»   » ಚಂದ್ರು-ಅನೂಪ್ 'ಲಕ್ಷ್ಮಣ' ಹವಾ ಹೆಂಗಿದೆ ಗುರು? ಅಂದ್ರೆ ನೀವೂ ದಂಗಾಗ್ತೀರಾ.!

ಚಂದ್ರು-ಅನೂಪ್ 'ಲಕ್ಷ್ಮಣ' ಹವಾ ಹೆಂಗಿದೆ ಗುರು? ಅಂದ್ರೆ ನೀವೂ ದಂಗಾಗ್ತೀರಾ.!

Posted By:
Subscribe to Filmibeat Kannada

'ನಾನ್ ಬರೋವರೆಗೂ ಬೇರೆಯವರ ಹವಾ...ನಾನ್ ಬಂದ್ಮೇಲೆ ನಂದೇ ಹವಾ...' ಎಂಬ ಡೈಲಾಗ್ ನಂತೆ ಸ್ಯಾಂಡಲ್ ವುಡ್ ನಲ್ಲಿ 'ಸ್ಟಾರ್' ಸಿನಿಮಾಗಳು ತೆರೆಗೆ ಬಂದ್ರೆ ಮಾತ್ರ ಮಸ್ತ್ ಹವಾ, ಮಾಸ್ ಮೇನಿಯಾ, ಹಿಸ್ಟೀರಿಯಾ ಎಲ್ಲಾ....

ಈಗ ಯಾವುದಪ್ಪಾ ಅಂತಹ ಸ್ಟಾರ್ ಸಿನಿಮಾ ತೆರೆಗೆ ಬರ್ತಿದೆ ಅಂತ ತಲೆಗೆ ಹುಳ ಬಿಟ್ಕೊಂಡ್ರಾ.? ಸ್ಟಾರ್ ಸಿನಿಮಾಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ನವ ಪ್ರತಿಭೆ ಅನೂಪ್ ರೇವಣ್ಣ ಗಾಂಧಿನಗರದ ಗಲ್ಲಿಗಲ್ಲಿಗಳಲ್ಲೂ 'ಹೊಸ ಹವಾ' ಕ್ರಿಯೇಟ್ ಮಾಡಿದ್ದಾರೆ. [ಬೆಂಕಿ ಜೊತೆ ಸರಸವಾಡಿದ 'ಲಕ್ಷ್ಮಣ' ಹೀರೋ ಅನೂಪ್]


ಬರುವ ಶುಕ್ರವಾರ ಅಂದ್ರೆ, ಜೂನ್ 24ನೇ ತಾರೀಖು ಆರ್.ಚಂದ್ರು ನಿರ್ದೇಶನದ, ಅನೂಪ್ ರೇವಣ್ಣ ಅಭಿನಯದ ಚೊಚ್ಚಲ ಸಿನಿಮಾ 'ಲಕ್ಷ್ಮಣ' ಬಿಡುಗಡೆ ಆಗುತ್ತಿದೆ. ಬರೀ ಕರ್ನಾಟಕ ರಾಜ್ಯದಲ್ಲಿ ಮಾತ್ರ ಬಿಡುಗಡೆ ಆಗ್ಬಹುದು ಅಂತ ಥಿಯೇಟರ್ ಲೆಕ್ಕ ಹಾಕಬೇಡಿ. ನಿಮ್ಮೆಲ್ಲರ ನಿರೀಕ್ಷೆಗೂ ಮೀರಿ 'ಲಕ್ಷ್ಮಣ' ಅಂತರಾಷ್ಟ್ರೀಯ ಮಟ್ಟದಲ್ಲಿ ತಮಟೆ ಬಾರಿಸುತ್ತಿದ್ದಾನೆ. ಮುಂದೆ ಓದಿ....


12 ದೇಶಗಳಲ್ಲಿ 'ಲಕ್ಷ್ಮಣ' ರಿಲೀಸ್.!

'ಲಕ್ಷ್ಮಣ' ಸಿನಿಮಾ ಲಂಡನ್, ಯು.ಎಸ್.ಎ, ಸಿಂಗಾಪುರ, ಹಾಂಗ್ ಕಾಂಗ್, ಕಾಂಬೋಡಿಯಾ, ಮಲೇಶಿಯಾ ಸೇರಿದಂತೆ ಒಟ್ಟು 12 ವಿವಿಧ ದೇಶಗಳಲ್ಲಿ ಜೂನ್ 24 ರಂದೇ ಬಿಡುಗಡೆ ಆಗುತ್ತಿದೆ. ಸ್ಯಾಂಡಲ್ ವುಡ್ ಮಟ್ಟಿಗೆ ಇದು ಹೊಸ ದಾಖಲೆ. ['ಲಕ್ಷ್ಮಣ', ಆರ್.ಚಂದ್ರು, ಮೇಘನಾ ರಾಜ್ ಸುತ್ತ ಏನಿದು ಗಾಸಿಪ್ಪು.?]


ಸ್ಟಾರ್ ಸಿನಿಮಾಗಳೇ ಅಪರೂಪ.!

ಸ್ಯಾಂಡಲ್ ವುಡ್ ನ ಸ್ಟಾರ್ ಸಿನಿಮಾಗಳೇ ಏಕಕಾಲಕ್ಕೆ ವಿದೇಶಗಳಲ್ಲಿ ಬಿಡುಗಡೆ ಆಗುವುದು ತೀರಾ ಅಪರೂಪ. ಅಂಥದ್ರಲ್ಲಿ, ಅನೂಪ್ ರೇವಣ್ಣ ಚೊಚ್ಚಲ ಚಿತ್ರಕ್ಕೆ ಇಷ್ಟೊಂದು ಹೈಪ್ ಸಿಕ್ಕಿದೆ ಅಂದ್ರೆ ಸ್ವಲ್ಪ ಯೋಚಿಸಿ. ['ಲಕ್ಷ್ಮಣ'ನಿಗೆ 'ದಶರಥ'ನಾದ ಕ್ರೇಜಿಸ್ಟಾರ್ ರವಿಚಂದ್ರನ್]


ದಕ್ಷಿಣ ಭಾರತದಲ್ಲೂ ಅಬ್ಬರ.!

ಪಕ್ಕದ ಆಂಧ್ರ ಪ್ರದೇಶ ಹಾಗೂ ತಮಿಳುನಾಡಿನಲ್ಲೂ 'ಲಕ್ಷ್ಮಣ' ಏಕಕಾಲಕ್ಕೆ ತೆರೆಗೆ ಅಪ್ಪಳಿಸುತ್ತಿರುವುದು ಮತ್ತೊಂದು ವಿಶೇಷ.


ಎಚ್.ಎಂ.ರೇವಣ್ಣ ಬೆಂಬಲಿಗರ ಸಾಥ್.!

ಹೇಳಿ ಕೇಳಿ 'ಲಕ್ಷ್ಮಣ', ಕಾಂಗ್ರೆಸ್ ನಾಯಕ ಎಚ್.ಎಂ.ರೇವಣ್ಣ ಪುತ್ರ ಅನೂಪ್ ರೇವಣ್ಣ ಅಭಿನಯದ ಸಿನಿಮಾ. ವಿದೇಶಗಳಲ್ಲಿ ಎಚ್.ಎಂ.ರೇವಣ್ಣ ಅವರಿಗೆ ಬೆಂಬಲಿಗರು ಹಾಗೂ ಅಭಿಮಾನಿಗಳಿದ್ದಾರೆ. ಹೀಗಾಗಿ, ವಿದೇಶಗಳಲ್ಲಿರುವ ವಿವಿಧ ಸಂಘ-ಸಂಸ್ಥೆಗಳು 'ಲಕ್ಷ್ಮಣ' ಚಿತ್ರವನ್ನು ಬಿಡುಗಡೆ ಮಾಡಲು ಸ್ವಯಂ ಪ್ರೇರಿತವಾಗಿ ಮುಂದೆ ಬಂದಿದೆ.


ಡ್ಯಾನ್ಸ್ - ಫೈಟ್ ನಲ್ಲಿ ಅನೂಪ್ ಯಾರಿಗೂ ಕಮ್ಮಿ ಇಲ್ಲ.!

ಈಗಾಗಲೇ ಬಿಡುಗಡೆ ಆಗಿರುವ 'ಲಕ್ಷ್ಮಣ' ಟ್ರೈಲರ್ ಹಾಗೂ ಹಾಡುಗಳನ್ನ ನೋಡಿದ್ರೆ, ಅನೂಪ್ ರೇವಣ್ಣ ಪ್ರತಿಭಾವಂತ ಹಾಗೂ 'ಆಕ್ಷನ್ ಹೀರೋ' ಅನ್ನೋದು ಸಾಬೀತಾಗಿದೆ.


ಅನುಮಾನ ಬೇಡ.!

ಎಲ್ಲರ ನಾಲಿಗೆ ಮೇಲೂ 'ಲಕ್ಷ್ಮಣ' ನುಲಿದಾಡುತ್ತಿರುವುದನ್ನ ನೋಡಿದ್ರೆ, ಅನೂಪ್ ರೇವಣ್ಣ ಭರವಸೆಯ 'ಸ್ಟಾರ್' ಆಗುವುದರಲ್ಲಿ ಯಾವುದೇ ಅನುಮಾನ ಬೇಡ.


'ಲಕ್ಷ್ಮಣ' ಕುರಿತು....

'ಲಕ್ಷ್ಮಣ' ಚಿತ್ರದಲ್ಲಿ ಅನೂಪ್ ರೇವಣ್ಣಗೆ ಮೇಘನಾ ರಾಜ್ ಜೋಡಿ. ಪೊಲೀಸ್ ಆಫೀಸರ್ ಪಾತ್ರದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಮಿಂಚಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಹಾಡುಗಳು ಈಗಾಗಲೇ ಹಿಟ್ ಆಗಿವೆ. 'ಲಕ್ಷ್ಮಣ' ಕೂಡ ಹಿಟ್ ಆದ್ರೆ, ಆರ್.ಚಂದ್ರು ಜೈತಯಾತ್ರೆಗೆ ಹೊಸ ಸೇರ್ಪಡೆ ಆದ ಹಾಗೆ.


English summary
Congress Politician H.M.Revanna's son Anup Revanna starrer R.Chandru directorial 'Lakshmana' is all set to release on June 24th in Karnataka as well as 12 foreign countries.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada