For Quick Alerts
  ALLOW NOTIFICATIONS  
  For Daily Alerts

  ವಿಡಿಯೋ: ಅನುಷ್ಕಾ, ಹೃತಿಕ್, ದೀಪಿಕಾ ಫೇವರೆಟ್ ವ್ಯಾಯಾಮ ಯಾವುದು.?

  By Bharath Kumar
  |
  ಮೋದಿಗೆ ಚಾಲೆಂಜ್ ಮಾಡಿದ ವಿರಾಟ್ ಕೊಹ್ಲಿ | Filmibeat Kannada

  ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋರ್ ಇತ್ತೀಚಿಗಷ್ಟೆ ಫಿಟ್ನೆಸ್ ಕುರಿತು ಹೊಸದೊಂದು ಅಭಿಯಾನ ಆರಂಭಿಸಿದ್ದರು. ಈ ಅಭಿಯಾನದ ಪರಿಣಾಮ ಸ್ಟಾರ್ ನಟ-ನಟಿಯರು ಹಾಗೂ ದೇಶದ ಗಣ್ಯ ವ್ಯಕ್ತಿಗಳ ಫಿಟ್ನೆಸ್ ಹಿಂದಿನ ಗುಟ್ಟೇನು ಎಂದು ಬಹಿರಂಗವಾಗಿದೆ.

  ''ಹಮ್ ಫಿಟ್ ತೋ ಇಂಡಿಯಾ ಫಿಟ್ (hum fit to india fit)'' ಎಂಬ ಹ್ಯಾಷ್ಸ ಟ್ಯಾಗ್ ಬಳಸಿ ಶುರುವಾದ ಈ ಅಭಿಯಾನಕ್ಕೆ ಮೊದಲು ಕ್ರಿಕೆಟಿಗ ವಿರಾಟ್ ಕೊಹ್ಲಿ ಸಮ್ಮತಿ ಸೂಚಿಸಿ, ತಮ್ಮ ಫಿಟ್ನೆಸ್ ಮಂತ್ರವೇನು ಎಂಬುದರ ಬಗ್ಗೆ ವಿಡಿಯೋ ಹಂಚಿಕೊಂಡ್ರು.

  ನಂತರ ವಿರಾಟ್ ಕೊಹ್ಲಿ ಪತ್ನಿ ನಟಿ ಅನುಷ್ಕಾ ಶರ್ಮಾ, ನಟ ಹೃತಿಕ್ ರೋಷನ್, ದೀಪಿಕಾ, ಶಿಲ್ಪಾ ಶೆಟ್ಟಿ, ನಾಗ ಚೈತನ್ಯ ಸೇರಿದಂತೆ ಹಲವರು ವಿಡಿಯೋ ಶೇರ್ ಮಾಡಿದ್ದಾರೆ. ಹಾಗಿದ್ರೆ, ಯಾವ ಸೆಲೆಬ್ರಿಟಿಗಳ ಫಿಟ್ನೆಸ್ ಏನು ಎಂದು ಮುಂದೆ ನೋಡಿ.....

  ಮೋದಿಗೆ ಚಾಲೆಂಜ್ ಮಾಡಿದ ಕೊಹ್ಲಿ

  ಕೇಂದ್ರ ಸಚಿವರ ಫಿಟ್ನೆಸ್ ಅಭಿಯಾನಕ್ಕೆ ಪ್ರತಿಕ್ರಿಯಿಸಿ ವಿರಾಟ್ ಕೊಹ್ಲಿ ತಮ್ಮ ನೆಚ್ಚಿನ ವ್ಯಾಯಾಮವನ್ನ ಮಾಡಿ, ನಂತರ ಪತ್ನಿ ಅನುಷ್ಕಾ ಶರ್ಮಾ, ಕ್ರಿಕೆಟಿಗ ಎಂ.ಎಸ್ ಧೋನಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸವಾಲು ಹಾಕಿದರು.

  ಪತಿಯ ಚಾಲೆಂಜ್ ಸ್ವೀಕರಿಸಿದ ಅನುಷ್ಕಾ

  ವಿರಾಟ್ ಕೊಹ್ಲಿ ನೀಡಿದ ಚಾಲೆಂಜ್ ಸ್ವೀಕರಿಸಿದ ಪತ್ನಿ ಅನುಷ್ಕಾ ಶರ್ಮಾ ತಮ್ಮ ನೆಚ್ಚಿನ ವ್ಯಾಯಾಮವನ್ನ ಮಾಡುವ ವಿಡಿಯೋ ಶೇರ್ ಮಾಡಿಕೊಂಡರು. ನಂತರ ನಟ ವರುಣ್ ಧವನ್, ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಳ್ಳಿಕಲ್ ಹೆಸರನ್ನು ಸೂಚಿಸಿದರು.

  ಸವಾಲು ಸ್ವೀಕರಿಸಿದ ಹೃತಿಕ್ ರೋಷನ್

  ಫಿಟ್ನೆಸ್ ಅಭಿಯಾನಕ್ಕೆ ಕೈಜೋಡಿಸಿದ ನಟ ಹೃತಿಕ್ ರೋಶನ್ ತಮ್ಮ ಗುಟ್ಟನ್ನು ಹಂಚಿಕೊಂಡಿದ್ದಾರೆ. ಸೈಕ್ಲಿಂಗ್ ಮಾಡುವ ಮೂಲಕ ಫಿಟ್ನೆಸ್ ಅಭಿಯಾನಕ್ಕೆ ಜೈ ಎಂದಿದ್ದಾರೆ. ಕಾರಿನಲ್ಲಿ ಓಡಾಡುವುದು ಸುಮ್ಮನೆ ವ್ಯರ್ಥ. ನಡಿಗೆ, ಸೈಕಲ್, ಓಟ, ಪರಿಸರವನ್ನು ಅನುಭವಿಸಿ ಎಂದು ವಿಡಿಯೋ ಹಂಚಿಕೊಂಡಿದ್ದಾರೆ

  ಯೋಗ ಮಾಡಿದ ಶಿಲ್ಪಾ ಶೆಟ್ಟಿ

  ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕೂಡ ಈ ಅಭಿಯಾನಕ್ಕೆ ಸಾಥ್ ನೀಡಿದ್ದು, ಹಮ್ ಫಿಟ್ ತೋ ಇಂಡಿಯಾ ಫಿಟ್ ಸವಾಲು ಸ್ವೀಕರಿಸಿದ್ದಾರೆ. ತಮ್ಮ ನೆಚ್ಚಿನ ವ್ಯಾಯಮ ಯೋಗವನ್ನ ಮಾಡಿ ವಿಡಿಯೋ ಹಂಚಿಕೊಂಡಿದ್ದಾರೆ.

  ತಮ್ಮನ ಸವಾಲು ಸ್ವೀಕರಿಸಿದ ನಾಗ್ ಚೈತನ್ಯ

  ತೆಲುಗು ನಟ ನಾಗಚೈತನ್ಯ ಕೂಡ ಫಿಟ್ನೆಸ್ ಅಭಿಯಾನಕ್ಕೆ ಕೈ ಜೋಡಿಸಿದ್ದು, ತಮ್ಮ ನೆಚ್ಚಿನ ವ್ಯಾಯಮ ಮಾಡಿ ವಿಡಿಯೋ ಶೇರ್ ಮಾಡಿದ್ದಾರೆ. ನಂತರ ಪತ್ನಿ ಸಮಂತಾ ಅಕ್ಕಿನೇನಿ ಈ ಚಾಲೆಂಜ್ ಹಾಕಿದ್ದಾರೆ.

  ರನ್ ದೀಪಿಕಾ ರನ್

  ಹಮ್ ಫಿಟ್ ತೋ ಇಂಡಿಯಾ ಫಿಟ್ ಅಭಿಯಾನದ ಸವಾಲು ಸ್ವೀಕರಿಸಿದ ನಟಿ ದೀಪಿಕಾ ಪಡುಕೋಣೆ ರನ್ ಮಾಡುವ ಮೂಲಕ ಸಾಥ್ ನೀಡಿದ್ದಾರೆ. ಫಿಟ್ನೆಸ್ ಗೆ ಹೆಚ್ಚಿನ ಆಧ್ಯತೆ ನೀಡುವ ದೀಪಿಕಾ ತನ್ನ ನೆಚ್ಚಿನ ವ್ಯಾಯಮ ಇದು ಎಂದಿದ್ದಾರೆ.

  ಸವಾಲು ಸ್ವೀಕರಿಸಿದ ಮೋದಿ

  ಕ್ರಿಕೆಟಿಗ ವಿರಾಟ್ ಕೊಹ್ಲಿ ನೀಡಿದ ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿದ ಪ್ರಧಾನಿ ನರೇಂದ್ರ ಸದ್ಯದಲ್ಲೇ ನನ್ನ ಫಿಟ್ನೆಸ್ ಹಿಂದಿನ ಗುಟ್ಟನ್ನ ಬಹಿರಂಗಪಡಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. ಇನ್ನು ವಿಡಿಯೋ ಹಂಚಿಕೊಂಡಿಲ್ಲ.

  English summary
  Anushka sharma nag chaithanya, Shilpa shetty and Deepika padukone Posted Fitness Video For 'hum fit toh india fit campaign'

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X