For Quick Alerts
  ALLOW NOTIFICATIONS  
  For Daily Alerts

  ನಿರ್ದೇಶಕ ಅನೂಪ್ ಭಂಡಾರಿಗೆ ಸಿಕ್ಕ ಗೋಲ್ಡನ್ ಚಾನ್ಸ್ ಇದು.!

  |
  Anup Bhandari writes lyrics for Salman Khan's Dabangg 3 | FILMIBEAT KANNADA

  ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದ ಅನೂಪ್ ಭಂಡಾರಿ, ತಮ್ಮ ವೃತ್ತಿಗೆ ಗುಡ್ ಬೈ ಹೇಳಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. 'ರಂಗಿತರಂಗ' ಅಂತಹ ಸೂಪರ್ ಹಿಟ್ ಕೊಟ್ಟ ಅನೂಪ್ ಭಂಡಾರಿ ಸದ್ಯ ಸ್ಯಾಂಡಲ್ ವುಡ್ ನಲ್ಲಿ ಚಿತ್ರ ನಿರ್ದೇಶಕ, ನಿರ್ಮಾಪಕ, ಸಂಗೀತ ನಿರ್ದೇಶಕ, ಚಿತ್ರ ಸಾಹಿತಿಯಾಗಿ ಗುರುತಿಸಿಕೊಂಡಿದ್ದಾರೆ.

  'ರಂಗಿತರಂಗ' ಚಿತ್ರಕ್ಕೆ ಸಾಹಿತ್ಯ ಮತ್ತು ಸಂಗೀತ ನೀಡಿದ್ದು ಇದೇ ಅನೂಪ್ ಭಂಡಾರಿ. 'ರಂಗಿತರಂಗ' ಬಳಿಕ 'ರಾಜರಥ' ಚಿತ್ರ ನಿರ್ದೇಶನ ಮಾಡಿದ್ದ ಅನೂಪ್ ಭಂಡಾರಿಗೆ ಇದೀಗ ಒಂದು ಗೋಲ್ಡನ್ ಚಾನ್ಸ್ ಸಿಕ್ಕಿದೆ.

  ಸಲ್ಮಾನ್ ಖಾನ್ ಅಭಿನಯದ 'ದಬ್ಬಂಗ್-3' ಚಿತ್ರ ಕನ್ನಡದಲ್ಲಿ ಡಬ್ ಆಗಿ ತೆರೆಗೆ ಬರುತ್ತಿರುವ ವಿಚಾರ ನಿಮಗೆಲ್ಲಾ ಗೊತ್ತೇ ಇದೆ. 'ದಬ್ಬಂಗ್-3' ಚಿತ್ರದ ಕನ್ನಡ ವರ್ಷನ್ ಗೆ ಈಗಾಗಲೇ ಡಬ್ಬಿಂಗ್ ಕಾರ್ಯ ಮುಗಿದಿದೆ. ರವಿಶಂಕರ್ ಗೌಡ, ಶಿವರಾಜ್.ಕೆ.ಆರ್.ಪೇಟೆ ಸೇರಿದಂತೆ ಹಲವರು ಡಬ್ಬಿಂಗ್ ಮಾಡಿಕೊಟ್ಟಿದ್ದಾರೆ. ಇದೀಗ 'ದಬ್ಬಂಗ್-3' ಚಿತ್ರದ ಕನ್ನಡ ವರ್ಷನ್ ಹಾಡುಗಳಿಗೆ ಅನೂಪ್ ಭಂಡಾರಿ ಸಾಹಿತ್ಯ ಬರೆದಿದ್ದಾರೆ. ಮುಂದೆ ಓದಿರಿ...

  'ದಬ್ಬಂಗ್-3' ಹಾಡುಗಳಿಗೆ ಅನೂಪ್ ಭಂಡಾರಿ ಸಾಹಿತ್ಯ

  'ದಬ್ಬಂಗ್-3' ಹಾಡುಗಳಿಗೆ ಅನೂಪ್ ಭಂಡಾರಿ ಸಾಹಿತ್ಯ

  'ದಬ್ಬಂಗ್-3' ಕನ್ನಡ ವರ್ಷನ್ ಗೆ ಒಂದು ಹಾಡು ಬರೆಯಲು ಅನೂಪ್ ಭಂಡಾರಿಗೆ ಜಾಕ್ ಮಂಜು ಅವಕಾಶ ಕೊಟ್ಟಿದ್ದರು. ಬಳಿಕ ಅನೂಪ್ ಭಂಡಾರಿ ಕೈಯಲ್ಲೇ ಕಿಚ್ಚ ಸುದೀಪ್ ಮತ್ತು ಜಾಕ್ ಮಂಜು ಎಲ್ಲಾ ಆರು ಹಾಡುಗಳನ್ನು ಬರೆಸಿದ್ದಾರೆ. ಇದು ಅನೂಪ್ ಭಂಡಾರಿಗೆ ಸಿಕ್ಕಾಪಟ್ಟೆ ಖುಷಿ ಕೊಟ್ಟಿದೆ.

  ವಾವ್.. ಸಲ್ಮಾನ್ ಖಾನ್ ಚಿತ್ರದಲ್ಲಿ ಕನ್ನಡದ ಕಾಮಿಡಿ ಕಿಲಾಡಿಗಳು.!ವಾವ್.. ಸಲ್ಮಾನ್ ಖಾನ್ ಚಿತ್ರದಲ್ಲಿ ಕನ್ನಡದ ಕಾಮಿಡಿ ಕಿಲಾಡಿಗಳು.!

  ಹಾಡನ್ನೂ ಹಾಡಿರುವ ಅನೂಪ್

  ಹಾಡನ್ನೂ ಹಾಡಿರುವ ಅನೂಪ್

  ಸಾಹಿತ್ಯ ಬರೆಯುವ ಜೊತೆಗೆ 'ಅಣ್ಣ ಕೈ ಜಾರಿ ಹೋದ..' ಎಂದು ಶುರುವಾಗುವ ಹಾಡಿನ ರಾಪ್ ವರ್ಷನ್ ಗೆ ಅನೂಪ್ ಭಂಡಾರಿ ದನಿ ನೀಡಿದ್ದಾರೆ. ಹಾಡುಗಳಿಗೆ ಸಾಜಿದ್-ವಾಜಿದ್ ಸಂಗೀತ ಸಂಯೋಜಿಸಿದ್ದಾರೆ. ಅನೂಪ್ ಭಂಡಾರಿ ಜೊತೆಗೆ 'ದಬ್ಬಂಗ್-3' ಚಿತ್ರದ ಕನ್ನಡ ಹಾಡುಗಳಲ್ಲಿ ಸಂಚಿತ್ ಹೆಗ್ಡೆ, ವಿಜಯ್ ಪ್ರಕಾಶ್, ಐಶ್ವರ್ಯ ರಂಗರಾಜನ್, ಮನೋಜ್ ವಸಿಷ್ಠ ಗಾನಸುಧೆ ಹರಿಸಿದ್ದಾರೆ.

  ಸಲ್ಮಾನ್ ಖಾನ್ ಕನ್ನಡ ಕೇಳಿ ಖುಷಿಯಾದ ಕನ್ನಡಿಗರುಸಲ್ಮಾನ್ ಖಾನ್ ಕನ್ನಡ ಕೇಳಿ ಖುಷಿಯಾದ ಕನ್ನಡಿಗರು

  ಸಂತಸ ವ್ಯಕ್ತಪಡಿಸಿದ ಅನೂಪ್ ಭಂಡಾರಿ

  ಸಂತಸ ವ್ಯಕ್ತಪಡಿಸಿದ ಅನೂಪ್ ಭಂಡಾರಿ

  ''ಸಲ್ಮಾನ್ ಖಾನ್ ಸಿನಿಮಾಗಳನ್ನ ನೋಡಿಕೊಂಡು ಬೆಳೆದವನು ನಾನು. ಈಗ ಅವರ ಸಿನಿಮಾಗಳಿಗೆ ಹಾಡು ಬರೆದಿರುವುದು ನನ್ನ ಜೀವಮಾನದಲ್ಲಿ ಒಳ್ಳೆಯ ಅನುಭವ'' ಎಂದು ಸಂತಸ ವ್ಯಕ್ತ ಪಡಿಸುತ್ತಾರೆ ಅನೂಪ್ ಭಂಡಾರಿ.

  ಕರ್ನಾಟಕದ ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ 'ದಬಾಂಗ್-3' ರಿಲೀಸ್ಕರ್ನಾಟಕದ ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ 'ದಬಾಂಗ್-3' ರಿಲೀಸ್

  ರಿಲೀಸ್ ಯಾವಾಗ.?

  ರಿಲೀಸ್ ಯಾವಾಗ.?

  ಡಿಸೆಂಬರ್ 20 ರಂದು 'ದಬ್ಬಂಗ್-3' ಚಿತ್ರ ವರ್ಲ್ಡ್ ವೈಡ್ ರಿಲೀಸ್ ಆಗಲಿದೆ. ಪೊಲೀಸ್ ಅಧಿಕಾರಿ ಚುಲ್ ಬುಲ್ ಪಾಂಡೇ ಆಗಿ ಸಲ್ಮಾನ್ ಖಾನ್ ಕಾಣಿಸಿಕೊಂಡರೆ, ಪತ್ನಿ ಪಾತ್ರದಲ್ಲಿ ಸೋನಾಕ್ಷಿ ಸಿನ್ಹ ನಟಿಸಿದ್ದಾರೆ. ಖಳನಟನಾಗಿ ಸುದೀಪ್ ಅಭಿನಯಿಸಿದ್ದಾರೆ. ಅರ್ಬಾಜ್ ಖಾನ್, ಮಾಹಿ ಗಿಲ್, ಟಿನ್ನು ಆನಂದ್ ಸೇರಿದಂತೆ ದೊಡ್ಡ ತಾರಾಬಳಗ ಈ ಚಿತ್ರದಲ್ಲಿ ಇದೆ.

  English summary
  Kannada Director Anup Bhandari pens lyrics for Dabangg 3 Kannada Version.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X