»   »  ಇದೇ ತಿಂಗಳಲ್ಲಿ ತೆರೆಕಾಣಲಿದೆ ಅರ್ಜುನ್ ಸರ್ಜಾ 150ನೇ ಚಿತ್ರ

ಇದೇ ತಿಂಗಳಲ್ಲಿ ತೆರೆಕಾಣಲಿದೆ ಅರ್ಜುನ್ ಸರ್ಜಾ 150ನೇ ಚಿತ್ರ

Posted By:
Subscribe to Filmibeat Kannada

ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅಭಿನಯದ 150 ನೇ ಚಿತ್ರ ವಿಸ್ಮಯ ಯಾವಾಗ ಬಿಡುಗಡೆಯಾಗುತ್ತೆ ಎಂದು ಕಾಯುತ್ತಿದ್ದ ಪ್ರೇಕ್ಷಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ಹಲವು ವಿಷ್ಯಗಳಿಗೆ ಕುತೂಹಲ ಮೂಡಿಸಿರುವ 'ವಿಸ್ಮಯ' ಚಿತ್ರ ಇದೇ ತಿಂಗಳಲ್ಲಿ ತೆರೆ ಮೇಲೆ ಬರಲಿದೆ.

ಹೌದು, 'ವಿಸ್ಮಯ' ಚಿತ್ರ ಜುಲೈ 28 ರಂದು ಜಗತ್ತಿನಾದ್ಯಂತ ರಿಲೀಸ್ ಆಗುತ್ತಿದೆ. 'ವಿಸ್ಮಯ' ಸಸ್ಪೆನ್ಸ್ ಥ್ರಿಲ್ಲಿಂಗ್ ಕಥೆಯನ್ನ ಹೊಂದಿದ್ದು, ಸೂಪರ್ ಕಾಪ್ ಪಾತ್ರದಲ್ಲಿ ಅಜುನ್ ಸರ್ಜಾ ಮಿಂಚಿದ್ದಾರೆ. ಈಗಾಗಲೇ ಟೀಸರ್ ಬಿಡುಗಡೆ ಮಾಡಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಅರ್ಜುನ್ ಸರ್ಜಾ 150ನೇ ಸಿನಿಮಾ ಆಡಿಯೋ ರಿಲೀಸ್

Arjun Sarja's 150th Movie 'Vismaya' Will Release on July 28th

ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ತಯಾರಾಗಿರುವ ಈ ಚಿತ್ರಕ್ಕೆ ಅರುಣ್ ವೈದ್ಯನಾಥ್ ರವರು ಆಕ್ಷನ್ ಕಟ್ ಹೇಳಿದ್ದಾರೆ. ಎಸ್ ನವೀನ್ ಸಂಗೀತ ನಿರ್ದೇಶನವಿದೆ. 'ವಿಸ್ಮಯ' ಚಿತ್ರದ ಆಡಿಯೋ ಬಿಡುಗಡೆಯಾಗಿದ್ದು, ಎಲ್ಲರಿಂದಲೂ ಮೆಚ್ಚುಗೆ ಗಳಿಸಿಕೊಂಡಿದೆ.

'ಆಕ್ಷನ್ ಕಿಂಗ್' ಅರ್ಜುನ್ ಸರ್ಜಾ 150ನೇ ಸಿನಿಮಾ 'ವಿಸ್ಮಯ' ಟೀಸರ್ ಔಟ್

ಅರ್ಜುನ್ ಸರ್ಜಾ ಮುಖ್ಯ ಭೂಮಿಕೆಯಲ್ಲಿರುವ 'ವಿಸ್ಮಯ' ಚಿತ್ರದಲ್ಲಿ ಶೃತಿ ಹರಿಹರನ್ ನಾಯಕಿ ಆಗಿದ್ದಾರೆ. ಉಳಿದಂತೆ ಹಿರಿಯ ನಟಿ ಸುಹಾಸಿನಿ, ಸುಧಾರಾಣಿ, ವೈಭವ್, ವರಲಕ್ಷ್ಮಿ ಶರತ್ ಕುಮಾರ್, ಪ್ರಸನ್ನ ಮತ್ತು ಇತರರು ಅಭಿನಯಿಸಿದ್ದಾರೆ.

English summary
Action king Arjun Sarja starrer Kannada Movie 'Vismaya' will release on July 28th. The movie is directed by Arun Vaidyanath, features Shruthi Hariharan, sudharani, Varalakshmi Sharathkumar in the lead role

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada