ್ನು,ಹೋರಾಟಗಳನ್ನು ಮಾಡುವವನು ಯಾವತ್ತು ಡಬ್ಬಿಂಗ್ ಗೆ ಬೆಂಬಲಿಸುತ್ತಾನೆ.

    ಕನ್ನಡ ರಾಜವಂಶಗಳ ಬಗ್ಗೆ ಅರಿವಿದೆಯೇ !?

    ಕನ್ನಡ ರಾಜವಂಶಗಳ ಬಗ್ಗೆ ಅರಿವಿದೆಯೇ !?

    • ಡಬ್ಬಿಂಗ್ ವಿರೋಧಿಗಳಿಗೆ ಕನ್ನಡ ಭಾಷೆಯ ಗಾತ್ರ, ಕರ್ನಾಟಕ/ಕನ್ನಡ/ಕನ್ನಡಿಗರ ಇತಿಹಾಸ, ಕರ್ನಾಟಕದ ಉದ್ದಗಲ(ಭೂಗೋಳ), ಕನ್ನಡ ಸಾಹಿತ್ಯ & ಸುವರ್ಣಯುಗ ಮೆರೆದ ಕನ್ನಡ ರಾಜವಂಶಗಳ ಬಗ್ಗೆ ಅರಿವಿದೆಯೇ !?.. ಇವುಗಳನ್ನು ಅರಿತವನು ಯಾರು ಡಬ್ಬಿಂಗ್ ಅನ್ನು ವಿರೋಧಿಸಲಾರ .

    • ತಮಿಳು,ತೆಲುಗು,ಹಿಂದಿ ಜನರು ತಮ್ಮ ತಮ್ಮ ಭಾಷೆಯಲ್ಲಿ ತಯಾರಾದ ಕಿರುತೆರೆ ಕಾರ್ಯಕ್ರಮಗಳು,ಸಿನೆಮಾಗಳ ಸವಿರುಚಿಯನ್ನು ಸವಿಯುವುದರ ಜೊತೆಗೆ ಜಗತ್ತಿನ ಹತ್ತು ಹಲವು ಕಾರ್ಯಕ್ರಮಗಳನ್ನು,ಸಿನೆಮಾಗಳನ್ನು,ಚಾನೆಲ್ಗಳನ್ನು ತಮ್ಮ ಭಾಷೆಗೆ ಅನುವಾದಿಸಿಕೊಂಡು (ಡಬ್ಬಿಂಗ್) ಮೃಷ್ಟಾನ್ನ ಭೋಜನವನ್ನು ಮಾಡುತ್ತಿದ್ದಾರೆ .. ಹಾಗಾದರೆ ಯಾಕೆ ಅಲ್ಲಿಯ ಕಿರುತೆರೆ & ಹಿರಿತೆರೆ ಮಂದಿ ಇನ್ನು ಬೀದಿಗೆ ಬಿದ್ದಿಲ್ಲ !!.. ಹಾಗಾದರೆ ಅವರಂತೆ 'ಮೃಷ್ಟಾನ ಬೋಜನ ಸವಿಯಲು' ನಮ್ಮ ಕನ್ನಡದ ಮಕ್ಕಳು,ಜನರು ಏನು ಪಾಪ ಮಾಡಿದ್ದಾರೆ !?. ನಿಮ್ಮ ಸ್ವಾರ್ಥಕ್ಕಾಗಿ ಕನ್ನಡಿಗರನ್ನು ಬೇರೆ ಭಾಷೆಗೆ ಅವಲಂಬಿಸುವಂತೆ ಮಾಡ ಬೇಡಿ ಪಾಪಿಗಳೇ!?

    ಪ್ರಜಾಪ್ರಭುತ್ವ ವಿರೋಧಿ ಚಟುವಟಿಕೆ

    ಪ್ರಜಾಪ್ರಭುತ್ವ ವಿರೋಧಿ ಚಟುವಟಿಕೆ

    • ಒಬ್ಬ ಸಾಮಾನ್ಯ ಕನ್ನಡಿಗನ ಮನೋರಂಜನಾ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬುದ್ಧಿಗೇಡಿ ಬುದ್ಧಿಜೀವಿಗಳು( ಗೂಂಡಾಗಳು!?) ನಿರ್ಧರಿಸುತ್ತಿರುವುದು ಪ್ರಜಾಪ್ರಭುತ್ವ ವಿರೋಧಿ ಚಟುವಟಿಕೆ .

    • ಕೊನೆಯದಾಗಿ ಒಬ್ಬ ಸಾಮಾನ್ಯ ಕನ್ನಡಿಗ ಪ್ರೇಕ್ಷಕ ನ ಹಿಂದೆ ಯಾವ ಮಾಫಿಯಾವು ಇಲ್ಲ ಅಥವಾ ಬಹುರಾಷ್ಟ್ರೀಯ ಸಂಸ್ಥೆಗಳ ಕೈವಾಡವೂ ಇಲ್ಲ .ಅದರೆ ಡಬ್ಬಿಂಗ್ ವಿರೋಧಿಗಳ ಹಿಂದೆ ಸ್ವಾರ್ಥ,ಗೂಂಡಾಗಿರಿ,ಮತ್ತು ಹಣದದಾಹವಿದೆ.

    English summary
    Here are the few questions raised by common cine lover who support Dubbing in Kannada cinema and TV programs. Ban on Dubbing in Kannada Film Industry is unconstitutional and anti consumerism
    Tuesday, January 28, 2014, 18:03
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X