Just In
Don't Miss!
- Finance
ಬಜೆಟ್ 2021: ವಿವಿಧ ಮಲ್ಟಿಪ್ಲೆಕ್ಸ್ ಪ್ರತಿನಿಧಿಗಳಿಂದ ನಿರ್ಮಲಾ ಸೀತಾರಾಮನ್ ಗೆ ಮನವಿ
- News
ಸಚಿವ ಧನಂಜಯ್ ಮುಂಡೆ ವಿರುದ್ಧ ಅತ್ಯಾಚಾರ ದೂರು ಹಿಂಪಡೆದ ಮಹಿಳೆ
- Automobiles
ರಾಂಗ್ ಸೈಡ್'ನಲ್ಲಿ ವಾಹನ ಚಾಲನೆ ಮಾಡುವವರ ಡ್ರೈವಿಂಗ್ ಲೈಸೆನ್ಸ್ ರದ್ದುಪಡಿಸಲು ಮುಂದಾದ ಪೊಲೀಸ್ ಇಲಾಖೆ
- Lifestyle
ನಿಮ್ಮ ಚರ್ಮದ ಆರೈಕೆಗೆ ಬೆಲ್ಲ ಆಗಲಿದೆ ಒಂದೊಳ್ಳೆ ಪಾಟ್ನರ್..
- Sports
ಬಿಎಂಡಬ್ಲ್ಯೂ ನೂತನ ಕಾರು ಖರೀದಿಸಿದ ವೇಗಿ ಮೊಹಮ್ಮದ್ ಸಿರಾಜ್
- Education
KIOCL Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಚಿರು ಸರ್ಜಾ ನೆನೆದು ಭಾವುಕರಾದ ನಟ ಅರ್ಜುನ್ ಸರ್ಜಾ
ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ನಿಧನರಾಗಿ ಆರು ತಿಂಗಳು ಕಳೆದಿದೆ. ಚಿರು ಸರ್ಜಾ ಈಗಲೂ ನಮ್ಮೊಂದಿಗೆ ಇಲ್ಲ ಎಂದು ಊಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸರ್ಜಾ ಕುಟುಂಬವಂತೂ ಚಿರು ಅವರನ್ನು ಸದಾ ನೆನಪಿಸಿಕೊಳ್ಳುತ್ತಲೇ ಇದೆ.
ನಟ ಅರ್ಜುನ್ ಸರ್ಜಾ ಅವರು ಇದ್ದಕ್ಕಿದ್ದಂತೆ ಚಿರು ಸರ್ಜಾ ಅವರನ್ನು ನೆನೆದು ಭಾವುಕರಾಗಿ ಇನ್ಸ್ಟಾಗ್ರಾಂನಲ್ಲಿ ಫೋಟೋವೊಂದು ಹಂಚಿಕೊಂಡಿದ್ದಾರೆ.
ಚಿರಂಜೀವಿ ಸರ್ಜಾ ಸಮಾಧಿ ನಿರ್ಮಾಣಕ್ಕೆ ಶಂಕುಸ್ಥಾಪನೆ; ಕುಟುಂಬದವರಿಂದ ಪೂಜೆ
''ಚಿರು ಮಗನೇ ನಿನ್ನ ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಅಂದ್ರೆ ಅದನ್ನು ಹೇಳಲು ಸಹ ಸಾಧ್ಯವಾಗುತ್ತಿಲ್ಲ'' ಎಂದು ಆ ಫೋಟೋಗೆ ಕ್ಯಾಪ್ಷನ್ ನೀಡಿದ್ದಾರೆ. ಅರ್ಜುನ್ ಅವರ ಈ ಪೋಸ್ಟ್ ಕಂಡು ನೆಟ್ಟಿಗರು ಸಹ ಅದೇ ಅಭಿಪ್ರಾಯ ಹೇಳುತ್ತಿದ್ದಾರೆ.
ಅಂದ್ಹಾಗೆ, ಚಿರು ಸರ್ಜಾ ಅಗಲಿದ ಬಳಿಕ ಮೇಘನಾ ರಾಜ್ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದರು. ಜೂನಿಯರ್ ಚಿರು ಆಗಮನದಿಂದ ಸರ್ಜಾ ಕುಟುಂಬದಲ್ಲಿ ಸಂತಸ ಮೂಡಿದ್ದು, ಆ ಪುಟ್ಟ ಕಂದಮ್ಮನ ರೂಪದಲ್ಲಿ ಚಿರು ಸರ್ಜಾ ಅವರನ್ನು ನೋಡಿಕೊಳ್ಳುತ್ತಿದ್ದಾರೆ.
ಚಿರು ಅಂತ್ಯಸಂಸ್ಕಾರ ನಡೆದ ಸ್ಥಳದಲ್ಲಿ ಸಮಾಧಿ ನಿರ್ಮಾಣ ಮಾಡಲು ಧ್ರುವ ಸರ್ಜಾ ಇತ್ತೀಚಿಗಷ್ಟೆ ಪೂಜೆ ಸಹ ಮಾಡಿದ್ದಾರೆ. ಧ್ರುವ ಸರ್ಜಾ, ಪತ್ನಿ ಪ್ರೇರಣಾ, ಧ್ರುವ ತಂದೆ-ತಾಯಿ ಅಜ್ಜಿ ಲಕ್ಷ್ಮೀದೇವಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನಟ ಚಿರಂಜೀವಿ ಸರ್ಜಾ ಜೂನ್ 7ರಂದು ಹೃದಯಾಘಾತದಿಂದ ಸಾವಿನಪ್ಪಿದ್ದರು.
20 ವರ್ಷದ ನಂತರ ಚಿರು ಮಗನನ್ನು ಹೀರೋ ಆಗಿ ನಾನೇ ಲಾಂಚ್ ಮಾಡ್ತೀನಿ: ಅರ್ಜುನ್ ಸರ್ಜಾ
ಇನ್ನು ಮೇಘನಾ ರಾಜ್, ಅವರ ಮಗ, ತಂದೆ ಸುಂದರ್ ಹಾಗೂ ತಾಯಿ ಪ್ರಮೀಳಾ ಜೋಷಾಯ್ ಅವರಿಗೆ ಕೊರೊನಾ ವೈರಸ್ ತಗುಲಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.