For Quick Alerts
  ALLOW NOTIFICATIONS  
  For Daily Alerts

  ಡಾ.ವಿಷ್ಣು ಹಾಗೂ ಸುದೀಪ್ ಬಗ್ಗೆ ಅನು ಪ್ರಭಾಕರ್ ಕಂಡ ಕನಸು ನನಸಾಗಲು ಸಾಧ್ಯವೇ ಇಲ್ಲ!

  By Harshitha
  |

  ನಟಿ ಅನು ಪ್ರಭಾಕರ್ ಅವರಿಗೆ ನಿನ್ನೆ ರಾತ್ರಿ ಒಂದು ಕನಸು ಬಿದ್ದಿತ್ತು. ಅದರಲ್ಲಿ, ನಟಿ ಅನು ಪ್ರಭಾಕರ್ ಹಾಗೂ ಡಾ.ವಿಷ್ಣುವರ್ಧನ್ ಒಟ್ಟಿಗೆ ಅಭಿನಯ ಮಾಡುತ್ತಿದ್ದರು. ಇಂಟ್ರೆಸ್ಟಿಂಗ್ ಅಂದ್ರೆ, ಇಬ್ಬರಿಗೂ ಆಕ್ಷನ್ ಕಟ್ ಹೇಳುತ್ತಿದ್ದದ್ದು ಕಿಚ್ಚ ಸುದೀಪ್.

  'ನಲ್ಲ' ಸುದೀಪ್ ನಿರ್ದೇಶನದ ಚಿತ್ರದಲ್ಲಿ ಅನು ಪ್ರಭಾಕರ್ ಹಾಗೂ ಡಾ.ವಿಷ್ಣುವರ್ಧನ್ ತೆರೆ ಹಂಚಿಕೊಂಡಿದ್ದರು. 'ಸಾಹಸ ಸಿಂಹ'ನ ಜೊತೆಗೆ ಆಕ್ಟ್ ಮಾಡುತ್ತಿರುವ ಖುಷಿಯಲ್ಲಿ ಅನು ಪ್ರಭಾಕರ್ ಇದ್ದರೆ, 'ಹೃದಯವಂತ'ನಿಗೆ ಆಕ್ಷನ್ ಕಟ್ ಹೇಳುತ್ತಿರುವ ಹೆಮ್ಮೆ ಸುದೀಪ್ ಗಿತ್ತು.

  ಇಂತಹ ಸವಿ ಕನಸನ್ನ ಕಾಣುತ್ತಿದ್ದ ನಟಿ ಅನು ಪ್ರಭಾಕರ್ ಗೆ ಇದ್ದಕ್ಕಿದ್ದಂತೆ ಎಚ್ಚರವಾಗಿದೆ. ಎದ್ದು ನೋಡಿದ್ರೆ, ಇದಿಷ್ಟು ಕೇವಲ ಕನಸು ಎನ್ನುವುದು ಅನು ಪ್ರಭಾಕರ್ ಅವರಿಗೆ ಮನವರಿಕೆ ಆಗಿದೆ. ದುರಂತ ಅಂದ್ರೆ, ಈ ಕನಸು ನನಸಾಗಲು ಸಾಧ್ಯವೇ ಇಲ್ಲ. ಯಾಕಂದ್ರೆ, ವಿಷ್ಣು ದಾದಾ ಇಂದು ನಮ್ಮೊಂದಿಗಿಲ್ಲ.

  ನಿನ್ನೆ ರಾತ್ರಿ ತಮಗೆ ಬಿದ್ದ ಕನಸಿನ ಬಗ್ಗೆ ನಟಿ ಅನು ಪ್ರಭಾಕರ್ ಹೇಳಿಕೊಂಡಾಗ, ಸುದೀಪ್ ಏನಂದರು ಗೊತ್ತಾ.? ಸಂಪೂರ್ಣ ಮಾಹಿತಿ ಇಲ್ಲಿದೆ. ಓದಿರಿ...

  ಅನು ಪ್ರಭಾಕರ್ ಮಾಡಿರುವ ಟ್ವೀಟ್ ನೋಡಿ...

  ಅನು ಪ್ರಭಾಕರ್ ಮಾಡಿರುವ ಟ್ವೀಟ್ ನೋಡಿ...

  ''ಕಿಚ್ಚ ಸುದೀಪ್... ಇಂದು ಬೆಳಗ್ಗೆ ಒಂದು ಚೆಂದ ಕನಸನ್ನು ಕಂಡೆ. ನಿಮ್ಮ ನಿರ್ದೇಶನದಲ್ಲಿ ನಾನು ಹಾಗೂ ಡಾ.ವಿಷ್ಣು ಸರ್ ಆಕ್ಟ್ ಮಾಡ್ತಿದ್ವಿ. ಡಾ.ವಿಷ್ಣು ಸರ್ ಅವರನ್ನ ನೋಡುವುದಕ್ಕೆ, ಅವರೊಂದಿಗೆ ಇರುವುದಕ್ಕೆ ನಾನು ಮತ್ತು ನೀವು ತುಂಬಾ ಸಂತಸ ಪಟ್ಟಿದ್ವಿ. ಈ ಕನಸು ನನಸಾಗಲು ಸಾಧ್ಯವೇ ಇಲ್ಲ. ಆದ್ರೆ, ಬೆಳಗ್ಗೆ ಎಚ್ಚರಗೊಂಡಾಗ, ಈ ಕನಸ್ಸಿನಿಂದ ನನ್ನ ಮೊಗದಲ್ಲಿ ಮಂದಹಾಸ ಮೂಡಿತು'' ಎಂದು ನಟಿ ಅನು ಪ್ರಭಾಕರ್ ಟ್ವೀಟ್ ಮಾಡಿದ್ದಾರೆ.

  ಅನು ಪ್ರಭಾಕರ್ ಹೇಳಿದ ಒಂದೇ ಒಂದು ಮಾತಿಗೆ 'ಥ್ಯಾಂಕ್ಸ್' ಎಂದ ಸುದೀಪ್.!

  ಅನು ಪ್ರಭಾಕರ್ ಟ್ವೀಟ್ ನೋಡಿ ಖುಷಿ ಪಟ್ಟ ಸುದೀಪ್

  ಅನು ಪ್ರಭಾಕರ್ ಟ್ವೀಟ್ ನೋಡಿ ಖುಷಿ ಪಟ್ಟ ಸುದೀಪ್

  ಅನು ಪ್ರಭಾಕರ್ ಅವರ ಈ ಕನಸಿನ ಟ್ವೀಟ್ ನೋಡಿ ಅಕ್ಷರಶಃ ಖುಷಿ ಪಟ್ಟ ನಟ ಸುದೀಪ್ ತಮ್ಮ 'ಶಾಂತಿ ನಿವಾಸ'ದ ದಿನಗಳ ನೆನಪಿಗೆ ಜಾರಿದ್ದಾರೆ.

  ಸುದೀಪ್ ಕೊಟ್ಟ ಪ್ರತಿಕ್ರಿಯೆ ಏನು.?

  ಸುದೀಪ್ ಕೊಟ್ಟ ಪ್ರತಿಕ್ರಿಯೆ ಏನು.?

  ''ನಿಮ್ಮ ಟ್ವೀಟ್ ನೋಡಿ ನನಗೆ ಖುಷಿ ಆಯ್ತು. ನೀವು ಮತ್ತು ವಿಷ್ಣು ಸರ್ '#73 ಶಾಂತಿ ನಿವಾಸ' ಸಿನಿಮಾದಲ್ಲಿ ಒಂದೇ ಫ್ರೇಮ್ ನಲ್ಲಿದ್ರಿ. ಆದ್ರೆ, ಅದನ್ನ ಗ್ರೀನ್ ಮ್ಯಾಟ್ ನಲ್ಲಿ ಶೂಟ್ ಮಾಡಿದ್ದು ಅಷ್ಟೇ. ತುಂಬಾ ಚಿಕ್ಕ ಸನ್ನಿವೇಶ. ಎಲ್ಲೋ ಒಂದು ಕಡೆ ನಿಮ್ಮ ಕನಸು ನಿಜವಾಗಿದೆ. ನಿಮ್ಮನ್ನ ಡೈರೆಕ್ಟ್ ಮಾಡುವುದೇ ಒಂದು ಖುಷಿ ನನಗೆ'' ಎಂದಿದ್ದಾರೆ ನಟ ಸುದೀಪ್.

  ಇಬ್ಬರೂ 'ಯಜಮಾನ'ನ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ

  ಇಬ್ಬರೂ 'ಯಜಮಾನ'ನ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ

  ಅಂದ್ಹಾಗೆ, ನಟ ಸುದೀಪ್ ಮತ್ತು ಡಾ.ವಿಷ್ಣುವರ್ಧನ್ 'ಮಾತಾಡ್ ಮಾತಾಡು ಮಲ್ಲಿಗೆ' ಸಿನಿಮಾದಲ್ಲಿ ಹಾಗೂ ಅನು ಪ್ರಭಾಕರ್ ಮತ್ತು ಡಾ.ವಿಷ್ಣುವರ್ಧನ್ 'ಜಮೀನ್ದಾರು' ಸಿನಿಮಾದಲ್ಲಿ ಸ್ಕ್ರೀನ್ ಶೇರ್ ಮಾಡಿದ್ದಾರೆ. 'ಸಾಹಸ ಸಿಂಹ' ನಮ್ಮನ್ನೆಲ್ಲ ಅಗಲಿ ಹತ್ತತ್ರ ಒಂಬತ್ತು ವರ್ಷಗಳು ಕಳೆದರೂ, ಎಲ್ಲರ ಹೃದಯದಲ್ಲೂ ವಿಷ್ಣು ಇನ್ನೂ ಜೀವಂತ ಎನ್ನುವುದಕ್ಕೆ ಅನು ಪ್ರಭಾಕರ್ ಅವರ ಈ ಕನಸೇ ಸಾಕ್ಷಿ.

  English summary
  Kannada Actress Anu Prabhakar dreamt of Kiccha Sudeep directing Dr.Vishnuvardhan, which can never be a reality.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X