For Quick Alerts
  ALLOW NOTIFICATIONS  
  For Daily Alerts

  ಕರ್ವ ಖ್ಯಾತಿಯ ಅನು ಪೂವಮ್ಮ ಜತೆ ಕ್ರಿಕೆಟರ್ ಅಯ್ಯಪ್ಪ ಮದುವೆ

  |
  ಅನು ಪೂವಮ್ಮ ಜತೆ ಅಯ್ಯಪ್ಪ ಜನವರಿಯಲ್ಲಿ ಮದುವೆ | FILMIBEAT KANNADA

  ಬಿಗ್ ಬಾಸ್ ಸೀಸನ್-3 ಖ್ಯಾತಿಯ ಕ್ರಿಕೆಟರ್, ಹಾಲಿ ಕರ್ನಾಟಕ ಅಂಡರ್ 23 ತಂಡದ ಕೋಚ್ ಎನ್.ಸಿ ಅಯ್ಯಪ್ಪ ಹಾಗೂ ಅವರ ಗೆಳತಿ, ಪ್ರೇಯಸಿ ನಟಿ ಅನು ಪೂವಮ್ಮ ಅವರ ಮದುವೆ ದಿನಾಂಕ ನಿಗದಿಯಾಗಿದೆ.

  ಅಯ್ಯಪ್ಪ ಮತ್ತು ಅನು ಪೂವಮ್ಮ ಅವರ ಮದುವೆ ಕಾರ್ಯವು ಜನವರಿ 19 ಮತ್ತು 20ರಂದು ನಡೆಸಲು ಕುಟುಂಬಸ್ಥರು ನಿಶ್ಚಯ ಮಾಡಿದ್ದಾರೆ. ಕರ್ವ ಚಿತ್ರ ಖ್ಯಾತಿಯ ನಟಿ ಅನು ಪೂವಮ್ಮ ಮೂಲತಃ ಕೊಡಗಿನರಾಗಿದ್ದು, ಕೊಡವ ಸಂಪ್ರದಾಯದಂತೆ ಮದುವೆ ನೆರವೇರಲಿದೆ.

  ನಟಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಕ್ರಿಕೆಟಿಗ ಎನ್ ಸಿ ಅಯ್ಯಪ್ಪ

  ಅಯ್ಯಪ್ಪ ಮತ್ತು ಅನು ಪೂವಮ್ಮ ಅವರ ಮದುವೆ ನಿಶ್ಚಿತಾರ್ಥವು ಮೇ ತಿಂಗಳಿನಲ್ಲಿ ಬೆಂಗಳೂರಿನ ವಸಂತ ನಗರದಲ್ಲಿರುವ ಕೊಡವ ಸಮಾಜದಲ್ಲಿ ಸಂಪ್ರದಾಯಬದ್ಧವಾಗಿ ನೇರವೇರಿತ್ತು.

  2016ರಲ್ಲಿ ಅಯ್ಯಪ್ಪ ಮತ್ತು ಅನು ಇಬ್ಬರು ಭೇಟಿಯಾಗಿದ್ದು, ಪರಿಚಯವಾಗಿ ಸ್ನೇಹವಾಗಿತ್ತು. ಬಳಿಕ ಸ್ನೇಹ ಪ್ರೀತಿಯಾಗಿ ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಬಳಿಕ ಈ ಬಗ್ಗೆ ಪೋಷಕರ ಬಳಿ ಹೇಳಿಕೊಂಡಿದ್ದರು. ಎರಡು ಕುಟುಂಬದವರು ಕೂಡ ಇವರಿಬ್ಬರ ಪ್ರೀತಿಗೆ ಒಪ್ಪಿಗೆ ಸೂಚಿಸಿದ್ದರು.

  ಅನು ಪೂವಮ್ಮ ಕನ್ನಡದ ಕರ್ವ, ಕಥಾವಿಚಿತ್ರ, ಲೈಫ್ ಸೂಪರ್, ಪಾನಿಪೂರಿ ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ಈಗ ಅವರು ಖಾಸಗಿ ವಾಹಿನಿಯ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅಯ್ಯಪ್ಪ ಬಿಗ್‍ಬಾಸ್ ಸೀಸಸ್ 3 ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಕರ್ನಾಟಕ ರಣಜಿ ತಂಡದಲ್ಲಿ ಆಡಿ, ಈಗ ಕೋಚ್ ಆಗಿದ್ದಾರೆ.

  English summary
  Ranji player and Bigg Boss celebrity, Karnataka Under 23 team coach NC Aiyappa and Kannada actress Anu Poovamma's marriage date fixed.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X