»   » ಅರ್ಜುನ್ ಸರ್ಜಾ ಕೈ ಮೇಲೆ ರಾಷ್ಟ್ರಧ್ವಜ ಟಾಟ್ಯೂ

ಅರ್ಜುನ್ ಸರ್ಜಾ ಕೈ ಮೇಲೆ ರಾಷ್ಟ್ರಧ್ವಜ ಟಾಟ್ಯೂ

Posted By:
Subscribe to Filmibeat Kannada

ನಟ ಅರ್ಜುನ್ ಸರ್ಜಾ ನಿರ್ಮಿಸಿ, ನಿರ್ದೇಶಿಸಿರೋ ಅಭಿಮನ್ಯು ಚಿತ್ರ ತೆರೆಗೆ ಬಂದಿದೆ. ಅಭಿಮನ್ಯು ಚಿತ್ರದಲ್ಲಿ ಅಪ್ಪಟ ದೇಶಭಕ್ತನಾಗಿ, ಮಕ್ಕಳ ಶಿಕ್ಷಣ ಹಕ್ಕುಗಳ ಪರವಾಗಿ ಹೋರಾಡೋ ಕ್ರಾಂತಿಕಾರಿ ಪಾತ್ರದಲ್ಲಿ ಅರ್ಜುನ್ ಸರ್ಜಾ ಕಾಣಿಸಿಕೊಂಡಿದ್ದಾರೆ. ತೆರೆಮೇಲೆ ರಾಷ್ಟ್ರಧ್ವಜಕ್ಕೆ ಸಲಾಂ ಹೊಡೆಯೋ ಅರ್ಜುನ್ ಸರ್ಜಾ ರಿಯಲ್ ನಲ್ಲೂ ಅಪ್ಪಟ ದೇಶಪ್ರೇಮಿ..!

ನಮ್ಮ ದೇಶ, ನಮ್ಮ ಜನ, ನಮ್ಮ ಭಾಷೆಯಂತ ನಾಡು, ನುಡಿ ಮತ್ತು ಭಾರತಾಂಬೆಯ ಮೇಲೆ ಅಪಾರ ಅಭಿಮಾನ ಹೊಂದಿರೋ ಅರ್ಜುನ್ ಸರ್ಜಾ, ತಮ್ಮ ಬಲಗೈ ಮೇಲೆ 'ರಾಷ್ಟ್ರಧ್ವಜ'ದ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಕೇಸರಿ, ಬಿಳಿ, ಹಸಿರು ಮತ್ತು ನೀಲಿ ಬಣ್ಣಗಳಲಿರೋ 'ಭಾರತ ಧ್ವಜ' ಅರ್ಜುನ್ ಕೈಮೇಲೆ ಅಚ್ಚಾಗಿದೆ. [ಅರ್ಜುನ್ ಸರ್ಜಾ ಸಂದರ್ಶನ]

Arjun Sarja has tatooed Indian Flag on his right hand

ಅಸಲಿಗೆ ಈ ಟಾಟ್ಯೂ ಅಚ್ಚಾಗಿರೋದು 1995ನೇ ಇಸವಿಯಲ್ಲಿ. ಅರ್ಜುನ್ ಸರ್ಜಾ ಕೆನಡಾಗೆ ಹೋಗಿದ್ದಾಗ ಒಬ್ರು ಟಾಟ್ಯೂ ಹಾಕಿಸಿಕೊಳ್ಳೋದನ್ನ ನೋಡಿ, ತಾನೂ ಹಾಕಿಸಿಕೊಳ್ಬೇಕು ಅಂತ ಆಸೆ ಪಟ್ರಂತೆ. ಆದ್ರೆ ಯಾವ ಟಾಟ್ಯೂ ಹಾಕಿಸಿಕೊಳ್ಳೋದು ಅಂತ ಯೋಚನೆ ಮಾಡುತ್ತಿದ್ದಾಗ, ''ನನಗೆ ನನ್ನ ದೇಶ ಇಷ್ಟ'' ಅಂತ ರಾಷ್ಟ್ರಧ್ವಜವನ್ನೇ ಟಾಟ್ಯೂ ಮಾಡಿಸಿಕೊಂಡ್ರಂತೆ. ಹಾಗಂತ 'ಫಿಲ್ಮಿಬೀಟ್ ಕನ್ನಡ' ಜೊತೆ ಅರ್ಜುನ್ ಸರ್ಜಾ ಹಳೇ ನೆನಪುಗಳಿಗೆ ಜಾರಿದ್ರು. [ಸ್ಯಾಂಡಲ್ ವುಡ್ ಸ್ಟಾರ್ ಗಳ ಟಾಟ್ಯೂ]

ಇಂಟ್ರೆಸ್ಟಿಂಗ್ ಅನಿಸೋದು, ಅರ್ಜುನ್ ಸರ್ಜಾ ಹುಟ್ಟುಹಬ್ಬ ಕೂಡ ಆಗಸ್ಟ್ 15 ರಂದೇ.''ಸ್ವಾತಂತ್ರೋತ್ಸವದಂದೇ ಹುಟ್ಟಿರೋದು ನನ್ನ ಭಾಗ್ಯ'' ಅಂತ ಹೇಳೋ ಅರ್ಜುನ್ ಸರ್ಜಾಗೆ ದೇವರಿಗಿಂತಲ್ಲೂ ದೇಶದ ಮೇಲೆ ಹೆಚ್ಚು ಭಕ್ತಿ. ಹೀಗಾಗೇ, ತಮ್ಮೆಲ್ಲಾ ಚಿತ್ರಗಳಲ್ಲೂ ಅರ್ಜುನ್ ಸರ್ಜಾ ಒಮ್ಮೆಯಾದ್ರೂ ಭಾರತಾಂಬೆಯನ್ನ ಸ್ಮರಿಸಿಕೊಳ್ಳುತ್ತಾರೆ. ಅಂದ್ಹಾಗೆ ಇಂದು ತೆರೆಕಂಡಿರೋ ಅಭಿಮನ್ಯೂ ಚಿತ್ರದಲ್ಲೂ ರಾಷ್ಟ್ರಧ್ವಜಕ್ಕೆ ಅರ್ಜುನ್ ಸರ್ಜಾ ಸಲಾಂ ಹೊಡೆದಿದ್ದಾರೆ. (ಫಿಲ್ಮಿಬೀಟ್ ಕನ್ನಡ ಎಕ್ಸ್ ಕ್ಲೂಸಿವ್)

English summary
Arjun sarja tattooed Indian Flag. Arjun Sarja born on Independence Day (15th August) has lot of love for his country and hence tattoed Indian flag on his hand.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada