Don't Miss!
- News
ಫಾರೆನ್ಸಿಕ್ ಕ್ಯಾಂಪಸ್ ಶಂಕುಸ್ಥಾಪನೆಗೆ ಆಗಮಿಸಲಿರುವ ಅಮಿತ್ ಶಾ: ಧಾರವಾಡದಲ್ಲಿ ಭಾರಿ ಬಿಗಿ ಭದ್ರತೆ
- Sports
Ind vs NZ1st T20: ವಾಶಿಂಗ್ಟನ್ 'ಸುಂದರ' ಆಟ ವ್ಯರ್ಥ: ಭಾರತಕ್ಕೆ ಮೊದಲ ಪಂದ್ಯದಲ್ಲೇ ಸೋಲಿನ ಆಘಾತ
- Lifestyle
2023ರಲ್ಲಿ ರಾಜಯೋಗದಿಂದಾಗಿ ಈ 4 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗಲಿದೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್
- Finance
7th Pay Commission: ನೌಕರರಿಗೆ ಸಿಹಿ ಸುದ್ದಿ: ಬಾಕಿ DA ಹಣ ನೀಡಲು ಕೇಂದ್ರ ಸರ್ಕಾರ ನಿರ್ಧಾರ, ಹೇಗೆ?
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ನಾಗರಹಾವು' ತಂಡವನ್ನ ಹಾಡಿ ಹೊಗಳಿದ ಎ.ಆರ್.ರೆಹಮಾನ್
ಕಷ್ಟ ಎಂದವರಿಗೆ ಸಹಾಯ ಮಾಡಲೂ ಹಿಂದು ಮುಂದು ನೋಡುವ ಕಾಲ ಇದು. ಅಂಥದ್ರಲ್ಲಿ, ಡಾ.ವಿಷ್ಣುವರ್ಧನ್ ಹೆಸರಲ್ಲಿ ಜನರಿಗೆ ಸಹಾಯ ಮಾಡಬೇಕು ಅಂತ ಮುಂದೆ ಬಂದವರು 'ನಾಗರಹಾವು' ಚಿತ್ರದ ನಿರ್ಮಾಪಕ ಸಾಜಿದ್ ಖುರೇಶಿ.
'ನಾಗರಹಾವು' ಚಿತ್ರದ ಆಡಿಯೋ ರಿಲೀಸ್ ಹೆಸರಿನಲ್ಲಿ ದುಂದು ವೆಚ್ಚ ಮಾಡದೆ, ಅದೇ ದುಡ್ಡನ್ನ ಅಸಹಾಯಕ ಬಡ ರೋಗಿಗಳಿಗೆ ನೀಡುವ ಉದಾರ ಮನೋಭಾವ ತೋರಿದ ಸಾಜಿದ್ ಖುರೇಶಿ ಹಾಗೂ 'ನಾಗರಹಾವು' ಚಿತ್ರತಂಡವನ್ನ ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಹೊಗಳಿದ್ದಾರೆ. ['ಸಿಂಹ ಹಸ್ತ' ತಂಡದಿಂದ ಬಡ ರೋಗಿಗಳಿಗೆ ಸಹಾಯ ಹಸ್ತ]
ಚಿಕಿತ್ಸೆ ವೆಚ್ಚ ಭರಿಸಲು ಸಾಧ್ಯವಾಗದೆ, ಸರ್ಕಾರಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ಹೋರಾಟ ನಡೆಸುತ್ತಿರುವ ಬಡ ರೋಗಿಗಳಿಗೆ ಹಣ ಸಹಾಯ ಮಾಡುವ 'ನಾಗರಹಾವು' ಚಿತ್ರತಂಡದ 'ಸಿಂಹ ಹಸ್ತ' ಕಾರ್ಯಕ್ರಮಕ್ಕೆ ಎ.ಆರ್.ರೆಹಮಾನ್ ಕೂಡ ಕೈ ಜೋಡಿಸಿದ್ದಾರೆ. ಮುಂದೆ ಓದಿ....

50 ಸಾವಿರ ರೂಪಾಯಿ ನೀಡಿದ ಎ.ಆರ್.ರೆಹಮಾನ್
'ನಾಗರಹಾವು' ಚಿತ್ರತಂಡದ ಸಾಮಾಜಿಕ ಕಳಕಳಿ ಕಂಡು 'ಸಿಂಹ ಹಸ್ತ' ತಂಡದ ಮುಖಾಂತರ ಬಡ ರೋಗಿಗಳಿಗೆ 50 ಸಾವಿರ ರೂಪಾಯಿ ನೀಡಿದ್ದಾರೆ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್. [ಡಾ.ವಿಷ್ಣುವರ್ಧನ್ ಹೆಸರಿಗೆ ಅಕ್ಷರಶಃ ಶೋಭೆ ತರುವ ಕೆಲಸ ಇದು.!]

ಚೆಕ್ ಕೊಟ್ಟಿದ್ದಾರೆ
ತಮಗೆ ಎ.ಆರ್.ರೆಹಮಾನ್ ನೀಡಿರುವ 50 ಸಾವಿರ ರೂಪಾಯಿ ಚೆಕ್ ನ ನಿರ್ಮಾಪಕ ಸಾಜಿದ್ ಖುರೇಶಿ ಪ್ರೆಸ್ ಮೀಟ್ ನಲ್ಲಿ ತೋರಿಸಿದರು.

ರೆಹಮಾನ್ ಟ್ವೀಟ್ ಕೂಡ ಮಾಡಿದ್ದಾರೆ
'ಸಿಂಹ ಹಸ್ತ' ಕಾರ್ಯಕ್ರಮಕ್ಕೆ ಸಪೋರ್ಟ್ ಮಾಡಿರುವ ಕುರಿತು ಎ.ಆರ್.ರೆಹಮಾನ್ ಟ್ವೀಟ್ ಕೂಡ ಮಾಡಿದ್ದಾರೆ.

ಧನ್ಯವಾದ ಕೋರಿದ್ದಾರೆ ರಮ್ಯಾ
'ಸಿಂಹ ಹಸ್ತ' ಗೆ ಸಪೋರ್ಟ್ ಮಾಡಿರುವ ಎ.ಆರ್.ರೆಹಮಾನ್ ಗೆ ಧನ್ಯವಾದ ಅರ್ಪಿಸಿ ನಟಿ ರಮ್ಯಾ ಟ್ವೀಟ್ ಮಾಡಿದ್ದಾರೆ.

ಸಹಾಯ ಮಾಡಿರುವ ಇತರರು
'ಸಿಂಹ ಹಸ್ತ' ಕಾರ್ಯಕ್ರಮಕ್ಕೆ ಪೆನ್ ಮೂವೀಸ್ ವತಿಯಿಂದ 1 ಲಕ್ಷ, ಸುದೀಪ್ ಅಭಿಮಾನಿ ಜಗ್ಗಿ ಕಡೆಯಿಂದ 10 ಸಾವಿರ, ಸಲ್ಲಾಹುದ್ದೀನ್ ರಿಂದ 25 ಸಾವಿರ, ವಿಷ್ಣು ಸೇನಾ ಸಮಿತಿ ರಾಜಾಜಿನಗರ ದಿಂದ 11 ಸಾವಿರ ಹಾಗೂ ಕಿರಣ್ ಕುಮಾರ್ ಎಂಬುವವರಿಂದ 25 ಸಾವಿರ ರೂಪಾಯಿ ಸಂದಾಯವಾಗಿದೆ.

ನೀವೂ ಸಹಾಯ ಮಾಡಬಹುದು
ನಿಮಗೂ ಸಹಾಯ ಮಾಡುವ ಮನಸ್ಸು ಇದ್ದರೆ, ಕೆಳಕಂಡ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿ...
Account Name : SIMHA HASTHA (Current ACC)
Bank Name : DCB Bank
Account Number : 07121300000480
IFSC CODE : DCBL0000071
Branch Name : Rajaji Nagar, Bengaluru
Number - +91 8197269231