For Quick Alerts
  ALLOW NOTIFICATIONS  
  For Daily Alerts

  71ನೇ ಶತಕ ಬಾರಿಸಿದ ಪತಿ ಕೊಹ್ಲಿ ಬಗ್ಗೆ ಅನುಷ್ಕಾ ಪೋಸ್ಟ್; ಹಾರ್ಟ್ ಕಾಮೆಂಟ್ ಮಾಡಿದ ರಣ್‌ವೀರ್

  |

  ವಿರಾಟ್ ಕೊಹ್ಲಿ ನಿನ್ನೆ ( ಸೆಪ್ಟೆಂಬರ್ 8 ) ನಡೆದ ಭಾರತ ಮತ್ತು ಅಫ್ಘಾನಿಸ್ತಾನ ತಂಡಗಳ ನಡುವಿನ ಏಷ್ಯಾಕಪ್ ಪಂದ್ಯದಲ್ಲಿ ಶತಕ ಬಾರಿಸಿ ಮೂರು ವರ್ಷಗಳಿಂದ ಶತಕ ಬಾರಿಸದೇ ಇದ್ದ ಬರವನ್ನು ನೀಗಿಸಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ತಮ್ಮ ಕ್ರಿಕೆಟ್ ವೃತ್ತಿ ಜೀವನದ 71ನೇ ಅಂತರರಾಷ್ಟ್ರೀಯ ಶತಕವನ್ನು ಪೂರೈಸಿದ್ದು, ಕೊಹ್ಲಿ ಅಭಿಮಾನಿಗಳು ಈ ಘಳಿಗೆಯನ್ನು ಹಬ್ಬದ ರೀತಿ ಸಂಭ್ರಮಿಸಿದ್ದಾರೆ.

  ಇನ್ನು ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಕೂಡ ತನ್ನ ಪತಿಯ ಈ ಕಮ್ ಬ್ಯಾಕ್ ಅನ್ನು ಸಂಭ್ರಮಿಸಿದ್ದು, ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕೊಹ್ಲಿ ಕುರಿತಾಗಿ ವಿಶೇಷ ಪೋಸ್ಟ್ ಹಾಕುವ ಮೂಲಕ ಸಂತಸ ಹಾಗೂ ಕೊಹ್ಲಿ ಮೇಲಿನ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ವಿರಾಟ್ ಕೊಹ್ಲಿ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿದಾಗ ಸಂಭ್ರಮಿಸಿದ ಪೋಟೊಗಳನ್ನು ಹಂಚಿಕೊಂಡಿರುವ ಅನುಷ್ಕಾ ಶರ್ಮಾ ಯಾವುದೇ ಸಂದರ್ಭದಲ್ಲಿಯೂ ಶಾಶ್ವತವಾಗಿ ನಿಮ್ಮೊಂದಿಗೆ, ಪ್ರೀತಿ ಅನಂತ ಎಂದು ಬರೆದುಕೊಂಡಿದ್ದಾರೆ.

  ಅನುಷ್ಕಾ ಶರ್ಮಾ ಹಾಕಿರುವ ಈ ಪೋಸ್ಟ್ ಕುರಿತು ಹಲವಾರು ಸೆಲೆಬ್ರಿಟಿಗಳು ಕಾಮೆಂಟ್ ಮಾಡಿದ್ದು, ಬಾಲಿವುಡ್ ರಣ್‌ವೀರ್ ಸಿಂಗ್ ಹಾರ್ಟ್ ಎಮೋಜಿಯೊಂದನ್ನು ಹಾಕಿದ್ದಾರೆ, ಕೆಎಲ್ ರಾಹುಲ್ ಪ್ರೇಯಸಿ ಅಥಿಯಾ ಶೆಟ್ಟಿ ಸಹ ಹಾರ್ಟ್ ಎಮೋಜಿ ಹಾಕಿದ್ದಾರೆ ಹಾಗೂ ನಟಿ ಶ್ರದ್ಧಾ ಕಪೂರ್ ವಾಟ್ ಎ ಮೂಮೆಂಟ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಈ ಪೋಸ್ಟ್ ಕುರಿತು ಕಾಮೆಂಟ್ ಮಾಡಿರುವ ನೆಟ್ಟಿಗರು ಕಪಲ್ ಗೋಲ್ಸ್ ಹಾಗೂ ಯಾವಾಗಲೂ ಹೀಗೆ ಅನ್ಯೋನ್ಯವಾಗಿರಿ ಎಂದು ಕಾಮೆಂಟ್ಸ್ ಮಾಡಿದ್ದಾರೆ.

  English summary
  Anushka Sharma shares a special post as Virat Kohli scored his 71st century. Take a look

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X