»   » ಫಿಲ್ಮ್ ಚೇಂಬರ್ ಸುದ್ದಿಗೋಷ್ಠಿಯಲ್ಲಿ ಕನ್ನಡಿಗರಿಗೆ ತಲೆ ಬಾಗಿದ ಭಂಡಾರಿ ಬ್ರದರ್ಸ್

ಫಿಲ್ಮ್ ಚೇಂಬರ್ ಸುದ್ದಿಗೋಷ್ಠಿಯಲ್ಲಿ ಕನ್ನಡಿಗರಿಗೆ ತಲೆ ಬಾಗಿದ ಭಂಡಾರಿ ಬ್ರದರ್ಸ್

Posted By:
Subscribe to Filmibeat Kannada
ಫಿಲ್ಮ್ ಚೇಂಬರ್ ಸುದ್ದಿಗೋಷ್ಠಿಯಲ್ಲಿ ಕನ್ನಡಿಗರಿಗೆ ತಲೆ ಬಾಗಿದ ಭಂಡಾರಿ ಬ್ರದರ್ಸ್ | Filmibeat Kannada

ಕನ್ನಡಿಗರಿಗೆ ನೋವುಂಟು ಮಾಡುವ ರೀತಿಯಲ್ಲಿ ಹೇಳಿಕೆ ನೀಡಿದ್ದ ಅನೂಪ್ ಭಂಡಾರಿ, ನಿರೂಪ್ ಭಂಡಾರಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾರಾ ಗೋವಿಂದು ಅವರ ಮುಂದೆ ಕನ್ನಡಿಗರನ್ನ ಕ್ಷಮೆ ಕೇಳಿದ್ದಾರೆ.

ಭಂಡಾರಿ ಬ್ರದರ್ಸ್ ಅವರ ಹೇಳಿಕೆಯನ್ನ ಖಂಡಿಸಿ ಅಧ್ಯಕ್ಷ ಸಾರಾ ಗೋವಿಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ನಂತರ ಇಬ್ಬರನ್ನ ಫಿಲ್ಮ್ ಚೇಂಬರ್ ಗೆ ಕರೆಸಿ ಬುದ್ದಿವಾದ ಹೇಳಿದ್ದಲ್ಲದೇ, ಮತ್ತೊಮ್ಮ ಈ ರೀತಿ ಆದರೆ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಬಳಿಕ ಮಾತನಾಡಿದ ಸಾರಾ ಗೋವಿಂದು ''ಅನೂಪ್ ಮತ್ತು ನಿರೂಪ್ ಮತ್ತು ರಶ್ಮಿ ವಿರುದ್ಧ ಸುದ್ದಿಗೋಷ್ಠಿಯಲ್ಲಿ ತರಾಟೆಗೆ ತೆಗೆದುಕೊಂಡರು. ಭಂಡಾರಿ ಬ್ರದರ್ಸ್ ಗೆ ರಶ್ಮಿ ಪ್ರಚೋದನೆ ನೀಡಿದ್ದಾರೆ ಎಂದು ಕಿಡಿಕಾರಿದರು. ಪ್ರಚಾರಕ್ಕಾಗಿ ಇಂತಹದು ಮಾಡುವುದು ಸರಿಯಿಲ್ಲ. ಎಲ್ಲ ಸಿನಿಮಾ ಹಿಟ್ ಆಗಲೇಬೇಕು ಅಂತಿಲ್ಲ. ನೀವು ಮಾಡಿದ್ದು ತಪ್ಪು. ಇನ್ನೊಮ್ಮೆ ಈ ರೀತಿ ಆಗಬಾರದು ಎಂದು ಎಚ್ಚರಿಕೆ ನೀಡಿದರು.

Anup bhandari asked sorry to kannadigas

'ಕಚಡ' ಎಂದು ಸೈಲೆಂಟ್ ಆದ ಅವಂತಿಕಾ : ಕ್ಷಮೆ ಕೇಳಲಿಲ್ಲ 'ರಾಜರಥ'ದ ರಾಣಿ

ಇನ್ನು ಅನೂಪ್ ಭಂಡಾರಿ ಮಾತನಾಡಿ, ''ನಮ್ಮನ್ನ ಗೆಲ್ಲಿಸಿದ್ದು ನೀವು. ನಿಮ್ಮಿಂದಲೇ ನಾವು. ನಮಗೆ ಕನ್ನಡ ಸಿನಿಮಾ ಮತ್ತು ಕನ್ನಡ ಭಾಷೆ ಮೇಲೆ ಅಪಾರ ಗೌರವವಿದೆ. ಇದು ನಮ್ಮ ಅರಿವಿಗೆ ಬಾರದೆ ಆಗಿರುವ ತಪ್ಪು. ಮುಂದೆ ಮತ್ಯಾವತ್ತು ಈ ರೀತಿ ತಪ್ಪು ನಮ್ಮಿಂದ ಆಗಲ್ಲ. ನಾವು, ನಮ್ಮ ಕೆಲಸ ಅಂತ ಒಳ್ಳೆಯ ಸಿನಿಮಾಗಳನ್ನ ನೀಡುವ ಕಡೆ ಗಮನ ಹರಿಸುತ್ತೇವೆ. ದಯವಿಟ್ಟು ನಮ್ಮ ತಪ್ಪನ್ನ ಮನ್ನಿಸಿ'' ಎಂದು ಎದ್ದು ನಿಂತು ತಲೆ ಬಾಗಿ ಕ್ಷಮೆ ಕೇಳಿದರು.

'ರಾಜರಥ ವಿವಾದ' : ಭಂಡಾರಿ ಹುಡುಗರಿಗೆ ಸಾ.ರಾ.ಗೋವಿಂದು ಎಚ್ಚರಿಕೆ

ಇನ್ನು ಈ ವಿವಾದಕ್ಕೆ ಸಂಬಂಧಪಟ್ಟಂತೆ ನಟಿ ಆವಂತಿಕಾ ಶೆಟ್ಟಿ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಬಗ್ಗೆ ಮಾಧ್ಯಮದವರು ಮತ್ತು ವಾಣಿಜ್ಯ ಮಂಡಳಿ ಅಧ್ಯಕ್ಷ ಸಾರಾ ಗೋವಿಂದು ಅಸಮಾದಾನ ವ್ಯಕ್ತಪಡಿಸಿದರು.

English summary
Rajaratha Kannada movie controversy: Kannada director Anup bhandari and actor nirup bhandari asked sorry to kannadigas in front of film chamber president Sa Ra Govindu and media.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X