»   » ಅಂಬಿ ಮಗನನ್ನು ಕುಣಿಸಲು ಬಂದರು ಅರ್ಜುನ್ ಜನ್ಯ

ಅಂಬಿ ಮಗನನ್ನು ಕುಣಿಸಲು ಬಂದರು ಅರ್ಜುನ್ ಜನ್ಯ

Posted By:
Subscribe to Filmibeat Kannada

ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅವರ ಸ್ವಾಗತಕ್ಕೆ ಸ್ಯಾಂಡಲ್ ವುಡ್ ಸಿದ್ಧವಾಗಿದೆ. ನಟ ಅಂಬರೀಶ್ ಅವರ ಹುಟ್ಟುಹಬ್ಬಕ್ಕೆ ಅಂದರೆ ಮೇ 29ಕ್ಕೆ ಅವರ ಮಗನ ಮೊದಲ ಸಿನಿಮಾ ಅದ್ದೂರಿಯಾಗಿ ಲಾಂಚ್ ಆಗಲಿದೆ.

ಸದ್ಯ ಸಿನಿಮಾ ಮುಹೂರ್ತದ ದಿನಾಂಕ ಹತ್ತಿರಕ್ಕೆ ಬರುತ್ತಿದ್ದ ಹಾಗೆ ಚಿತ್ರದ ಒಂದೊಂದೇ ವಿಷಯಗಳ ಹೊರ ಬರುತ್ತಿದೆ. ಸದ್ಯ ಈ ಸಿನಿಮಾದ ಸಂಗೀತ ನಿರ್ದೇಶನ ಮತ್ತು ಛಾಯಾಗ್ರಹಣ ವಿಭಾಗದ ಸಂಗತಿಗಳು ತಿಳಿದಿದೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮತ್ತು ಸತ್ಯ ಹೆಗಡೆ ಕ್ಯಾಮರಾ ಹಿಡಿಯಲಿದ್ದಾರೆ.

Arjun Janya will compose song for Ambareesh son Abhisheks debut movie

ಫೋಟೋ ಶೂಟ್ ಮುಗಿಸಿದ ಅಭಿಷೇಕ್ : ಅಂಬಿ ಬರ್ತ್ ಡೇಗೆ ಚಿತ್ರ ಲಾಂಚ್

ಸಿನಿಮಾಗೆ ನಾಗಶೇಖರ್ ನಿರ್ದೇಶನ ಮಾಡುತ್ತಿದ್ದಾರೆ. ವಿಶೇಷ ಅಂದರೆ ಇದೇ ಮೊದಲ ಬಾರಿಗೆ ಅರ್ಜುನ್ ಜನ್ಯ ನಾಗಶೇಖರ್ ಜೊತೆ ಕೆಲಸ ಮಾಡುತ್ತಿದ್ದಾರೆ. ನಾಗಶೇಖರ್ ಅವರ ಹಳೆಯ ಎಲ್ಲ ಸಿನಿಮಾಗಳಲ್ಲಿ ಹಾಡುಗಳು ತುಂಬ ಚೆನ್ನಾಗಿ ಇವೆ. ಸೋ, ಹಾಡುಗಳ ಆಯ್ಕೆಗಳಲ್ಲಿ ಒಳ್ಳೆಯ ಅಭಿರುಚಿ ಹೊಂದಿರುವ ಅವರು ಅರ್ಜುನ್ ಜನ್ಯ ಜೊತೆಗೆ ಸೇರಿ ಮತ್ತೆ ಮ್ಯಾಜಿಕ್ ಮಾಡುತ್ತಾರಾ ಎನ್ನುವ ನಿರೀಕ್ಷೆ ಇದೆ.

Arjun Janya will compose song for Ambareesh son Abhisheks debut movie

ಇನ್ನೊಂದು ಕಡೆ ಸದ್ಯ ಅರ್ಜುನ್ ಜನ್ಯ ಅಂಬರೀಶ್ ಅವರ 'ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರಕ್ಕೆ ಸಹ ಸಂಗೀತ ನೀಡುತ್ತಿದ್ದಾರೆ. ಉಳಿದಂತೆ, ಸತ್ಯ ಹೆಗಡೆ ಈಗಾಗಲೇ ನಾಗಶೇಖರ್ ಸಿನಿಮಾಗೆ ಕೆಲಸ ಮಾಡಿದ್ದಾರೆ. ಇತ್ತೀಚಿಗಷ್ಟೆ ಸಿನಿಮಾದ ಫೋಟೋ ಶೂಟ್ ನಡೆದಿದೆ. ಇನ್ನು ನಾಯಕಿ ಯಾರು ಎಂಬ ವಿಚಾರ ಇನ್ನು ಬಹಿರಂಗ ಆಗಿಲ್ಲ.

English summary
Music director Arjun Janya will compose song for kannada actor Ambareesh son Abhishek's debut movie. The movie will launch on the occasion of Ambareesh’s birthday (May 29th) and it is directing by Nagashekar.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X