For Quick Alerts
  ALLOW NOTIFICATIONS  
  For Daily Alerts

  ಸುರಕ್ಷತೆ ಎಲ್ಲಿದೆ? ಪ್ರಿಯಾಂಕಾ ರೆಡ್ಡಿ ಹತ್ಯೆ ವಿರುದ್ಧ ಅನುಷ್ಕಾ, ಕೀರ್ತಿ, ರಶ್ಮಿಕಾ, ಅನಿರುದ್ಧ್ ಆಕ್ರೋಶ

  |

  ತೆಲಂಗಾಣದಲ್ಲಿ ನಡೆದ ಪಶು ವೈದ್ಯೆ ಪ್ರಿಯಾಂಕಾ ರೆಡ್ಡಿ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ಇಡೀ ದೇಶವನ್ನೆ ಬೆಚ್ಚಿಬೀಳಿಸಿದೆ. ಪಶು ವೈದ್ಯೆ ಹತ್ಯೆ ವಿರುದ್ಧ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಜೊತೆಗೆ ದಕ್ಷಿಣ ಭಾರತೀಯ ಚಿತ್ರರಂಗದ ಕಲಾವಿದರು ಕೂಡ ಪ್ರಿಯಾಂಕಾ ರೆಡ್ಡಿ ಹತ್ಯೆ ವಿರದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.

  ಸ್ಯಾಂಡಲ್ ವುಡ್ ಮಂದಿ ಈ ನಟಿಯರನ್ನ 'ಹೀಗೆ' ಬಳಸಿಕೊಳ್ಳುವುದು ಸರಿಯೇ?ಸ್ಯಾಂಡಲ್ ವುಡ್ ಮಂದಿ ಈ ನಟಿಯರನ್ನ 'ಹೀಗೆ' ಬಳಸಿಕೊಳ್ಳುವುದು ಸರಿಯೇ?

  ನಟಿಯರಾದ ಅನುಷ್ಕಾ ಶೆಟ್ಟಿ, ಕೀರ್ತಿ ಸುರೇಶ್, ರಶ್ಮಿಕಾ ಮಂದಣ್ಣ ಮತ್ತು ನಟ ಅನಿರುದ್ಧ್ ಸೇರಿದಂತೆ ಅನೇಕ ಕಲಾವಿದರು ಆಕ್ರೋಶ ಹೊರಹಾಕಿದ್ದಾರೆ. ಮಹಿಳೆಯರು ಸಮಾಜದಲ್ಲಿ ಇರುವುದೆ ಅಪರಾಧನಾ? ಎಂದು ನಟಿ ಅನುಷ್ಕಾ ಶೆಟ್ಟಿ ಪ್ರಶ್ನೆಮಾಡಿದ್ದಾರೆ. ಮಹಿಳೆಯರಿಗೆ ಸುರಕ್ಷತೆ ಎಲ್ಲಿದೆ? ಎಂದು ರಶ್ಮಿಕಾ ಮಂದಣ್ಣ ಕೇಳುತ್ತಿದ್ದಾರೆ.

  ಸಮಾಜದಲ್ಲಿ ಮಹಿಳೆಯರು ಇರುವುದೆ ಅಪರಾಧನಾ?

  ಸಮಾಜದಲ್ಲಿ ಮಹಿಳೆಯರು ಇರುವುದೆ ಅಪರಾಧನಾ?

  ನಟಿ ಅನುಷ್ಕಾ ಶೆಟ್ಟಿ, ಹತ್ಯೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಮುಗ್ದ ಪ್ರಿಯಾಂಕಾ ರೆಡ್ಡಿ ಮೇಲೆ ಅತ್ಯಾಚಾರ ನಡೆಸಿ ಕೊಲ್ಲಲಾಗಿದೆ. ಇದು ಇಡೀ ಮನುಕುಲವನ್ನೆ ಕದಲಿಸುವ ವಿಚಾರ. ಪ್ರಯಾಂಕಾಳನ್ನು ಕೊಂದ ಪಾಪಿಗಳನ್ನು ಪ್ರಾಣಿಗಳಿಗೆ ಹೋಲಿಸಿದರೆ ಅವು ಕೂಡ ನಾಚಿಕೆ ಪಡುತ್ತವೆ. ಈ ಸಮಾಜದಲ್ಲ ಮಹಿಳೆಯಾಗಿ ಇರುವುದೆ ಅಪರಾಧನಾ? ಅಪರಾಧಿಗಳಿಗೆ ಶಿಕ್ಷೆಯಾಗುವವರೆಗೂ ಹೋರಾಟ ನಡೆಸೋಣ. ಪಶು ವೈದ್ಯೆಯ ಧಾರುಣ ಸಾವಿಗೆ ತೀವ್ರ ಸಂತಾಪ" ಎಂದು ಹೇಳಿದ್ದಾರೆ.

  ಸುರಕ್ಷತೆ ಎಲ್ಲಿದೆ?

  ಸುರಕ್ಷತೆ ಎಲ್ಲಿದೆ?

  ನಟಿ ರಶ್ಮಿಕಾ ಮಂದಣ್ಣ ಕೂಡ ಬೇಸರ ಹೊರಹಾಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ರಶ್ಮಿಕಾ "ಸುರಕ್ಷತೆ ಎಲ್ಲಿದೆ? ಕೆಟ್ಟ ವಿಷಯಗಳು ಹಾಗೂ ಹಿಂಸಾಚಾರವನ್ನು ನಿರ್ಲಕ್ಷ್ಯಿಸುವುದರಿಂದ ಪರಿಹಾರ ಸಿಗುವುದಿಲ್ಲ. ನೀವು ಸುರಕ್ಷತೆ ಇಲ್ಲ ಎಂದು ಭಾವಿಸಿದಾಗ ದಯವಿಟ್ಟು ಸಹಾಯಕ್ಕಾಗಿ ತಲುಪಿ" ಎಂದು ಒಂದಿಷ್ಟು ಫೋನೋ ನಂಬರ್ ಗಳನ್ನು ಶೇರ್ ಮಾಡಿದ್ದಾರೆ.

  ಕೀರ್ತಿ ಸುರೇಶ್

  ಕೀರ್ತಿ ಸುರೇಶ್

  ನಟಿ ಕೀರ್ತಿ ಸುರೇಶ್ ಕೂಡ ಆಕ್ರೋಶ ಹೊರಹಾಕಿದ್ದಾರೆ. "ಪ್ರಿಯಾಂಕಾ ರೆಡ್ಡಿಯನ್ನು ರೇಪ್ ಮಾಡಿ ಜೀವಂತವಾಗಿ ಸುಟ್ಟು ಹಾಕಿರುವುದನ್ನು ನೋಡಿ ನನ್ನ ಎದೆ ಹೊಡೆದುಹೋಯಿತು. ಈ ಸಮಯದಲ್ಲಿ ನನಗೆ ಮಾತನಾಡಲು ಆಗುತ್ತಿಲ್ಲ. ಯವುದೆ ಸಮಯದಲ್ಲಿ ಮಹಿಳೆಯರು ತಿರುಗಾಡಲು ನಮ್ಮ ದೇಶ ಯಾವಾಗ ಸುರಕ್ಷಿತವಾಗಿದೆ. ಎಲ್ಲಾ ಕ್ರೂರ ಸೈಕೋಪಾಥೀಸ್ ಗಳನ್ನು ಬೇಟಿಯಾಡಬೇಕು ಮತ್ತು ಅಂತವರನ್ನು ಬೇಗ ಶಿಕ್ಷಿಸಬೇಕು. ಪ್ರಿಯಾಂಕಾ ರೆಡ್ಡಿ ಕುಟುಂಬಕ್ಕೆ ದುಃಖ ಬರಿಸುವ ಶಕ್ತಿ ಕೊಡಲಿ. ನನಗೆ ಕರ್ಮದಲ್ಲಿ ನಂಬಿಕೆ ಇದೆ" ಎಂದು ಬರೆದುಕೊಂಡಿದ್ದಾರೆ.

  ಕನಿಷ್ಟಪಕ್ಷ ಕಠಿಣ ಶಿಕ್ಷೆಯಿಂದಾದರೂ ಕೊಡಿ

  ಕನಿಷ್ಟಪಕ್ಷ ಕಠಿಣ ಶಿಕ್ಷೆಯಿಂದಾದರೂ ಕೊಡಿ

  ನಟ ಅನಿರುದ್ಧ "ವಿಕೃತ ಮನಸ್ಸುಗಳು ಬದಲಾಗುವ ವರೆಗೂ ಇಂತಹ ಹ್ಯೇಯ ಕೃತ್ಯ ನಿಲ್ಲದು.‌ ಹೆಣ್ಣನ್ನು ನೋಡಿದಾಗ ಹೆತ್ತವಳು ನೆನಪಾಗಬೇಕೇ ಹೊರತು ಕೆಟ್ಟ ಆಲೋಚನೆಗಳಲ್ಲ. ಆ ದಿನ ರಾತ್ರಿ ಆ ಹೆಣ್ಣು ಮಗಳು ಇದ್ದ ಸ್ಥಿತಿಯ ಅರೆ ಕ್ಷಣ ಊಹಿಸಿಕೊಂಡರೂ ಮುಂದಿನ ಕ್ಷಣದ ಊಹೆ ಬೇಡವೆನಿಸುವುದು. ಆ ಹೆಣ್ಣು ಮಗಳ ಮತ್ತೆ ಬದುಕಿಸಲು ಯಾರಿಂದಲೂ ಸಾಧ್ಯವಿಲ್ಲವೆಂಬುದು ತಿಳಿದಿದೆ. ಆದರೆ ಕನಿಷ್ಟಪಕ್ಷ ಕಠಿಣ ಶಿಕ್ಷೆಯಿಂದಾದರೂ ಬೇರೆ ಕ್ರೂರ ಮನಸ್ಸುಗಳ ಒಳಗೆ ಭಯ ಮೂಡಿ ಮುಂದೆಂದೂ ಇಂತಹ ಹ್ಯೇಯ ಕೃತ್ಯ ನಡೆಯದಿರಲಿ. ಕೆಟ್ಟ ಮನಸ್ಸುಗಳು ಬದಲಾಗಲಿ. ಕೆಟ್ಟ ಆಲೋಚನೆಗಳು ಬದಲಾಗಲಿ. ಕಷ್ಟವಾದರೂ, ಆ ತಂದೆ ತಾಯಿಗೆ ನೋವ ತಡೆಯುವ ಶಕ್ತಿ ನೀಡಲಿ ಭಗವಂತ" ಎಂದು ದೀರ್ಘವಾಗಿ ಬರೆದುಕೊಂಡಿದ್ದಾರೆ.

  English summary
  Actress Anushka shetty, Keerti Suresh, Rashmika Mandanna and other stars react to Priyanka Reddy rap and murder.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X