For Quick Alerts
  ALLOW NOTIFICATIONS  
  For Daily Alerts

  ಮತ್ತೆ ತಾತನಾದ ಸಾರಾ ಗೋವಿಂದು: ಗಂಡು ಮಗುವಿಗೆ ಜನ್ಮ ನೀಡಿದ ಅನೂಪ್ ದಂಪತಿ

  |

  ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ, ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಹಾಗೂ ಕನ್ನಡ ಪರ ಹೋರಾಟಗಾರ ಸಾರಾ ಗೋವಿಂದು ಮತ್ತೆ ತಾತನಾಗಿದ್ದಾರೆ. ಸಾರಾ ಗೋವಿಂದು ಅವರಿಗೆ ಒಟ್ಟು ಮೂವರು ಮಕ್ಕಳು. ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗ (ಅನೂಪ್).

  ಸಾರಾ ಗೋವಿಂದು ಅವರ ಮಗ ಅನೂಪ್ ಸಾರಾ ಗೋವಿಂದು ಮತ್ತು ಮೇಘನಾ ದಂಪತಿ ಈಗ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಂತಸದ ವಿಚಾರವನ್ನು ಸ್ವತಃ ಸಾರಾ ಗೋವಿಂದು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮುಂದೆ ಓದಿ...

  ಮತ್ತೆ ತಾತನಾದ ಸಂತಸ

  ಮತ್ತೆ ತಾತನಾದ ಸಂತಸ

  ಮತ್ತೆ ತಾತನಾದ ಸಂತಸ!! ನಮ್ಮ ಮನೆಗೆ ಇಂದು ಗಂಡು ಮಗುವನ್ನು ಬರಮಾಡಿಕೊಳ್ಳುತ್ತಿದ್ದೆವೆ. ನನ್ನ ಮಗ ಅನೂಪ್ ಹಾಗೂ ಮೇಘನಾ ಇಂದು ಅಪ್ಪ ಅಮ್ಮನ ಜವಾಬ್ದಾರಿ ಹೊತ್ತು ಸುಖ ಸಂಸಾರಕ್ಕೆ ಮತ್ತಷ್ಟು ಮೆರುಗು ತಂದಿದ್ದಾರೆ. ನಿಮ್ಮ ಮುಂದಿನ ಜೀವನ ಸುಖಕರವಾಗಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ'' ಎಂದು ಸಾರಾ ಗೋವಿಂದು ತಿಳಿಸಿದ್ದಾರೆ.

  ಮೇಘನಾ ಜೊತೆಗೆ ಹಸೆಮಣೆ ಏರಿದ ಅನೂಪ್ ಸಾ.ರಾ. ಗೋವಿಂದುಮೇಘನಾ ಜೊತೆಗೆ ಹಸೆಮಣೆ ಏರಿದ ಅನೂಪ್ ಸಾ.ರಾ. ಗೋವಿಂದು

  ನಮ್ಮ ಕನಸು ನನಸಾಗಿದೆ

  ನಮ್ಮ ಕನಸು ನನಸಾಗಿದೆ

  ಗಂಡು ಮಗುವನ್ನು ಸ್ವಾಗತಿಸಿರುವ ಬಗ್ಗೆ ಅನೂಪ್ ಸಹ ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ''ನಮ್ಮ ಕನಸು ನನಸಾಗಿದೆ'' ಎಂದು ಸಂತಸ ಹಂಚಿಕೊಂಡಿದ್ದಾರೆ.

  2018ರಲ್ಲಿ ಮದುವೆ ಆಗಿದ್ದ ಅನೂಪ್

  2018ರಲ್ಲಿ ಮದುವೆ ಆಗಿದ್ದ ಅನೂಪ್

  2018ರ ಫೆಬ್ರವರಿ 19 ರಂದು ನಟ ಅನೂಪ್ ಸಾರಾ ಗೋವಿಂದು ಮದುವೆ ಆಗಿತ್ತು. ಮೇಘನಾ ಅವರ ಜೊತೆ ಸಪ್ತಪದಿ ತುಳಿದಿದ್ದ ಅನೂಪ್ ಈಗ ತಂದೆಯಾಗುತ್ತಿದ್ದಾರೆ. ಯಲಹಂಕದ ಇಬಿಸು ಕನ್ವೆಷನಲ್ ಹಾಲ್‌ನಲ್ಲಿ ಅನೂಪ್ ಸಾರಾ ಗೋವಿಂದು ಅವರ ವಿವಾಹ ಮಹೋತ್ಸವ ಜರುಗಿತ್ತು. ಬೆಳ್ಳಗೆ 10.15 ರ ಶುಭ ಮೇಷ ಲಗ್ನದಲ್ಲಿ ಮುಹೂರ್ತ ಕಾರ್ಯಕ್ರಮ ನಡೆದಿತ್ತು. ತಿರುಪತಿ ಶೈಲಿಯ ಮಂಟಪದಲ್ಲಿ ಅನೂಪ್, ಮೇಘನಾ ಅವರಿಗೆ ಮಾಂಗಲ್ಯಧಾರಣೆ ಮಾಡಿದ್ದರು.

  ಇದು ಕನ್ನಡದ ಹೆಣ್ಣು ಮಗಳ ಹೃದಯ | Pranitha | Filmibeat Kannada
  ಪುನೀತ್ ರಾಜ್ ಕುಮಾರ್ ಭಾಗಿ

  ಪುನೀತ್ ರಾಜ್ ಕುಮಾರ್ ಭಾಗಿ

  ಅನೂಪ್ ಸಾರಾ ಗೋವಿಂದು ಮತ್ತು ಮೇಘನಾ ಮದುವೆಗೆ ನಟ ಪುನೀತ್ ರಾಜ್ ಕುಮಾರ್, ರಮೇಶ್, ಮಾಲಾಶ್ರೀ, ಪ್ರೇಮಾ, ದೇವರಾಜ್, ನಿರ್ದೇಶಕ ಭಾರ್ಗವ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಪಾಲ್ಗೊಂಡಿದ್ದರು. 2015ರಲ್ಲಿ ಡವ್ ಚಿತ್ರದ ಮೂಲಕ ಇಂಡಸ್ಟ್ರಿ ಪ್ರವೇಶಿಸಿದ ಅನೂಪ್ ಸಾಗುವ ದಾರಿಯಲ್ಲಿ ಹಾಗೂ ಮಿಸ್ಟರ್ ಪರ್ಫೆಕ್ಟ್ ಎನ್ನುವ ಚಿತ್ರ ಮಾಡಿದ್ದರು.

  English summary
  Kannada producer sa ra govindu has become grandfather again. his son Anup and meghana has welcomes baby boy today.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X