»   » ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿರ್ದೇಶಕ ಅಪೂರ್ವ ಕಾಸರವಳ್ಳಿ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿರ್ದೇಶಕ ಅಪೂರ್ವ ಕಾಸರವಳ್ಳಿ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನ ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ಪುತ್ರ ಅಪೂರ್ವ ಕಾಸರವಳ್ಳಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಬೆಂಗಳೂರು ಮೂಲದ ನೃತ್ಯಗಾರ್ತಿ ವಂದನಾ ಸುಪ್ರಿಯಾ ಅವರ ಜೊತೆ ನಿನ್ನೆ (ಏಪ್ರಿಲ್ 17) ಸಪ್ತಪದಿ ತುಳಿದಿದ್ದಾರೆ.

ಯಲಹಂಕದ ಬಳಿಯಿರುವ ರಾಯಲ್ ಆರ್ಕಿಡ್ ರೆಸಾರ್ಟ್ ಹಾಗೂ ಕನ್ವೆಕ್ಷನ್ ಹಾಲ್ ನಲ್ಲಿ ಅಪೂರ್ವ ಮತ್ತು ವಂದನಾ ಅವರ ವಿವಾಹ ಮಹೋತ್ಸವ ಕಾರ್ಯಕ್ರಮವನ್ನ ಹಮ್ಮಿಕೊಂಡಿದ್ದು, ಕುಟುಂಬಸ್ಥರು, ಹಿರಿಯರು, ರಾಜಕೀಯ ವ್ಯಕ್ತಿಗಳು, ಚಲನಚಿತ್ರ ಗಣ್ಯರು ಭಾಗಿಯಾಗಿದ್ದರು.

Apurva Kasaravalli weds Vandana Supriya

ಅಪೂರ್ವ ಮತ್ತು ವಂದನಾ ಅವರು ವಿವಾಹ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಸದ ವೀರಪ್ಪ ಮೋಯ್ಲಿ, ನಟಿ ಗಿರಿಜಾ ಲೋಕೇಶ್, ಜಯಮಾಲ, ವಿನಯ ಪ್ರಸಾದ್, ನಿರ್ದೇಶಕ ಎಸ್.ವಿ ರಾಜೇಂದ್ರ ಸಿಂಗ್ ಬಾಬು, ನಟ ಪ್ರಕಾಶ್ ರೈ, ರಮೇಶ್ ಅರವಿಂದ್, ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಸುಂದರ್ ರಾಜ್, ರಮೇಶ್ ಭಟ್ ಸೇರಿದಂತೆ ಹಲವು ಗಣ್ಯರು ಸಾಕ್ಷಿಯಾಗಿದ್ದು, ನವ ದಂಪತಿಗಳಿಗೆ ಶುಭಕೋರಿದರು.

Apurva Kasaravalli weds Vandana Supriya

ವೃತ್ತಿಯಲ್ಲಿ ಚಲನಚಿತ್ರ ನಿರ್ದೇಶಕರಾಗಿರುವ ಅಪೂರ್ವ ಕಾಸರವಳ್ಳಿ ಅವರು 'ನಿರುತ್ತರ' ಚಿತ್ರವನ್ನ ನಿರ್ದೇಶನ ಮಾಡಿದ್ದರು. ಹಾಗೂ ತಂದೆ ಗಿರೀಶ್ ಕಾಸರವಳ್ಳಿ ನಿರ್ದೇಶನದ 'ಕೂರ್ಮಾವತಾರ' ಮತ್ತು ದ್ವೀಪಾ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು.

English summary
Apurva Kasaravalli, Director and son of famous Filmmaker Girish Kasaravalli is Married Odissi Dancer Vandana Supriya on Monday (april 17th).

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada