»   » ಸ್ಯಾಂಡಲ್ ವುಡ್ ನಲ್ಲೂ ಸದ್ಯ ಆಡಳಿತ ಪಕ್ಷ ಕಾಂಗ್ರೆಸ್ ಲೀಡಿಂಗ್.!

ಸ್ಯಾಂಡಲ್ ವುಡ್ ನಲ್ಲೂ ಸದ್ಯ ಆಡಳಿತ ಪಕ್ಷ ಕಾಂಗ್ರೆಸ್ ಲೀಡಿಂಗ್.!

Posted By:
Subscribe to Filmibeat Kannada

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮೊಮ್ಮಗ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್, ಜೆ.ಡಿ.ಎಸ್ ಶಾಸಕ ಚೆಲುವರಾಯಸ್ವಾಮಿ ಪುತ್ರ ಸಚಿನ್, ಜೆ.ಡಿ.ಎಸ್ ಶಾಸಕ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್, ಕಾಂಗ್ರೆಸ್ ನಾಯಕ ಎಚ್.ಎಂ.ರೇವಣ್ಣ ಪುತ್ರ ಅನೂಪ್ ರೇವಣ್ಣ ಬಣ್ಣದ ಬದುಕಿಗೆ ಪದಾರ್ಪಣೆ ಮಾಡಿರುವ ವಿಚಾರ ನಿಮಗೆ ಗೊತ್ತಿದೆ.

ಈ ಪೈಕಿ ಸದ್ಯ ಲೀಡಿಂಗ್ ನಲ್ಲಿದ್ದು, ಪ್ರೇಕ್ಷಕರ ಮುಂದೆ ಮೊದಲು ಅದೃಷ್ಟ ಪರೀಕ್ಷೆಗೆ ಬರುತ್ತಿರುವುದು ಕಾಂಗ್ರೆಸ್ ನಾಯಕ ಎಚ್.ಎಂ.ರೇವಣ್ಣ ಪುತ್ರ ಅನೂಪ್ ರೇವಣ್ಣ.! [ಕನ್ನಡದ ಯಾವ 'ಸ್ಟಾರ್'ಗೂ 'ಲಕ್ಷ್ಮಣ' ಅನೂಪ್ ಕಮ್ಮಿ ಇಲ್ಲ ಬಿಡಿ.!]


ಜೆ.ಡಿ.ಎಸ್ ಪಕ್ಷದ ರಾಜಕೀಯ ನಾಯಕರ ಪುತ್ರರ ಸಿನಿಮಾಗಳಿಗಿಂತ ವೇಗವಾಗಿ ಶೂಟಿಂಗ್ ಮುಗಿಸಿ ಕರ್ನಾಟಕ ರಾಜ್ಯದ ಆಡಳಿತ ಪಕ್ಷ ಕಾಂಗ್ರೆಸ್ ನಾಯಕ ಎಚ್.ಎಂ.ರೇವಣ್ಣ ಮಗ ಅನೂಪ್ ರೇವಣ್ಣ ಅವರ ಚೊಚ್ಚಲ ಸಿನಿಮಾ 'ಲಕ್ಷ್ಮಣ' ಈ ಶುಕ್ರವಾರ (ಜೂನ್ 24) ತೆರೆಗೆ ಬರಲಿದೆ. ಮುಂದೆ ಓದಿ....


ಅಂತರ ತುಂಬಾ ಕಡಿಮೆ.!

ಹಾಗ್ನೋಡಿದ್ರೆ, ಕಳೆದ ವರ್ಷ ಜೂನ್ ತಿಂಗಳಲ್ಲಿ ಕೆಲವೇ ದಿನಗಳ ಅಂತರದಲ್ಲಿ ಚೆಲುವರಾಯಸ್ವಾಮಿ ಪುತ್ರ ಸಚಿನ್ ರವರ 'ಹ್ಯಾಪಿ ಬರ್ತಡೆ' ಸಿನಿಮಾ ಹಾಗೂ ಅನೂಪ್ ರೇವಣ್ಣ ರವರ 'ಲಕ್ಷ್ಮಣ' ಸಿನಿಮಾ ಸೆಟ್ಟೇರಿತ್ತು. [ಚಂದ್ರು-ಅನೂಪ್ 'ಲಕ್ಷ್ಮಣ' ಹವಾ ಹೆಂಗಿದೆ ಗುರು? ಅಂದ್ರೆ ನೀವೂ ದಂಗಾಗ್ತೀರಾ.!]


ಮೊದಲು ಶೂಟಿಂಗ್ ಮುಗಿಸಿದ 'ಲಕ್ಷ್ಮಣ'

'ಹ್ಯಾಪಿ ಬರ್ತಡೆ' ಚಿತ್ರಕ್ಕೆ ಹೋಲಿಸಿದರೆ ಆರ್.ಚಂದ್ರು ನಿರ್ದೇಶನದ 'ಲಕ್ಷ್ಮಣ' ಸಿನಿಮಾ ತುಂಬ ಬೇಗ ಚಿತ್ರೀಕರಣ ಕಂಪ್ಲೀಟ್ ಮಾಡಿದೆ. [ಚಿತ್ರದ ಮಹೂರ್ತದಲ್ಲಿ ಒಂದಾದ ಶಿವಣ್ಣ, ಯಶ್, ದರ್ಶನ್]


ಮೊದಲೇ ತಯಾರಿ ಆಗಿತ್ತು.!

'ಹೀರೋ' ಆಗ್ಬೇಕು ಎಂಬ ಕನಸು ಕಂಡಿದ್ದ ಅನೂಪ್ ರೇವಣ್ಣ, ಬಣ್ಣ ಹಚ್ಚುವ ಮೊದಲೇ ಸಕಲ ತಯಾರಿ ಮಾಡಿಕೊಂಡಿದ್ದು 'ಲಕ್ಷ್ಮಣ' ಚಿತ್ರ ಬೇಗ ಕಂಪ್ಲೀಟ್ ಆಗಲು ಸಹಕಾರಿ ಆಗಿದೆ. [ಹೊಸ ದಾಖಲೆ ಬರೆದ ಹೊಸ ಹುಡುಗ ಅನೂಪ್ 'ಲಕ್ಷ್ಮಣ']


ಆರ್.ಚಂದ್ರು ಮಾರ್ಗದರ್ಶನ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಲವ್ಲಿ ಸ್ಟಾರ್ ಪ್ರೇಮ್, ರಿಯಲ್ ಸ್ಟಾರ್ ಉಪೇಂದ್ರ ರವರಿಗೆ ಆಕ್ಷನ್ ಕಟ್ ಹೇಳಿರುವ ಆರ್.ಚಂದ್ರು ಮಾರ್ಗದರ್ಶನದಲ್ಲಿ ಅನೂಪ್ ರೇವಣ್ಣ ಪರ್ಫಾಮೆನ್ಸ್ ಅಚ್ಚುಕಟ್ಟಾಗಿ ಮೂಡಿಬಂದಿದೆ.


'ಹ್ಯಾಪಿ ಬರ್ತಡೆ' ಬಿಡುಗಡೆ ಯಾವಾಗ?

ಮಹೇಶ್ ಸುಖಧರೆ ನಿರ್ದೇಶನ ಮಾಡುತ್ತಿರುವ 'ಹ್ಯಾಪಿ ಬರ್ತಡೆ' ಚಿತ್ರ ಬಿಡುಗಡೆಗೆ ಇನ್ನೂ ದಿನಾಂಕ ನಿಗದಿ ಅಗಿಲ್ಲ.


'ಜಾಗ್ವಾರ್' ಇನ್ನೂ ಶೂಟಿಂಗ್ ಹಂತದಲ್ಲಿದೆ.!

ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಅಭಿನಯದ 'ಜಾಗ್ವಾರ್' ಚಿತ್ರದ ಚಿತ್ರೀಕರಣ ಸದ್ಯ ವಿದೇಶಗಳಲ್ಲಿ ನಡೆಯುತ್ತಿದೆ. ಫ್ರಾನ್ಸ್ ನಲ್ಲಿ ಸಾಂಗ್ ಶೂಟಿಂಗ್, ಬಲ್ಗೇರಿಯಾದಲ್ಲಿ ಆಕ್ಷನ್ ಸೀಕ್ವೆನ್ಸ್ ಗಳ ಶೂಟಿಂಗ್ ಹಂತದಲ್ಲಿದೆ.


ತಯಾರಿಯಲ್ಲಿ ತೊಡಗಿದ್ದಾರೆ ಝೈದ್ ಖಾನ್.!

ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ ಸದ್ಯ ಬಣ್ಣದ ಬದುಕಿಗೆ ಕಾಲಿಡಲು ತಯಾರಿ ನಡೆಸುತ್ತಿದ್ದಾರೆ. ಇಂದ್ರಜಿತ್ ಲಂಕೇಶ್ ನಿರ್ದೇಶನದಲ್ಲಿ ಝೈದ್ ಖಾನ್ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಲಿದ್ದಾರೆ. [ಆರ್.ಜಿ.ವಿ ನಿರ್ದೇಶನದಲ್ಲಿ ಜಮೀರ್ ಪುತ್ರ ಬಾಲಿವುಡ್ಡಿಗೆ?]


ಸ್ಯಾಂಡಲ್ ವುಡ್ ನಲ್ಲೂ ಕಾಂಗ್ರೆಸ್ ಗೆಲುವು.?

ರಾಜಕಾರಣಿಗಳ ಪುತ್ರರ ಪೈಕಿ ಮೊದಲು ಬೆಳ್ಳಿತೆರೆ ಮೇಲೆ ಮಿಂಚಲು ಬರುತ್ತಿರುವ ಅನೂಪ್ ರೇವಣ್ಣ ಪ್ರೇಕ್ಷಕರ ಮೆಚ್ಚುಗೆ ಪಾತ್ರವಾಗುತ್ತಾರಾ.? ಈ ಶುಕ್ರವಾರ ಗೊತ್ತಾಗಲಿದೆ.


English summary
Amongst other JDS Leaders sons, Congress Politician H.M.Revanna's son Anup Revanna starrer R.Chandru directorial 'Lakshmana' is releasing this week (June 24th).

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada