For Quick Alerts
  ALLOW NOTIFICATIONS  
  For Daily Alerts

  ಹೊಸ ಆವೃತ್ತಿಯೊಂದಿಗೆ ಕಲರ್ ಫುಲ್ 'ರಂಗಿತರಂಗ' ರೀ ರಿಲೀಸ್

  By Suneetha
  |

  ಕನ್ನಡ ಚಿತ್ರರಂಗಕ್ಕೆ ಕೋಲ್ಮಿಂಚಾಗಿ ಪರಿಣಮಿಸಿದ ಭಂಡಾರಿ ಸಹೋದರರ 'ರಂಗಿತರಂಗ' ಸಿನಿಮಾ ಕಳೆದ ವರ್ಷ ತೆರೆಕಂಡು ಇಡೀ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನು ಎಬ್ಬಿಸಿತ್ತು.

  ಇದೀಗ ಅದೇ ಕಲರ್ ಫುಲ್ 'ರಂಗಿತರಂಗ' ಸಿನಿಮಾ ಮತ್ತೆ ರೀ-ರಿಲೀಸ್ ಆಗುತ್ತಿದೆ. ಈಗಾಗಲೇ 50 ವಾರಗಳನ್ನು ಪೂರೈಸಿರುವ 'ರಂಗಿತರಂಗ' ಸಿನಿಮಾ ಜುಲೈ 1 ರಂದು ಮರು ಬಿಡುಗಡೆ ಆಗುತ್ತಿದೆ.[ಚಿತ್ರ ವಿಮರ್ಶೆ : 'ರಂಗಿತರಂಗ' ಬಲು ರೋಚಕ]

  ಒರಿಜಿನಲ್ ಕಾಪಿಯಿಂದ ಸುಮಾರು 10 ನಿಮಿಷಗಳಷ್ಟು ಟ್ರಿಮ್ ಮಾಡಿ ಹಾಗೂ ಕೆಲವು ಹೊಸ ದೃಶ್ಯಗಳನ್ನು ಚಿತ್ರಕ್ಕೆ ಸೇರಿಸಿಕೊಂಡಿರುವ ಚಿತ್ರದ ಹೊಸ ಆವೃತ್ತಿಯನ್ನು ವಿಶ್ವದಾದ್ಯಂತ ಮರು-ಬಿಡುಗಡೆ ಮಾಡಲು ನಿರ್ದೇಶಕ ಅನುಪ್ ಭಂಡಾರಿ ಅವರು ಯೋಜನೆ ಹಾಕಿಕೊಂಡಿದ್ದಾರೆ.

  Anup Bhandari's 'RangiTaranga' to Re-Release on July 1st

  ಭಾರತ, ಅಮೇರಿಕ, ಯು.ಕೆ, ಸಿಂಗಪೂರ್, ಆಸ್ಟ್ರೇಲಿಯಾ ಮುಂತಾದ ಸ್ಥಳಗಳಲ್ಲಿ ಏಕಕಾಲದಲ್ಲಿ 'ರಂಗಿತರಂಗ' ಮರು ಬಿಡುಗಡೆ ಆಗುತ್ತಿದೆ. ಅಂದಹಾಗೆ ವಿಶೇಷ ಏನಪ್ಪಾ ಅಂದ್ರೆ 'ರಂಗಿತರಂಗ' ಸಿನಿಮಾ ಈಗಲೂ ಬೆಂಗಳೂರಿನ ಐನಾಕ್ಸ್ ಮಂತ್ರಿ ಸ್ಕೈರ್ ಮತ್ತು ಬನ್ನೇರುಘಟ್ಟ ಸಿನಿಪೊಲಿಸ್ ಮಲ್ಟಿಪ್ಲೆಕ್ಸ್ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುತ್ತಿದೆ.[ಜುಲೈ 3 ರಂದು 'ರಂಗಿತರಂಗ' ಭರ್ಜರಿ ಓಪನ್ನಿಂಗ್]

  ಇನ್ನೊಂದು ವಿಶೇಷ ಏನಪ್ಪಾ ಅಂದ್ರೆ ಜುಲೈ 3 ರಂದು ಅನುಪ್ ಭಂಡಾರಿ ಪ್ರೊಡಕ್ಷನ್ಸ್ ನಲ್ಲಿ ಮೂಡಿಬರುತ್ತಿರುವ ಭಂಡಾರಿ ಸಹೋದರರ ಎರಡನೇ ಚಿತ್ರದ ಟೈಟಲ್ ಅನೌನ್ಸ್ ಆಗುತ್ತಿದೆ.

  ಅನುಪ್ ಭಂಡಾರಿ ನಿರ್ದೇಶನದಲ್ಲಿ ಜುಲೈ 3 ರಂದು ತೆರೆಕಂಡಿದ್ದ 'ರಂಗಿತರಂಗ' ಚಿತ್ರದಲ್ಲಿ ನಿರುಪ್ ಭಂಡಾರಿ ನಾಯಕ ನಟನಾಗಿ ಮಿಂಚಿದ್ದು, ನಟಿಯರಾದ ಆವಂತಿಕಾ ಶೆಟ್ಟಿ, ಮತ್ತು ರಾಧಿಕಾ ಚೇತನ್ ಕಾಣಿಸಿಕೊಂಡಿದ್ದರು. ನಟ ಸಾಯಿ ಕುಮಾರ್ ಅವರು ವಿಶೇಷ ಪಾತ್ರದಲ್ಲಿ ಅಭಿನಯಿಸಿ ಎಲ್ಲರ ಮನಗೆದ್ದಿದ್ದರು.

  English summary
  Anup Bhandari directorial Last year’s super hit film 'Rangitaranga' which won accolades across the globe is all set to re-release on the July 1st. 'RangiTaranga' movie will be trimmed of 10 minutes of the original length and some new scenes will be added. Kannada actor Nirup Bhandari, Actress Avanthika Shetty, Actress Radhika Chetan in the lead role.
  Monday, June 13, 2016, 12:20
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X