»   » 'ಆಪ್ತಮಿತ್ರ' 'ಆಪ್ತರಕ್ಷಕ' ಚಿತ್ರಗಳ ನಂತರ ಇದೀಗ 'ಆಪ್ತಮಿತ್ರ 2' ಸಿನಿಮಾ ಶುರು!

'ಆಪ್ತಮಿತ್ರ' 'ಆಪ್ತರಕ್ಷಕ' ಚಿತ್ರಗಳ ನಂತರ ಇದೀಗ 'ಆಪ್ತಮಿತ್ರ 2' ಸಿನಿಮಾ ಶುರು!

Posted By:
Subscribe to Filmibeat Kannada
Apthamitra 2, Kannada Movie shooting to start from November | Filmibeat Kannada

'ಆಪ್ತಮಿತ್ರ' ಕನ್ನಡ ಚಿತ್ರರಂಗದಲ್ಲಿ ಮೈಲಿಗಲ್ಲು ಸಿನಿಮಾ. ವರ್ಷಗಳ ಕಾಲ ತೆರೆ ಮೇಲೆ ಮಿಂಚಿದ್ದ ಈ ಸಿನಿಮಾ ನಟ ವಿಷ್ಣುವರ್ಧನ್ ಅವರ ಕೆರಿಯರ್ ನ ಒಂದು ಪ್ರಮುಖ ಚಿತ್ರವಾಗಿದೆ. ಇಂತಹ ಸೂಪರ್ ಹಿಟ್ ಚಿತ್ರದ ಹೆಸರಿನಲ್ಲಿ ಮತ್ತೆ ಈಗ ಸಿನಿಮಾವೊಂದು ಬರುತ್ತಿದೆ.

13 ವರ್ಷಗಳ ಬಳಿಕ ಮತ್ತೆ ಕನ್ನಡದಲ್ಲಿ 'ಆಪ್ತಮಿತ್ರ 2' ಚಿತ್ರ ಬರಲಿದೆ. 'ಆಪ್ತಮಿತ್ರ' ನಂತರ 'ಆಪ್ತರಕ್ಷಕ' ಸಿನಿಮಾ ಬಂದ್ದಿತ್ತು. ಆದರೆ ಈ ಚಿತ್ರದ ನಂತರ ಇದೀಗ 'ಆಪ್ತಮಿತ್ರ 2' ಎಂಬ ಹೆಸರಿನಲ್ಲಿ ಹೊಸ ಸಿನಿಮಾ ಶುರುವಾಗುತ್ತಿದೆ. ವಿಶೇಷ ಅಂದರೆ 'ಆಪ್ತಮಿತ್ರ' ಚಿತ್ರದ ನಿರ್ದೇಶಕ ಪಿ.ವಾಸು ಅವರೇ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ಮುಂದೆ ಓದಿ...

'ಆಪ್ತಮಿತ್ರ 2' ಚಿತ್ರ

'ಆಪ್ತಮಿತ್ರ' ಚಿತ್ರದ ನಂತರ 13 ವರ್ಷಗಳ ಬಳಿಕ ಈಗ 'ಆಪ್ತಮಿತ್ರ 2' ಹೆಸರಿನಲ್ಲಿ ಸಿನಿಮಾ ಬರುತ್ತಿದೆ. 'ಆಪ್ತಮಿತ್ರ' ಮತ್ತು 'ಆಪ್ತರಕ್ಷಕ' ಚಿತ್ರವನ್ನು ಮಾಡಿದ್ದ ನಿರ್ದೇಶಕ ಪಿ.ವಾಸು ಅವರೇ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.

ರಮೇಶ್ ಯಾದವ್ ನಿರ್ಮಾಣ

ನಿರ್ಮಾಪಕ ರಮೇಶ್ ಯಾದವ್ 'ಆಪ್ತಮಿತ್ರ 2' ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. ಇದು ಅವರ ನಿರ್ಮಾಣದ 21ನೇ ಸಿನಿಮಾವಾಗಿದೆ.

'ಅರನ್ಮನೈ' ರಿಮೇಕ್ ಚಿತ್ರ

ತಮಿಳಿನ ಹಾರರ್ ಚಿತ್ರ 'ಅರನ್ಮನೈ' ಈಗ ಕನ್ನಡಕ್ಕೆ 'ಆಪ್ತಮಿತ್ರ 2' ಚಿತ್ರವಾಗಿ ಬರಲಿದೆ. 2014ರಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರವನ್ನು ನಟಿ ಖುಷ್ಬು ಅವರ ಪತಿ ಸುಂದರ್.ಸಿ ನಟಿಸಿ ನಿರ್ದೇಶನ ಮಾಡಿದ್ದರು.

ಕಲಾವಿದರ ಆಯ್ಕೆ ನಡೆಯುತ್ತಿದೆ

'ಆಪ್ತಮಿತ್ರ 2' ಸಿನಿಮಾದ ನಟ, ನಟಿ, ಉಳಿದ ಕಲಾವಿದರು ಹಾಗೂ ತಾಂತ್ರಿಕ ವರ್ಗದ ಆಯ್ಕೆಯ ಪ್ರಕ್ರಿಯೆ ಸದ್ಯ ನಡೆಯುತ್ತಿದೆ.

ನವೆಂಬರ್ ನಲ್ಲಿ ಪ್ರಾರಂಭ

'ಆಪ್ತಮಿತ್ರ 2' ಸಿನಿಮಾ ಇದೇ ನವೆಂಬರ್ ತಿಂಗಳಿನಲ್ಲಿ ಶುರುವಾಗಲಿದೆ.

English summary
'Apthamitra 2' movie will be start on this november. the movie will directed by p.vasu.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada