For Quick Alerts
  ALLOW NOTIFICATIONS  
  For Daily Alerts

  ಶ್ರುತಿ ಹರಿಹರನ್ ಅವರನ್ನ ಪ್ರಶ್ನಿಸಿದ ಅರ್ಜುನ್ ಸರ್ಜಾ ಅತ್ತೆ.!

  |

  ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ ಮೇಲೆ ನಟಿ ಶ್ರುತಿ ಹರಿಹರನ್ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಇದನ್ನ ತಿರಸ್ಕರಿಸಿದ ನಟ ಅರ್ಜುನ್ ಸರ್ಜಾ, ಆಕೆಯ ಆರೋಪದಲ್ಲಿ ಸತ್ಯಾಂಶವಿಲ್ಲ. ಸುಮ್ಮನೆ ನನ್ನನ್ನು ಟಾರ್ಗೆಟ್ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದರು.

  ಇದೀಗ, ಅರ್ಜುನ್ ಸರ್ಜಾರ ಅವರ ಅತ್ತೆ ಈ ಘಟನೆ ಬಗ್ಗೆ ಮಾತನಾಡಿದ್ದು, ತಮ್ಮ ಅಳಿಯನ ಮೇಲೆ ಕೇಳಿ ಬಂದಿರುವನ್ನ ಆರೋಪವನ್ನ ತಳ್ಳಿಹಾಕಿದ್ದಾರೆ.

  'ನಾಚಿಕೆ ಆಗಬೇಕು' : ಶ್ರುತಿ ವಿರುದ್ಧ ಅರ್ಜುನ್ ಸರ್ಜಾ ಕೆಂಡಾಮಂಡಲ!'ನಾಚಿಕೆ ಆಗಬೇಕು' : ಶ್ರುತಿ ವಿರುದ್ಧ ಅರ್ಜುನ್ ಸರ್ಜಾ ಕೆಂಡಾಮಂಡಲ!

  'ಅರ್ಜುನ ಸರ್ಜಾ ಅಂತಹ ವ್ಯಕ್ತಿಯಲ್ಲ. ಯಾರೇ ಏನೇ ಹೇಳಿದ್ರೂ ನಾವ್ ನಂಬಲ್ಲ. ಕಣ್ಣಲ್ಲಿ ನೋಡಿದ್ರೆ ಒಪ್ಪಬಹುದು. ಅವರು ದೇವತಾ ಮಾನವ. ಎಲ್ಲ ರೀತಿಯಲ್ಲಿ ಒಳ್ಳೆಯ ಗುಣ ಅವರಲ್ಲಿದೆ. ನಮ್ಮಗೆ ಏನಾದರೂ ಸಮಸ್ಯೆಯಾದರೂ ನಮ್ಮ ಬಗ್ಗೆ ಎಷ್ಟು ಕಾಳಜಿ ತೋರಿಸುತ್ತಾರೆ'' ಎಂದಿದ್ದಾರೆ.

  'ರೆಸಾರ್ಟ್ ಗೆ ಹೋಗೋಣ ಬಾ' ಎಂದು ಕರೆದರು : ಸರ್ಜಾ ಮೇಲೆ ಶ್ರುತಿ ಬಾಂಬ್! 'ರೆಸಾರ್ಟ್ ಗೆ ಹೋಗೋಣ ಬಾ' ಎಂದು ಕರೆದರು : ಸರ್ಜಾ ಮೇಲೆ ಶ್ರುತಿ ಬಾಂಬ್!

  ಇನ್ನು ಶ್ರುತಿ ಹರಿಹರನ್ ಅವರ ಆರೋಪವನ್ನ ಪ್ರಶ್ನಿಸಿರುವ ಅವರು 'ಆಗ ಸತ್ತು ಹೋಗಿರುವ ಘಟನೆಗೆ ಈಗ ಜೀವ ಕೊಡ್ತಿದ್ದಾರೆ. ಅವಾಗ ಯಾಕೆ ಸುಮ್ಮನೆ ಇದ್ರು.?' ಎಂದು ಕೇಳಿದ್ದಾರೆ. 'ಚಿತ್ರರಂಗ ಅಂದ್ಮೇಲೆ ಬೆಡ್ ರೂಂ ಸೀನ್ ಇರುತ್ತೆ, ಅಲ್ಲಿ ಕ್ಲೋಸ್ ಆಗಿರಲೇಬೇಕು. ಇದು ತಪ್ಪು ಅಂದ್ಮೇಲೆ ನೀವ್ಯಾಕೆ ಚಿತ್ರರಂಗಕ್ಕೆ ಕಾಲಿಟ್ರಿ.?' ಎಂದು ಸರ್ಜಾ ಅತ್ತೆ ಪ್ರಶ್ನಿಸಿದ್ದಾರೆ.

  ಅಳಿಯನ ಬಗ್ಗೆ ಬಂದ ಆಪಾದನೆಗೆ ನಟ ರಾಜೇಶ್ ಗರಂ! ಅಳಿಯನ ಬಗ್ಗೆ ಬಂದ ಆಪಾದನೆಗೆ ನಟ ರಾಜೇಶ್ ಗರಂ!

  ಈ ಬಗ್ಗೆ ಅರ್ಜುನ್ ಸರ್ಜಾ ಅವರ ಮಾವ ಹಿರಿಯ ನಟ ರಾಜೇಶ್ ಅವರು ಕೂಡ ಪ್ರತಿಕ್ರಿಯಿಸಿದ್ದು, ''ಶ್ರುತಿ ಹರಿಹರನ್ ಅವರು ಪ್ರಚಾರಕ್ಕಾಗಿ ನಮ್ಮ ಅಳಿಯನ ಮೇಲೆ ದೂರುತ್ತಿದ್ದಾರೆ. ಅವರು ಅಂತವರಲ್ಲ, ಆಕೆಯ ಮೇಲೆ ಮಾನನಷ್ಟ ಮೊಕದ್ದಮೆ ಹೂಡತ್ತೇವೆ ಎಂದಿದ್ದರು.

  ಇನ್ನು ಈ ಬಗ್ಗೆ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದ ಶ್ರುತಿ ಹರಿಹರನ್, ನಾಳೆ (ಅಕ್ಟೋಬರ್ 21) ಭಾನುವಾರ ಸುದ್ದಿಗೋಷ್ಠಿ ನಡೆಸಿ ಎಲ್ಲವನ್ನು ಬಹಿರಂಗಪಡಿಸಲಿದ್ದಾರೆ.

  English summary
  Me Too : Arjun sarja mother in law has react on about Sruthi Hariharan's allegation. Kannada actress Sruthi Hariharan has accused actor Arjun Sarja.
  Saturday, October 20, 2018, 17:03
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X