For Quick Alerts
  ALLOW NOTIFICATIONS  
  For Daily Alerts

  ನಟಿ ಅನುಷ್ಕಾ ಶೆಟ್ಟಿ ಮನೆಯಲ್ಲಿ ಕೋಲ! ಕಮ್‌ಬ್ಯಾಕ್‌ಗೆ ಮುನ್ನ ದೈವದ ಆಶೀರ್ವಾದ ಪಡೆದ ನಟಿ

  By ಮಂಗಳೂರು ಪ್ರತಿನಿಧಿ
  |

  ಕೆಲವು ವರ್ಷಗಳ ಹಿಂದೆಯಷ್ಟೆ ದಕ್ಷಿಣ ಭಾರತದ ಟಾಪ್ ನಟಿಯಾಗಿದ್ದ ಕರ್ನಾಟಕ ಮೂಲದ ನಟಿ ಅನುಷ್ಕಾ ಶೆಟ್ಟಿ ಈಗ ಚಿತ್ರರಂಗದಿಂದ ಬಹುತೇಕ ದೂರವಾಗಿದ್ದಾರೆ.

  ಸಿನಿಮಾ ಸಂಬಂಧಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದನ್ನೂ ಸಹ ಬಹುತೇಕ ಕಡಿಮೆ ಮಾಡಿರುವ ಅನುಷ್ಕಾ ಶೆಟ್ಟಿ ಆಗಾಗ್ಗೆ ತಮ್ಮ ಕುಟುಂಬದೊಡನೆ ದೇವಸ್ಥಾನಗಳಲ್ಲಿ, ಪುಣ್ಯ ಕ್ಷೇತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಮಂಗಳೂರಿನ ತಮ್ಮ ಮನೆಯಲ್ಲಿ ಮಾಡಿಸಿರುವ ದೈವ ಕೋಲದಲ್ಲಿ ಭಾಗಿಯಾಗಿದ್ದಾರೆ.

  ಪುತ್ತೂರಿನ ಉರುವಾಲು ಅನುಷ್ಕಾ ಶೆಟ್ಟಿಯ ಹುಟ್ಟೂರು. ಈ ಮನೆಯಲ್ಲಿ ಇತ್ತೀಚೆಗಷ್ಟೆ ದೈವಗಳ ವಾರ್ಷಿಕ ನೇಮೋತ್ಸವ ನಡೆದಿದ್ದು ಕೋಲದಲ್ಲಿ ನಟಿ ಅನುಷ್ಕಾ ಶೆಟ್ಟಿ ಭಾಗಿಯಾಗಿದ್ದರು.

  ಮೊಬೈಲ್‌ನಲ್ಲಿ ಸೆರೆಹಿಡಿದ ಅನುಷ್ಕಾ ಶೆಟ್ಟಿ

  ಮೊಬೈಲ್‌ನಲ್ಲಿ ಸೆರೆಹಿಡಿದ ಅನುಷ್ಕಾ ಶೆಟ್ಟಿ

  ಕುಟುಂಬದ ದೈವಗಳಾದ ಪಂಜುರ್ಲಿ ಹಾಗೂ ಪರಿವಾರ ದೈವಗಳ ನೇಮೋತ್ಸವದಲ್ಲಿ ತನ್ನ ತಂದೆ ತಾಯಿ ಅಣ್ಣ ಸೇರಿದಂತೆ ಕುಟುಂಬದ ಇತರ ಸದಸ್ಯರೊಂದಿಗೆ ಆಗಮಿಸಿದ್ದ ಅನುಷ್ಕಾ, ರಾತ್ರಿ ಪೂರ್ತಿ ದೈವಗಳ ನೇಮೋತ್ಸವ ನೋಡಿದ್ದಾರೆ. ದೈವ ಕೋಲದ ಕೆಲವು ದೃಶ್ಯಗಳನ್ನು ನಟಿ ಅನುಷ್ಕಾ ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ದೈವದ ವೀಡಿಯೋ ಮಾಡ್ತಿರುವ ಅನುಷ್ಕಾ ಶೆಟ್ಟಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಹೊಸ ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ

  ಹೊಸ ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ

  'ಬಾಹುಬಲಿ-2' ಚಿತ್ರದ ಬಳಿಕ ರಾಷ್ಟ್ರದಾದ್ಯಂತ ಸಿನಿರಸಿಕರ ಮೆಚ್ಚುಗೆ ಗಳಿಸಿದ ಅನುಷ್ಕಾ ಬಳಿಕ 'ನಿಶಬ್ಧಂ' ಸಿನಿಮಾದಲ್ಲಿ ಅನುಷ್ಕಾ ಕಾಣಿಸಿಕೊಂಡಿದ್ದರು. ಆದರೆ ಆ ಬಳಿಕ ಬಹಳ ಸಮಯದವರೆಗೆ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಳ್ಳದ ಟಾಲಿವುಡ್ ಸ್ವೀಟಿ ಹೊಸ ಪ್ರತಿಭೆ ನವೀನ್ ಪೋಲಿ ಶೆಟ್ಟಿ ಜೊತೆ ಹೊಸ ಚಿತ್ರದ ಮೂಲಕ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಚಿತ್ರ ನಿರ್ಮಾಣದ ಸಂಧರ್ಭದಲ್ಲಿ ಎಲ್ಲಿಯೂ ಹೊರಗೆ ಕಾಣಿಸಿಕೊಳ್ಳದೇ ಚಿತ್ರದ ಬಗ್ಗೆ ಸೀಕ್ರೆಟ್ ಇಟ್ಟುಕೊಂಡಿದ್ದರು. ತುಂಬಾ ಸಮಯದ ಬಳಿಕ ಅನುಷ್ಕಾ ಈಗ ಬಹಿರಂಗವಾಗಿ ಕಾಣಿಸಿಕೊಂಡಿದ್ದು ತಮ್ಮ ಮನೆಯ ಕೋಲದಲ್ಲಿ ಅನುಷ್ಕಾ ಕಾಣಿಸಿಕೊಂಡಿದ್ದಾರೆ.

  ಪ್ರತಿವರ್ಷ ದೈವಗಳಿಗೆ ನರ್ತನ ಸೇವೆ

  ಪ್ರತಿವರ್ಷ ದೈವಗಳಿಗೆ ನರ್ತನ ಸೇವೆ

  ಅನುಷ್ಕಾ ಶೆಟ್ಟಿಯ ಯ ಹುಟ್ಟು ಮನೆ ಉರುಮಾಲು ನಲ್ಲಿ ಪ್ರತಿವರ್ಷ ದೈವಗಳಿಗೆ ನರ್ತನ ಸೇವೆ ನಡೆಯುತ್ತಿದ್ದು, ಕೊವೀಡ್ ಬಳಿಕ ನಡೆಯದ ದೈವ ಕೋಲ ಈ ಬಾರಿ ಅದ್ಧೂರಿಯಾಗಿ ನಡೆದಿದೆ. ಈ ಸಂಧರ್ಭದಲ್ಲಿ ಅನುಷ್ಕಾ ಶೆಟ್ಟಿ ಸಹೋದರ, ಉದ್ಯಮಿ, ಜಯಕರ್ನಾಟಕ ಸಂಘಟನೆಯ ನೇತಾರ ಗುಣರಂಜನ್ ಶೆಟ್ಟಿ ಸೇರಿದಂತೆ ಬಂಧುಮಿತ್ರರು ಭಾಗವಹಿಸಿದ್ದರು. ಚಿತ್ರರಂಗದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಲು ಸಜ್ಜಾಗಿರುವ ಅನುಷ್ಕಾ ಶೆಟ್ಟಿ ಇದೇ ಕಾರಣಕ್ಕೆ ದೈವದ ಆಶೀರ್ವಾದ ಪಡೆಯಲೆಂದೇ ಕೋಲದಲ್ಲಿ ಭಾಗವಹಿಸಿದ್ದರು ಎನ್ನಲಾಗುತ್ತಿದೆ.

  English summary
  Famous actress Anushka Shetty participated in Daiva Kola in her Mangalore home with family.
  Tuesday, December 20, 2022, 18:02
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X