»   » ಚಿರಂಜೀವಿ ಸರ್ಜಾ ಮನೆಯಲ್ಲಿ ಮದುವೆ ಸಂಭ್ರಮ

ಚಿರಂಜೀವಿ ಸರ್ಜಾ ಮನೆಯಲ್ಲಿ ಮದುವೆ ಸಂಭ್ರಮ

Posted By:
Subscribe to Filmibeat Kannada
ಚಿರಂಜೀವಿ ಸರ್ಜಾ ಮನೆಯಲ್ಲಿ ಹಳದಿ ಶಾಸ್ತ್ರ | FIlmibeat Kannada

ಚಂದನವನದಲ್ಲಿ ಒಂದು ವಾರದಿಂದ ಮದುವೆ ಸಂಭ್ರಮ ಜೋರಾಗಿದೆ. ಸರ್ಜಾ ಕುಟುಂಬದಲ್ಲಿ ಸುಮಾರು ವರ್ಷದ ನಂತರ ನಡೆಯುತ್ತಿರು ಶುಭಕಾರ್ಯಕ್ಕೆ ಎಲ್ಲರೂ ಸಜ್ಜಾಗಿದ್ದು ನಿನ್ನೆಯಷ್ಟೇ ಮುಗಿಸಿಕೊಂಡು ಬಂದ ಚರ್ಚ್ ಮದುವೆ ನಂತರ ಇಂದು ಸರ್ಜಾ ಮನೆಯಂಗಳದಲ್ಲಿ ಅರಿಶಿನ ಶಾಸ್ತ್ರ ಶುರುವಾಗಿದೆ.

ಮೇ2 ರಂದು ನಡೆಯಲಿರುವ ಮದುವೆ ಸಮಾರಂಭಕ್ಕೆ ಭರ್ಜರಿ ಸಿದ್ಧತೆಗಳು ನಡೆದಿದ್ದು ಇಂದು ಬೆಂಗಳೂರಿನ ಬನಶಂಕರಿಯಲ್ಲಿರುವ ಚಿರಂಜೀವಿ ಸರ್ಜಾ ಅವರ ಮನೆಯಲ್ಲಿ ಅರಿಶಿನ ಶಾಸ್ತ್ರ ನಡೆದಿದೆ.

Arishina Shastra has been made at Chiranjeevi Sarjas house

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಚಿರಂಜೀವಿ ಸರ್ಜಾ-ಮೇಘನಾ ರಾಜ್

ನಟ ಚಿರಂಜೀವಿ ಸರ್ಜಾ ಅವರಿಗೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅರಿಶಿನ ಹಚ್ಚುತ್ತಿರುವ ಪೋಟೋಗಳು ಫೇಸ್ ಬುಕ್ ನಲ್ಲಿ ವೈರಲ್ ಆಗುತ್ತಿದೆ. ಒಂದು ವಾರದಿಂದ ನಡೆಯುತ್ತಿರುವ ಮದುವೆ ಸಂಭ್ರಮದಲ್ಲಿ ಪ್ರತಿ ನಿತ್ಯ ಒಂದೊಂದು ಕಾರ್ಯಕ್ರಮಗಳು ಜರುಗುತ್ತಿವೆ.

Arishina Shastra has been made at Chiranjeevi Sarjas house

ಇತ್ತ ಮೇಘನಾ ರಾಜ್ ಮನೆಯಲ್ಲಿ ಇಂದು ಮೆಹೆಂದಿ ಹಾಗೂ ಸಂಗೀತ್ ಕಾರ್ಯಕ್ರಮಗಳಿಗೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಎರಡು ಮನೆಯ ಎಲ್ಲಾ ಸ್ಟಾರ್ ಗಳು ಮೇಗೆಂದಿ ಮತ್ತು ಸಂಗೀತ್ ಕಾರ್ಯಕ್ರಮದಲ್ಲಿ ಭಾಗಿ ಆಗುವ ಸಾಧ್ಯತೆಗಳು ಹೆಚ್ಚಾಗಿವೆ ಅಷ್ಟೇ ಅಲ್ಲದೆ ಸ್ಯಾಂಡಲ್ ವುಡ್ ಸ್ಟಾರ್ ಗಳು ಕೂಡ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ.

English summary
Kannada artist Chiranjeevi Sarja and Meghna Raj will be married on May 2. Today Arishina Shastra has been made at Chiranjeevi Sarja's house.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X