»   » 'ಬಾಹುಬಲಿ' ಚಿತ್ರದ ಅನುಷ್ಕಾ ಶೆಟ್ಟಿ ಫಸ್ಟ್ ಲುಕ್ ರಿಲೀಸ್

'ಬಾಹುಬಲಿ' ಚಿತ್ರದ ಅನುಷ್ಕಾ ಶೆಟ್ಟಿ ಫಸ್ಟ್ ಲುಕ್ ರಿಲೀಸ್

Posted By:
Subscribe to Filmibeat Kannada

ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಬಾಹುಬಲಿ' ಚಿತ್ರದ ಮತ್ತೊಂದು ಪೋಸ್ಟರ್ ಬಿಡುಗಡೆಯಾಗಿದೆ. ಈಗಾಗಲೆ ನಾಯಕ ನಟ ಪ್ರಭಾಸ್ ಅವರ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಇದೀಗ ಚಿತ್ರದ ನಾಯಕಿ ಅನುಷ್ಕಾ ಶೆಟ್ಟಿ ಫಸ್ಟ್ ಲುಕ್ ರಿಲೀಸ್ ಮಾಡಿದ್ದಾರೆ ರಾಜಮೌಳಿ.

ಈ ಚಿತ್ರದಲ್ಲಿ ಅನುಷ್ಕಾ ಅವರ ಪಾತ್ರದ ಹೆಸರು ದೇವಸೇನ. ಹೆಸರು ಕೇಳಿದರೆ ಇದೇನೋ ಪುರುಷರ ಹೆಸರಿದ್ದಂಗಿದೆ ಅನ್ನಿಸುತ್ತದೆ. ಅದೇನು ಕಥೆಯೋ ಏನೋ ಗೊತ್ತಿಲ್ಲ. ಚಿತ್ರ ಬಿಡುಗಡೆಯಾದ ಬಳಿಕವಷ್ಟೇ ಆ ಹೆಸರಿನ ಮರ್ಮ ಗೊತ್ತಾಗುವುದು. ನಟ ಪ್ರಭಾಸ್ ಗೆ ಜೋಡಿಯಾಗಿ ಅನುಷ್ಕಾ ಕಾಣಿಸಲಿದ್ದಾರೆ. [ದಂಗುಬಡಿಸುವ ರಾಜಮೌಳಿ 'ಬಾಹುಬಲಿ' ಚಿತ್ರದ ಸೆಟ್ಸ್]

Anushka Shetty first look in Baahubali

ಮೇ.31ರಂದು ಚಿತ್ರದ ಥಿಯೇಟ್ರಿಕಲ್ ಟ್ರೇಲರ್ ಬಿಡುಗಡೆ ಮಾಡುತ್ತಿದ್ದಾರೆ. ಅಲ್ಲಿಯವರೆಗೂ ಸಿನಿಮಾದ ವಿವಿಧ ಪಾತ್ರಗಳಿಗೆ ಸಂಬಂಧಿಸಿದ ಫಸ್ಟ್ ಲುಕ್ ಬಿಡುಗಡೆ ಮಾಡುತ್ತಾ ಪ್ರಚಾರ ಮಾಡಲು ಪ್ಲಾನ್ ಮಾಡಲಾಗಿದೆ. ಬಾಹುಬಲಿ ಚಿತ್ರ ಎರಡು ಭಾಗಗಳಾಗಿ ಬಿಡುಗಡೆಯಾಗಲಿದೆ.

ಸರಿಸುಮಾರು ರು.150 ಕೋಟಿ ಬಜೆಟ್ ನಲ್ಲಿ ನಿರ್ಮಿಸಿರುವ ಚಿತ್ರ ಇದು ಎಂಬುದು ಟಾಲಿವುಡ್ ಟಾಕ್. ಹಾಲಿವುಡ್ ಸಿನಿಮಾ ರೇಂಜ್ ನಲ್ಲಿರುವ ಈ ಚಿತ್ರವನ್ನು ಎರಡು ಭಾಗಗಳಾಗಿ ಬಿಡುಗಡೆ ಮಾಡಲಾಗುತ್ತಿದೆ. ಒಂದಕ್ಕೆ 'ಬಾಹುಬಲಿ ದಿ ಬಿಗಿನಿಂಗ್' ಎಂದು ಹೆಸರಿಡಲಾಗಿದೆ. ದಂಗುಬಡಿಸುವ ವಿಜ್ಯುಯಲ್ ಎಫೆಕ್ಟ್ಸ್ ಈ ಚಿತ್ರದ ಪ್ರಮುಖ ಹೈಲೈಟ್ಸ್ ಗಳಲ್ಲಿ ಒಂದು.

ಬಾಹುಬಲಿ ಚಿತ್ರದ ಚಿತ್ರೀಕರಣ ಮುಗಿದಿದ್ದು, ಇದೀಗ ಪೋಸ್ಟ್ ಪ್ರೊಡಕ್ಷನ್ ವರ್ಕ್ ನಲ್ಲಿ ಬಿಜಿಯಾಗಿದೆ. ಪ್ರಭಾಸ್, ರಾಣಾ, ಅನುಷ್ಕಾ ಶೆಟ್ಟಿ, ತಮನ್ನಾ, ಸತ್ಯರಾಜ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿದ್ದಾರೆ. ಟಾಲಿವುಡ್ ಚಿತ್ರೋದ್ಯಮದ ಇತಿಹಾಸದಲ್ಲೇ ಇದೊಂದು ಅತ್ಯದ್ಭುತ ಚಿತ್ರ ಎನ್ನಲಾಗಿದೆ. ಸದ್ಯಕ್ಕೆ ಮೊದಲ ಭಾಗಕ್ಕೆ ಸಂಬಂಧಿಸಿದ ನಿರ್ಮಾಣನಂತರದ ಕೆಲಸಗಳು ಭರದಿಂದ ಸಾಗುತ್ತಿವೆ.

English summary
Actress Anushka Shetty first look in Baahubali relased. The actress appeared as Devasena In Baahubali, tweeted filmmaker SS Rajamoli.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada