»   » ಪವನ್ ಕಲ್ಯಾಣ್ ವಿರುದ್ಧ ನೀಡಿದ್ದ ಹೇಳಿಕೆಗೆ ಕ್ಷಮೆ ಕೇಳಿದ ನಟಿ

ಪವನ್ ಕಲ್ಯಾಣ್ ವಿರುದ್ಧ ನೀಡಿದ್ದ ಹೇಳಿಕೆಗೆ ಕ್ಷಮೆ ಕೇಳಿದ ನಟಿ

Posted By:
Subscribe to Filmibeat Kannada
ಪವನ್ ಕಲ್ಯಾಣ್ ರನ್ನು ಕಾಮುಕ ಅಂದಾಕೆ ಏನ್ ಆದಳು ?| Pawan kalyan is a gentle man| Filmibeat Kannada

ತೆಲುಗು ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ವಿರುದ್ಧವಾಗಿ ನಟಿ ಶ್ರುತಿ ನೀಡಿದ್ದ ಹೇಳಿಕೆಗೆ ಇಂಡಸ್ಟ್ರಿಯಲ್ಲಿ ತೀವ್ರ ಖಂಡನೆ ವ್ಯಕ್ತವಾಗಿದೆ. ''ಪವನ್ ಕಲ್ಯಾಣ್ ಅವರು ಬೆಂಗಾಳಿ ಹುಡುಗಿಯರಿಂದ ಮಸಾಜ್ ಮಾಡಿಸಿಕೊಳ್ಳುತ್ತಾರೆ'' ಎಂಬ ಆರೋಪವನ್ನ ಶ್ರುತಿ ಮಾಡಿದ್ದರು. ಈ ಆರೋಪದ ಬಗ್ಗೆ ಮತ್ತೊಬ್ಬ ನಟಿ ಅಪೂರ್ವ ಈಗ ಮಾತನಾಡಿದ್ದು, ಬಹಿರಂಗವಾಗಿ ಪವನ್ ಕಲ್ಯಾಣ್ ಅವರಿಗೆ ಕ್ಷಮೆ ಕೇಳಿದ್ದಾರೆ.

ಇತ್ತೀಚಿಗಷ್ಟೆ ನಡೆದ ಸುದ್ದಿಗೋಷ್ಠಿಯೊಂದರಲ್ಲಿ ಹಲವು ನಟಿಯರು ಭಾಗವಹಿಸಿ ಮಾತನಾಡಿದ್ದರು. ಈ ವೇಳೆ ಶ್ರುತಿ ಮಾತನಾಡುತ್ತಾ ''ಪವನ್ ಕಲ್ಯಾಣ್ ಅವರು ಅಭಿಮಾನಿಗಳಿಗೆ ಏನೂ ಮಾಡಿಲ್ಲ. ಅಭಿಮಾನಿಗಳನ್ನ ಬಳಸಿಕೊಂಡು ರಾಜಕೀಯ ಪ್ರವೇಶ ಮಾಡಿದ್ದಾರೆ. ಬೆಂಗಾಳಿ ಹುಡುಗಿಯರಿಂದ ಮಸಾಜ್ ಮಾಡಿಸಿಕೊಳ್ಳುತ್ತಾರೆ'' ಎಂದು ವಾಗ್ದಾಳಿ ನಡೆಸಿದ್ದರು.

Apoorva Says Sorry To Pawan Kalyan

ಪವನ್ ಕಲ್ಯಾಣ್ ಬೆಂಗಾಳಿ ಹುಡುಗಿಯರಿಂದ ಮಸಾಜ್ ಮಾಡಿಸಿಕೊಳ್ತಾರಂತೆ.!

'ಕಾಸ್ಟಿಂಗ್ ಕೌಚ್' ವಿರುದ್ಧ ಟಾಲಿವುಡ್ ಇಂಡಸ್ಟ್ರಿಯ ಹಲವಯ ನಟಿಯರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಮಧ್ಯೆ ನಟಿ ಶ್ರೀರೆಡ್ಡಿ ''ನಮ್ಮ ಹೋರಾಟಕ್ಕೆ ಪವನ್ ಕಲ್ಯಾಣ್ ಅಣ್ಣಾ ಅವರು ಬೆಂಬಲ ನೀಡಬೇಕು'' ಎಂದು ಮನವಿ ಮಾಡಿದ್ದರು. ನಂತರ ಈ ಬಗ್ಗೆ ಮಾತನಾಡಿದ್ದ ಪವನ್ ಕಲ್ಯಾಣ್ ''ಯುವತಿಯರಿಗೆ ಅನ್ಯಾಯವಾಗುತ್ತಿರುವಾಗ ಪ್ರತಿಭಟನೆ ಮಾಡಿದ್ರೆ ಏನೂ ಆಗಲ್ಲ. ಪೊಲೀಸ್ ಗೆ ದೂರು ನೀಡಿ. ಅವರಿಗೆ ಸರಿಯಾದ ಶಿಕ್ಷೆ ಸಿಗುತ್ತೆ'' ಎಂದಿದ್ದರು.

ಎಲ್ಲರನ್ನ ಬಿಟ್ಟು ಕೊನೆಗೆ ಪವನ್ ಕಲ್ಯಾಣ್ ಬಳಿ ಬಂದ ಶ್ರೀರೆಡ್ಡಿ

ಇದರಿಂದ ಸ್ವಲ್ಪ ಆಕ್ರೋಶಗೊಂಡ ನಟಿಯರು ಪೊಲೀಸರು ದೂರು ಸ್ವೀಕರಿಸುತ್ತಿಲ್ಲವೆಂದೇ ಹೋರಾಟ ಮಾಡುತ್ತಿರುವುದು ಎಂದು ಪವನ್ ಸಲಹೆಗೆ ಬೇಸರ ಮಾಡಿಕೊಂಡರು.

Apoorva Says Sorry To Pawan Kalyan

ಇದೀಗ, ನಟಿ ಅಪೂರ್ವ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ''ನಮ್ಮ ಹೋರಾಟ ಈ ಸಮಸ್ಯೆಯ ವಿರುದ್ಧ ಮಾತ್ರ. ಇಲ್ಲಿ ಯಾರ ವೈಯಕ್ತಿಕ ವಿಚಾರಗಳು ಬೇಡ. ಅವರೆಲ್ಲರ ಪರವಾಗಿ ನಾನು ಪವನ್ ಕಲ್ಯಾಣ್ ಅವರಿಗೆ ಕ್ಷಮೆ ಕೇಳುತ್ತಿದ್ದೇನೆ. ಯಾಕಂದ್ರೆ, ಅವರ ಮಾನವೀಯತೆ ಬಗ್ಗೆ ಅವರೆಲ್ಲರಿಗಿಂತ ನನಗೆ ಚೆನ್ನಾಗಿ ಗೊತ್ತಿದೆ. ಯಾರಿಗಾದರೂ ಸಮಸ್ಯೆ ಅಂದ್ರೆ, ಪವನ್ ಕಲ್ಯಾಣ್ ಮೊದಲು ಬರ್ತಾರೆ'' ಎಂದಿದ್ದಾರೆ.

ಒಟ್ನಲ್ಲಿ, ತೆಲುಗು ಇಂಡಸ್ಟ್ರಿಯಲ್ಲಿ ನಡೆಯುತ್ತಿರುವ ಕಾಸ್ಟಿಂಗ್ ಕೌಚ್ ಹೋರಾಟದಲ್ಲಿ ದೊಡ್ಡ ದೊಡ್ಡ ನಟ, ನಿರ್ದೇಶಕ, ನಿರ್ಮಾಪಕರ ಹೆಸರುಗಳು ಪ್ರಸ್ತಾಪವಾಗುತ್ತಿರುವುದು ನಿಜಕ್ಕೂ ಆತಂಕಕ್ಕೆ ಕಾರಣವಾಗಿದೆ.

English summary
Recently actress Shruthi lashed out at the so-called 'heroes' and 'heroines' of Tollywood and Urging women not to vote for Jana Sena Party chief, Pawan Kalyan, she said that he 'wants Bengali women for massage.' Now actress Apoorva condemned Shruthi comments and Says Sorry To Pawan Kalyan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X