»   » ಎಂಎ ಅಂತಿಮ ಪರೀಕ್ಷೆ ಬರೆದ ಅನು ಪ್ರಭಾಕರ್

ಎಂಎ ಅಂತಿಮ ಪರೀಕ್ಷೆ ಬರೆದ ಅನು ಪ್ರಭಾಕರ್

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ತಾರೆ ಅನು ಪ್ರಭಾಕರ್ ಬಾಹ್ಯ ವಿದ್ಯಾರ್ಥಿಯಾಗಿ ಕರ್ನಾಟಕ ವಿಶ್ವವಿದ್ಯಾಲಯದ ಎಂಎ ಸಮಾಜಶಾಸ್ತ್ರ ಅಂತಿಮ ವರ್ಷದ ಪರೀಕ್ಷೆ ಬರೆದರು. ಈ ಹಿಂದೆ ಅವರು ಇದೇ ವಿವಿಯಲ್ಲಿ ಬಿಎ ಪರೀಕ್ಷೆಯನ್ನೂ ಬಾಹ್ಯ ವಿದ್ಯಾರ್ಥಿಯಾಗಿ ಪೂರೈಸಿದ್ದಾರೆ.

ಹುಬ್ಬಳ್ಳಿ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದ ಅವರು ಸಹ ಪರೀಕ್ಷಾರ್ಥಿಗಳನ್ನು ಚಕಿತಗೊಳಿಸಿದರು. ಪರೀಕ್ಷಾ ಕೋಣೆಗೆ 15 ನಿಮಿಷ ಮುಂಚಿತವಾಗಿಯೇ ಆಗಮಿಸಿ ತಮ್ಮ ನೋಂದಣಿ ಸಂಖ್ಯೆಯ ಬಳಿ ಕುಳಿತರು. ತಮ್ಮ ನೆಚ್ಚಿನ ತಾರೆಯನ್ನು ಕಂಡ ಇತರೆ ವಿದ್ಯಾರ್ಥಿಗಳು ಅಚ್ಚರಿಗೆ ಒಳಗಾದರು.

ಅವರು ಪರೀಕ್ಷೆ ಮುಗಿಸಿಕೊಂಡು ಬಂದಾಗ ಅಭಿಮಾನಿಗಳ ದಂಡೇ ನೆರೆದಿತ್ತು. ಅವರನ್ನು ತಮ್ಮ ಕ್ಯಾಮೆರಾಗಳಲ್ಲಿ, ಮೊಬೈಲ್ ಗಳಲ್ಲಿ ಸೆರೆಹಿಡಿಯಲು ಮುಗಿಬಿದ್ದರು. ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಪರೀಕ್ಷೆ ಚೆನ್ನಾಗಿ ಬರೆದಿದ್ದೇನೆ. ಫಲಿತಾಂಶ ಏನಾಗುತ್ತದೋ ನೋಡಬೇಕು ಎಂದರು.

ಕರ್ನಾಟಕ ವಿವಿಯಲ್ಲಿ ತಮ್ಮ ದೊಡ್ಡಪ್ಪ, ಚಿಕ್ಕಪ್ಪ ಪದವಿ ಮುಗಿಸಿದ್ದಾರೆ. ತಾನೂ ಇದೇ ವಿವಿಯಲ್ಲಿ ಪದವಿ ಮುಗಿಸಬೇಕು ಎಂಬ ಆಸೆ ಇತ್ತು. ಹಾಗಾಗಿ ಕರ್ನಾಟಕ ವಿವಿಯನ್ನು ಆಯ್ಕೆ ಮಾಡಿಕೊಂಡೆ ಎಂದಿದ್ದಾರೆ. ಮೊದಲ ವರ್ಷದ ಕೆಲವು ಪತ್ರಿಕೆಗಳನ್ನು ಅವರು ಪಾಸು ಮಾಡಬೇಕಾಗಿದೆ.

ಇದರ ಜೊತೆಗೆ ಅವರು ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಓಂ ಸಾಯಿಪ್ರಕಾಶ್ ಅವರ 'ಗರ್ಭದ ಗುಡಿ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ವೈದ್ಯೆಯಾಗಿ ಕಾಣಿಸುತ್ತಿರುವುದು ವಿಶೇಷ. (ಏಜೆನ್ಸೀಸ್)

English summary
Award winning Kannada actress Anu Prabhakar has written the master degree examination Karnataka University in Dharwad. It was an external examination on rural social science final examination. At the same University Anu had completed BA.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada