Don't Miss!
- Sports
ಮಹಿಳಾ ಪ್ರೀಮಿಯರ್ ಲೀಗ್ ವೇಳಾಪಟ್ಟಿ: ಮೊದಲನೇ ಪಂದ್ಯದಲ್ಲಿ ಅಂಬಾನಿ-ಅದಾನಿ ತಂಡಗಳ ಮುಖಾಮುಖಿ
- News
ಕಾಂಗ್ರೆಸ್ ಸೇರ್ತಾರಾ ಸುದೀಪ್?; ನಟ ಸುದೀಪ್ ಕಾಂಗ್ರೆಸ್ ಗೆ ಬಂದರೆ ಸ್ವಾಗತ: ಸತೀಶ್ ಜಾರಕಿಹೊಳಿ
- Lifestyle
Horoscope Today 4 Feb 2023: ಶನಿವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
ಒಪ್ಪೋ ರೆನೋ 8T 5G ಫಸ್ಟ್ ಲುಕ್: ಪವರ್ಫುಲ್ ಫೀಚರ್ಸ್ ಜೊತೆಗೆ ಹೊಸ ಲುಕ್!
- Automobiles
ಹೊಸ ನವೀಕರಣಗಳೊಂದಿಗೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಜನಪ್ರಿಯ ಕಿಯಾ ಸೆಲ್ಟೋಸ್
- Finance
ಅದಾನಿ ಕಳೆದುಕೊಂಡಿದ್ದು ಎಷ್ಟು ಲಕ್ಷ ಕೋಟಿ? ಕುಸಿಯುತ್ತಿವೆ ಷೇರುಗಳು- ಭಾರತದ ಶ್ರೀಮಂತನಿಗೆ ಮಂದೇನು ಕಾದಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ರಂಗಿ' ಅನುಪ್ ಜೊತೆ ಕೆಲಸ ಮಾಡುವ ಆಸಕ್ತರಿಗೆ ಗುಡ್ ನ್ಯೂಸ್
ನಿರ್ದೇಶಕ ಅನುಪ್ ಭಂಡಾರಿ ಆಕ್ಷನ್-ಕಟ್ ಹೇಳಿರುವ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ 'ರಂಗಿತರಂಗ' ಚಿತ್ರತಂಡ ಇದೀಗ ಮತ್ತೆ ಎರಡನೇ ಪ್ರಾಜೆಕ್ಟ್ ಕಡೆ ಹೆಜ್ಜೆ ಹಾಕಿದ್ದು, ತಮ್ಮ ಚಿತ್ರದಲ್ಲಿ ಕೆಲಸ ಮಾಡಲು ಆಸಕ್ತಿ ಇರುವ ಪ್ರತಿಭೆಗಳಿಗೆ ಅವಕಾಶ ನೀಡುತ್ತಿದ್ದಾರೆ.
ಹೊಸಬರಾಗಿ ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ ಕಾಲಿಟ್ಟ 'ರಂಗಿತರಂಗ' ಚಿತ್ರತಂಡ ಇದೀಗ ಹೊಸಬರಿಗೆ ಅವಕಾಶ ನೀಡಲು ಮುಂದಾಗಿದ್ದಾರೆ. ಈ ಮೊದಲು ಸಿನಿಮಾ ನಿರ್ದೇಶನ, ವಸ್ತ್ರ ವಿನ್ಯಾಸ, ಎಡಿಟಿಂಗ್, ಕಲಾ ವಿಭಾಗ, ಮತ್ತು ಆಸಕ್ತ ಬರಹಗಾರರಿಗೆ ಈ ತಂಡ ಕರೆ ಕೊಟ್ಟಿತ್ತು.[ನೀವು 'ರಂಗಿತರಂಗ' ತಂಡದೊಂದಿಗೆ ಕೆಲಸ ಮಾಡಬೇಕೆ? ಇಲ್ಲಿದೆ ಅವಕಾಶ!]
ಇದೀಗ ಮತ್ತೆ ನಟನೆಯಲ್ಲಿ ಆಸಕ್ತಿ ಇರುವ ನಟ-ನಟಿಯರಿಗೆ, ಹಾಡುಗಾರರಿಗೆ ಹಾಗೂ ಸಂಗೀತ ವಾದ್ಯಗಳನ್ನು ನುಡಿಸಲು ಆಸಕ್ತಿ ಇರುವ ಹೊಸ ಪ್ರತಿಭೆಗಳಿಗೆ ತಮ್ಮ ತಂಡದಲ್ಲಿ ಕೆಲಸ ಮಾಡಲು ಅವಕಾಶ ನೀಡಿದ್ದು ಆಸಕ್ತರು ಭಾಗವಹಿಸಬಹುದಾಗಿದೆ.
ನಟ-ನಟಿಯರು ತಾವು ಮಾಡಿದ ಪರ್ಫಾಮೆನ್ಸ್ ನ ವಿಡಿಯೋ ಲಿಂಕ್ ಮತ್ತು ಪ್ರೋಫೈಲ್ ಚಿತ್ರವನ್ನು actorsABfilm@gmail.com ಗೆ ಕಳುಹಿಸಲು ಕೋರಲಾಗಿದೆ. ನಟನೆಯ ವಿಡಿಯೋ ಇಲ್ಲದಿದ್ದರೆ, ಮೊಬೈಲ್ ನಲ್ಲಿ ಮಾಡಿದ 1-3 ನಿಮಿಷಗಳಿರುವ ವಿಡಿಯೋ ಒಂದನ್ನು ಕಳುಹಿಸಬಹುದು.[29 ವರ್ಷಗಳ ನಂತರ ಶಿವಣ್ಣ ಅವರ ದಾಖಲೆ ಮುರಿದ 'ರಂಗಿ' ನಟ ನಿರುಪ್ ಭಂಡಾರಿ.!]
ಹಾಡುಗಾರರು ಮತ್ತು ಸಂಗೀತ ವಾದ್ಯ ನುಡಿಸಲು ಆಸಕ್ತಿ ಇರುವವರು musicABfilm@gmail.com ಗೆ ಆಡಿಯೋ ಸ್ಯಾಂಪಲ್ಸ್ ಅನ್ನು ಕಳುಹಿಸಲು ಕೋರಲಾಗಿದೆ. ಆಸಕ್ತರಲ್ಲಿ ವಿನಂತಿ ಒಂದು ಕನ್ನಡದಲ್ಲಿ ಹಾಡಿರುವ ಹಾಡನ್ನು ಕಡ್ಡಾಯವಾಗಿ ಕಳುಹಿಸಲು ಚಿತ್ರತಂಡದವರು ಕೋರಿದ್ದಾರೆ.
ಇನ್ನೇಕೆ ತಡ ಆಸಕ್ತರೇ, ಈಗಲೇ ನಿಮ್ಮ ಸಂಪೂರ್ಣ ವಿವರಣೆಯೊಂದಿಗೆ, ಸ್ಯಾಂಪಲ್ಸ್ ಅನ್ನು ಈ ಮೇಲಿನ ಮೇಲ್ ಐಡಿಗೆ ಕಳುಹಿಸಿ ಅವಕಾಶವನ್ನು ಉಪಯೋಗಿಸಿಕೊಳ್ಳಿ.