For Quick Alerts
  ALLOW NOTIFICATIONS  
  For Daily Alerts

  ನಾವು ನಿರ್ಗತಿಕರಲ್ಲ, ಪ್ರೇಮ್ ವಿರುದ್ಧ ಎ.ಆರ್ ಬಾಬು ಆಕ್ರೋಶ

  By Pavithra
  |

  ಕಿಚ್ಚ ಸುದೀಪ್ ಹಾಗೂ ಶಿವರಾಜ್ ಕುಮಾರ್ ಅಭಿನಯದ ದಿ ವಿಲನ್ ಚಿತ್ರದ ಟೀಸರ್ ಇದೇ ತಿಂಗಳ ಜೂನ್ 28 ರಂದು ಬಿಡುಗಡೆ ಆಗುತ್ತಿದೆ. ಟೀಸರ್ ನೋಡಲು 500 ರೂಪಾಯಿ ಟಿಕೆಟ್ ಕೂಡ ಮಾಡಲಾಗಿದೆ. ಟಿಕೆಟ್ ದರದಿಂದ ಬರುವ ಹಣವನ್ನು ಕಷ್ಟದಲ್ಲಿರುವ ನಿರ್ದೇಶಕರಿಗೆ ನೀಡುವುದಾಗಿ ನಟ ನಿರ್ದೇಶಕ ಪ್ರೇಮ್ ನಿನ್ನೆ ಫೇಸ್ ಬುಕ್ ಲೈವ್ ನಲ್ಲಿ ಹೇಳಿಕೊಂಡಿದ್ದರು.

  ಲೈವ್ ನಲ್ಲಿ ಮಾತನಾಡುವಾಗ ನಿರ್ದೇಶಕ ಪ್ರೇಮ್, ಕನ್ನಡ ಸಿನಿಮಾರಂಗದಲ್ಲಿ ನಿರ್ಗತಿಕರಾಗಿರುವ ನಿರ್ದೇಶಕರಿಗೆ ಸಹಾಯ ಮಾಡಲು ಈ ಆಲೋಚನೆ ಮಾಡಿದ್ದೇವೆ. ಎ ಟಿ ರಘು ಹಾಗೂ ಎ ಆರ್ ಬಾಬು ರಂತಹ ಸಾಕಷ್ಟು ಜನರು ನಿರ್ಗತಿಕರಿದ್ದಾರೆ. ಅವರಿಗೆ ನಮ್ಮದೊಂದು ಸಣ್ಣ ಸಹಾಯ ಎಂದಿದ್ದರು.

  ಸದ್ಯ ನಿರ್ಗತಿಕರು ಎನ್ನುವ ಮಾತೇ ಎ.ಆರ್ ಬಾಬು ಆಕ್ರೋಶ ಕಾರಣವಾಗಿದೆ. ಪ್ರೇಮ್ ನಿರ್ಗತಿಕರು ಎಂದು ಹೇಳಿದ್ದು ಸರಿ ಅಲ್ಲ. ಕನ್ನಡ ನಿರ್ದೇಶಕರಿಗೆ ಸಹಾಯ ಮಾಡುವ ಅವರ ಆಲೋಚನೆಗೆ ನಾನು ಸಂತಸ ವ್ಯಕ್ತ ಪಡಿಸುತ್ತೇನೆ. ಆದರೆ ನಿರ್ಗತಿಕರು ಯಾರು? ನಮಗಾಗಿ ವಾಣಿಜ್ಯ ಮಂಡಳಿ ಇದೆ. ನಿರ್ಮಾಕರ ಸಂಘ ಇದೆ.


  ದೊಡ್ಡ ನಿರ್ದೇಶಕರಾಗಿರುವ ಪ್ರೇಮ್ ಈ ರೀತಿ ಮಾಡುವುದು ಸರಿಯಲ್ಲ ಎಂದು ಎ ಆರ್ ಬಾಬು ಹೇಳಿಕೆ ಕೊಟ್ಟಿದ್ದಾರೆ. ಅದಷ್ಟೇ ಅಲ್ಲದೆ ಪ್ರೇಮ್ ಕ್ಷಮೆ ಕೇಳಬೇಕು ಎಂದಿದ್ದಾರೆ. ಒಟ್ಟಾರೆ ಒಂದು ಒಳ್ಳೆ ಕೆಲಸ ಮಾಡುವಾಗ ನೂರಾರು ತೊಂದರೆ ಎನ್ನುವಂತೆ, ಪ್ರೇಮ್ ಹಾಗೂ ದಿ ವಿಲನ್ ಮಾಡಲು ಹೊರಟಿರುವ ಉತ್ತಮ ಕೆಲಸಕ್ಕೆ ಆರಂಭದಲ್ಲಿಯೇ ವಿಘ್ನ ಉಂಟಾಗಿದೆ.
  English summary
  Kannada director AR Babu has been disappointed with director Prem. AR Babu is Senior director of Kannada industry is currently suffering from illness.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X