Just In
Don't Miss!
- News
ಸಂಸತ್ ಕಟ್ಟಡದ ಮಹಾತ್ಮ ಗಾಂಧಿ ಪ್ರತಿಮೆ ತರಾತುರಿಯಲ್ಲಿ ಸ್ಥಳಾಂತರ
- Sports
ಐಎಸ್ಎಲ್: ಬೆಂಗಳೂರಿಗೆ ಸೋಲಿನ ಆಘಾತ ನೀಡಿದ ಕೇರಳ ಬ್ಲಾಸ್ಟರ್ಸ್
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
- Automobiles
ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸಿಟ್ರನ್ ಸಿ5 ಏರ್ಕ್ರಾಸ್ ಕಾರು
- Lifestyle
ಯಾವಾಗ ಸಂಗಾತಿಗೆ ಮೋಸ ಮಾಡಿ ಅನೈತಿಕ ಸಂಬಂಧ ಬೆಳೆಸುತ್ತಾರೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸೌತ್ ಫಿಲಂಫೇರ್ ಅವಾರ್ಡ್ ಕೂಡ 'ಫೇರ್' ಅಲ್ವಾ?
ಸ್ಯಾಂಡಲ್ವುಡ್ನಲ್ಲಿ ಪ್ರತೀ ಅವಾರ್ಡ್ ಕಾರ್ಯಕ್ರಮಗಳಾದಾಗ್ಲೂ ಅಲ್ಲೊಂದು ಹಸ್ತಕ್ಷೇಪ, ಪ್ರಭಾವ ಇದ್ದೇ ಇರುತ್ತೆ. ಆದರೆ ಫಿಲಂಫೇರ್ ಅವಾರ್ಡ್ಸ್ ವಿಚಾರದಲ್ಲಿ ಹಾಗಾಗೋದಿಲ್ಲ. ಅಲ್ಲಿ ಯಾರು ಜ್ಯೂರಿಗಳಿರ್ತಾರೆ ಅನ್ನೋದು ಸುಲಭವಾಗಿ ಸುದ್ದಿಯಾಗೋದಿಲ್ಲ. ಒಬ್ಬರು ಹಿರಿಯ ಸಿನಿಮಾ ಪತ್ರಕರ್ತರು ಸೇರಿದಂತೆ ಕನ್ನಡದವರು ಇಬ್ಬರಾದರೆ ಉಳಿದ ಎರಡು ಅಥವಾ ಮೂರು ಜನರು ಬೇರೆ ಭಾಷೆಯ ಸಿನಿಮಾದವರೇ ಇರುತ್ತಾರೆ.
ಆದರೆ ಈ ಬಾರಿಯ ಫಿಲಂಫೇರ್ ಅವಾರ್ಡ್ನಲ್ಲಿ ಕನ್ನಡ ಸಿನಿಮಾ ಹೀರೋಯಿನ್ ವಿಚಾರದಲ್ಲಿ ಫಿಲಂ ಅವಾರ್ಡ್ಗಳು ಫೇರ್ ಆಗಿಲ್ಲ ಅಂತ ಒಂದು ಸುದ್ದಿ ಹರಡುತ್ತಿದೆ. 'ಆಟಗಾರ' ಸಿನಿಮಾದಲ್ಲಿ ಚಿರಂಜೀವಿ ಸರ್ಜಾಗೆ ನಾಯಕಿಯಾಗಿ ಜೊಡಿಯಾಗಿದ್ದಿದ್ದು ಮೇಘನಾರಾಜ್. ಆದರೆ ಪಾರುಲ್ ಯಾದವ್ ಅವಾರ್ಡ್ ಪಡೆದುಕೊಂಡಿದ್ದಾರೆ. ಆದರೆ ಜ್ಯೂರಿಗಳು ಆಯ್ಕೆ ಮಾಡುವ ಮಾನದಂಡ ನಟನೆ ಆಗಿದ್ದರೆ ಯಾರು ಚೆನ್ನಾಗಿ ನಟಿಸಿದ್ದಾರೆ ಎನ್ನುವ ಆಧಾರದ ಮೇಲೆ ಅವಾರ್ಡ್ ಕೊಡಬಹುದು. [63ನೇ ಫಿಲಂಫೇರ್ ಪ್ರಶಸ್ತಿ: ಪುನೀತ್ ಮತ್ತು ಪಾರುಲ್ 'ದಿ ಬೆಸ್ಟ್'.!]
ಕಳೆದ ವರ್ಷ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿಲನ್ಗಳಿಗೆ ಪ್ರಶಸ್ತಿ ಕೆಟಗರಿಯೇ ಇಲ್ಲ. ಅವರನ್ನೂ ಪ್ರಶಸ್ತಿ ಕೆಟಗರಿಯಲ್ಲಿ ಸೇರಿಸುವಂತೆ ಒತ್ತಾಯಿಸಿದ್ದರು. ಆದರೆ ಪ್ರಶಸ್ತಿಯನ್ನು ಹೇಳುವುದು ಉತ್ತಮ ನಟ, ಅಥವಾ ನಟಿ ಅಂತ. ಅದನ್ನು ಹೀರೋ ಅಥವಾ ಹೀರೋ ಹೀರೋಯಿನ್ಗೆ ಕೊಡಬೇಕು ಅಂತೇನೂ ಇಲ್ಲ. ಚಿತ್ರದಲ್ಲಿ ಯಾರು ಉತ್ತಮವಾಗಿ ನಟಿಸಿದ ನಟ/ನಟಿ ಇದ್ದಾರೋ ಅವರಿಗೆ ಕೊಡುವುದು ಜ್ಯೂರಿಗಳಿಗೆ ಬಿಟ್ಟ ವಿಚಾರ. [ಆಟಗಾರ ಚಿತ್ರವಿಮರ್ಶೆ]
ಹಾಗೆ ನೊಡಿದರೆ ಮೇಘನಾ ರಾಜ್ ಗಿಂತ ಪಾರುಲ್ ಅತ್ಯುತ್ತಮವಾಗಿ ನಟಿಸಿದ್ದಾರೆ ಅಂತ ಜ್ಯೂರಿಗಳಿಗೆ ಅನ್ನಿಸಿದ್ದರೆ ಅದನ್ನು ನಾವು ವಿರೋಧಿಸುವಂತಿಲ್ಲವಲ್ಲ. ಆದರೆ, ಆಟಗಾರ ಚಿತ್ರ ನೋಡಿದವರಿಗೆ ಪಾರುಲ್ ಯಾದವ್ ಪ್ರಶಸ್ತಿ ಬರುವಂಥ ನಟನೆಯೇನೂ ನೀಡಿಲ್ಲ ಎಂಬುದು ಮನವರಿಕೆಯಾದರೆ ಅಚ್ಚರಿಯಿಲ್ಲ. ಇಲ್ಲೂ ಆಯಾ ನಟನಟಿಯರಿಗಿರುವ ಪ್ರಚಾರದ ಆಧಾರದ ಮೇಲೆ ಅವಾರ್ಡ್ ಕೊಡುತ್ತಾರೆ. [ಚಿತ್ರಗಳು: ಫಿಲಂಫೇರ್ ರೆಡ್ ಕಾರ್ಪೆಟ್ ಮೇಲೆ ದಕ್ಷಿಣದ ದಿಗ್ಗಜರ ರಂಗು]
ಪ್ರತೀ ವರ್ಷವೂ ಒಬ್ಬ ಸ್ಟಾರ್ ನಟ ಮತ್ತು ನಟಿಗೆ ಅವಾರ್ಡ್ ಕೊಡದಿದ್ದರೆ ಕಾರ್ಯಕ್ರಮವನ್ನು ಯಾರೂ ನೋಡೋದಿಲ್ಲ. ಅದರಿಂದ ಕಾರ್ಯಕ್ರಮ ಆಯೋಜಿಸಿದ ಬ್ರ್ಯಾಂಡ್ಗಳಿಗೆ ಪ್ರಚಾರ ಸಿಕ್ಕುವುದಿಲ್ಲ ಎನ್ನುವ ಕಾರಣಕ್ಕೆ ಫಿಲಂಫೇರ್ನವರು ಸ್ಟಾರ್ಗಳಿಗೇ ಅವಾರ್ಡ್ ಕೊಡುವ ಮೂಲಕ ಮಾಡುವ ಗಿಮಿಕ್ ಇದು ಎನ್ನುವ ಮಾತೂ ಕೂಡ ಸತ್ಯ ಎನಿಸುತ್ತೆ!