Just In
Don't Miss!
- News
ಎಫ್ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ: ಭಾನುವಾರದ ಪರೀಕ್ಷೆ ಮುಂದೂಡಿಕೆ
- Automobiles
ಮಾನ್ಸ್ಟರ್ ಬೈಕ್ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಡುಕಾಟಿ
- Sports
ಐಎಸ್ಎಲ್: ಕೇರಳ ಬ್ಲಾಸ್ಟರ್ಸ್ vs ಎಫ್ಸಿ ಗೋವಾ, Live ಸ್ಕೋರ್
- Lifestyle
ಮಕರ ರಾಶಿಗೆ ಶುಕ್ರನ ಸಂಚಾರ: ಯಾವೆಲ್ಲಾ ರಾಶಿಗೆ ಶುಕ್ರದೆಸೆ
- Finance
ಮೂರನೇ ತ್ರೈಮಾಸಿಕದಲ್ಲಿ ಭಾರೀ ಲಾಭಗಳಿಸಿದ ರಿಲಯನ್ಸ್ ಇಂಡಸ್ಟ್ರೀಸ್
- Education
NIT Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ ಜೆಆರ್ಎಫ್ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ರಾಬರ್ಟ್'ಗೆ ಅರ್ಜುನ್ ಜನ್ಯ ಫಿಕ್ಸ್ : ದರ್ಶನ್ ಜೊತೆ ಹ್ಯಾಟ್ರಿಕ್ ಸಿನಿಮಾ
'ರಾಬರ್ಟ್' ಸಿನಿಮಾ ಪ್ರಾರಂಭವಾಗಿ ಇಷ್ಟು ದಿನವಾದರೂ ಅವರ ತಾರಬಳಗ ಹಾಗೂ ತಾಂತ್ರಿಕ ವರ್ಗದ ಬಗ್ಗೆ ಹೆಚ್ಚು ವಿಷಯಗಳು ಬಹಿರಂಗ ಆಗಿಲ್ಲ. ಆದರೆ, ಇದೀಗ ಚಿತ್ರದ ಸಂಗೀತ ನಿರ್ದೇಶಕರ ವಿಷಯ ರಿವೀಲ್ ಆಗಿದೆ.
ದರ್ಶನ್ ಅವರ ಈ ಮೆಗಾ ಸಿನಿಮಾಗೆ ಯಾರು ಮ್ಯೂಸಿಕ್ ನೀಡುತ್ತಾರೆ ಎನ್ನುವ ಕುತೂಹಲ ಇತ್ತು. ವಿ ಹರಿಕೃಷ್ಣ ಅಥವಾ ಅರ್ಜುನ್ ಜನ್ಯ ಇಬ್ಬರಲ್ಲಿ ಒಬ್ಬರು ಮ್ಯೂಸಿಕ್ ನೀಡಬಹುದು ಎಂಬ ಊಹೆ ಇತ್ತು. ಅದೇ ವಿಷಯದ ಮೇಲೆ ನಿನ್ನೆ (ಶುಕ್ರವಾರ) ಫಿಲ್ಮಿಬೀಟ್ ಕನ್ನಡ ಲೇಖನವೊಂದನ್ನು ಪ್ರಕಟ ಮಾಡಿತ್ತು.
'ರಾಬರ್ಟ್' ಸಿನಿಮಾಗೆ ಮ್ಯೂಸಿಕ್ ಡೈರೆಕ್ಟರ್ ಯಾರು?
ಈ ಲೇಖನಕ್ಕೆ ಫೇಸ್ ಬುಕ್ ನಲ್ಲಿ ಓದುಗರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ನಿರ್ಮಾಪಕ ಉಮಾಪತಿ ಅವರೇ ಚಿತ್ರದ ಸಂಗೀತ ನಿರ್ದೇಶಕರ ಹೆಸರನ್ನು ತಿಳಿಸಿರುವ ವಿಷಯ ಇಲ್ಲಿ ಕಂಡು ಬಂದಿದೆ. ಹೀಗಾಗಿ, 'ರಾಬರ್ಟ್' ಸಿನಿಮಾಗೆ ಅರ್ಜುನ್ ಜನ್ಯ ಮ್ಯೂಸಿಕ್ ನೀಡುವುದು ಪಕ್ಕಾ ಆಗಿದೆ. ಮುಂದೆ ಓದಿ...

ನಿರ್ಮಾಪಕ ಉಮಾಪತಿ ಪ್ರತಿಕ್ರಿಯೆ
ಅಭಿಮಾನಿಗಳಿಗೆ 'ರಾಬರ್ಟ್' ಸಂಗೀತ ನಿರ್ದೇಶಕರು ಯಾರು ಎನ್ನುವ ಕುತೂಹಲ ಇತ್ತು. ಅದೇ ರೀತಿಯ ಡಿ ಬಾಸ್ ಫ್ಯಾನ್ ಒಬ್ಬರು ನಿರ್ಮಾಪಕ ಉಮಾಪತಿ ಅವರಿಗೆ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಸಂದೇಶ ಕಳುಹಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಉಮಾಪತಿ 'ಅರ್ಜುನ್' ಎಂದು ಉತ್ತರ ನೀಡಿದ್ದಾರೆ. ಹೀಗಾಗಿ ಸಿನಿಮಾದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಎನ್ನುವುದು ಬಹಿರಂಗ ಆಗಿದೆ.
''ರಾಬರ್ಟ್ ಪೋಸ್ಟರ್ ನಕಲಿ ಅಲ್ಲ'' - ತರುಣ್ ಸುಧೀರ್ ಸ್ಪಷ್ಟನೆ

ದರ್ಶನ್ - ಅರ್ಜುನ್ ಮೂರನೇ ಚಿತ್ರ
ಮತ್ತೊಂದು ವಿಶೇಷ ಎಂದರೆ, ನಟ ದರ್ಶನ್ ಹಾಗೂ ಅರ್ಜುನ್ ಜನ್ಯ ಕಾಂಬಿನೇಶನ್ ನ ಮೂರನೇ ಸಿನಿಮಾ ಇದಾಗಿದೆ. 'ಚಕ್ರವರ್ತಿ' ಸಿನಿಮಾಗೆ ಮೊದಲ ಬಾರಿಗೆ ದರ್ಶನ್ ಚಿತ್ರಕ್ಕೆ ಸಂಗೀತ ನೀಡುವ ಅವಕಾಶವನ್ನು ಅರ್ಜುನ್ ಜನ್ಯ ಪಡೆದಿದ್ದರು. ಆ ಬಳಿಕ 'ತಾರಕ್' ಸಿನಿಮಾ ಬಂತು. ಈ ಎರಡು ಚಿತ್ರದ ಹಾಡುಗಳು ಹಿಟ್ ಆದವು. ಈಗ ಮೂರನೇ ಚಿತ್ರದ ಮೂಲಕ ಮತ್ತೆ ಈ ಜೋಡಿ ಒಂದಾಗಿದೆ.

ತರುಣ್ ಮತ್ತು ಅರ್ಜುನ್ ಜನ್ಯ
ತರುಣ್ ಸುಧೀರ್ ಮತ್ತು ಅರ್ಜುನ್ ಜನ್ಯ ನಡುವೆ ಒಳ್ಳೆಯ ನಂಟು ಇದೆ. ತರುಣ್ ಗೆ ಸಂಬಂಧ ಪಟ್ಟ 'ರಾಂಬೋ' 'ವಿಕ್ಟರಿ', 'ರನ್ನ', 'ಚೌಕ', 'ರಾಂಬೋ 2', 'ವಿಕ್ಟರಿ 2' ಇನ್ನು ಕೆಲವು ಸಿನಿಮಾಗಳಿಗೆ ಸಂಗೀತ ನೀಡಿದವರು ಅರ್ಜುನ್ ಜನ್ಯ. ಈ ಇಬ್ಬರ ಜೋಡಿಯ ಚಿತ್ರಗಳ ಹಾಡುಗಳು ಇದುವರೆಗೆ ಸೋತಿಲ್ಲ.

'ಚೌಕ' ಚಿತ್ರಕ್ಕೆ ಒಂದು ಹಾಡು
ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಈ ಹಿಂದೆ ತರುಣ್ ಸುಧೀರ್ ನಿರ್ದೇಶನದ 'ಚೌಕ' ಸಿನಿಮಾಗೆ ಸಂಗೀತ ನೀಡಿದ್ದರು. ಈ ಸಿನಿಮಾದಲ್ಲಿ ನಾಲ್ಕು ಮ್ಯೂಸಿಕ್ ಡೈರೆಕ್ಟರ್ ಗಳು ಇದ್ದ ಕಾರಣ ಒಂದೇ ಒಂದು ಹಾಡು ಅರ್ಜುನ್ ಗೆ ಸಿಕ್ಕಿತ್ತು.ಆದರೆ, ಇದೀಗ 'ರಾಬರ್ಟ್' ನಲ್ಲಿ ಅದರದ್ದೆ ಬ್ಯಾಂಡು ಅವರದ್ದೇ ಸೌಂಡು ಇರಲಿದೆ.