For Quick Alerts
  ALLOW NOTIFICATIONS  
  For Daily Alerts

  'ನಿನ್ನ ವಿಶ್ ಕಳೆದುಕೊಂಡಿರುವೆ ಮಗನೇ....' ಭಾವುಕರಾದ ಅರ್ಜುನ್ ಸರ್ಜಾ

  |

  ಇಡೀ ದೇಶ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿದ್ದರೆ, ಅರ್ಜುನ್ ಸರ್ಜಾ ಅಭಿಮಾನಿಗಳು ಸ್ವಾತಂತ್ರ್ಯೋತ್ಸವದ ಜೊತೆ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬದ ಖುಚಿಯನ್ನು ಕೊಂಡಾಡುತ್ತಿದ್ದಾರೆ.

  Superstar ಚಿತ್ರದ ನಾಯಕ Niranjan , ಚಿಕ್ಕಪ್ಪ Upendraಗೆ ಧನ್ಯವಾದ ತಿಳಿಸಿದ್ದು ಹೀಗೆ | Filmibeat Kannada

  ಆದರೆ, ಈ ವರ್ಷ ಅರ್ಜುನ್ ಸರ್ಜಾ ಪಾಲಿಗೆ ಇದು ನೋವಿನ ಹುಟ್ಟುಹಬ್ಬ ಎಂದೆನಿಸುತ್ತಿದೆ. ತುಂಬಾ ಆತ್ಮೀಯ, ಸೋದರಳಿಯ ಆದರೂ ಮಗನಂತೆ ನೋಡಿಕೊಳ್ಳುತ್ತಿದ್ದ ಚಿರು ಸರ್ಜಾ ಇಲ್ಲ ಎಂಬ ಬೇಸರ ಅವರನ್ನು ಹೆಚ್ಚು ಕಾಡುತ್ತಿದೆ.

  ಪ್ರತಿ ವರ್ಷ ಚಿರಂಜೀವಿ ಸರ್ಜಾ ಮಾಡುತ್ತಿದ್ದ ವಿಶ್ ಇಲ್ಲ ಎಂದು ಅರ್ಜುನ್ ಮನ ಮರುಗುತ್ತಿದೆ. ನನ್ನ ಹುಡುಗ ಇಲ್ಲ ಎಂಬ ಸಂಕಟ ಸರ್ಜಾ ಅವರ ಹೃದಯವನ್ನು ಹಿಂಡುತ್ತಿದೆ ಎನ್ನುವುದಕ್ಕೆ ಅವರು ಹಾಕಿರುವ ಇನ್ಸ್ಟಾಗ್ರಾಂ ಪೋಸ್ಟ್ ಸಾಕ್ಷಿ.

  ಚಿರಂಜೀವಿ ಸರ್ಜಾ ಅವರ ಮೂರು ಫೋಟೋ ಹಂಚಿಕೊಂಡಿರುವ ಅರ್ಜುನ್, ಒಂದು ಫೋಟೋದಲ್ಲಿ ಚಿರುಗೆ ಮೇಕಪ್ ಮಾಡುತ್ತಿದ್ದಾರೆ. ಈ ಸುಂದರ ಕ್ಷಣ ಮತ್ತೊಮ್ಮೆ ಬರಲ್ಲ ಎಂದು ನೆನೆದರೆ ನಿಜಕ್ಕೂ ಕಣ್ಣು ಒದ್ದೆಯಾಗುತ್ತದೆ.

  ''ನನ್ನ ಜನ್ಮದಿನದಂದು ನನ್ನ ಹುಡುಗನನ್ನು ನಾನು ಕಳೆದುಕೊಂಡಿದ್ದೇನೆ. ನಿನ್ನ ಶುಭಾಶಯಗಳನ್ನು ಕಳೆದುಕೊಂಡಿರುವೆ.... ಚಿರು ಮಗನೆ.....'' ಎಂದು ಭಾವುಕರಾಗಿದ್ದಾರೆ.

  ಅಂದ್ಹಾಗೆ, ಜೂನ್ 7 ರಂದು ನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಮೃತಪಟ್ಟರು. 35 ವರ್ಷದ ಚಿರು ಸರ್ಜಾ ಅವರ ಅಕಾಲಿಕ ಸಾವು ಇಡೀ ಚಿತ್ರರಂಗವನ್ನು ದಿಗ್ಬ್ರಮೆಗೊಳಿಸಿತ್ತು. ಚಿರು ಸರ್ಜಾ ನಿಧನರಾಗಿ ಎರಡೂವರೆ ತಿಂಗಳು ಕಳೆದಿದೆ.

  English summary
  Kannada actor, action king Arjun sarja celebrating his birthday with independence day. and also he remembered chiranjeevi Sarja.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X