For Quick Alerts
  ALLOW NOTIFICATIONS  
  For Daily Alerts

  ಬಹಿರಂಗವಾಯ್ತು ಅರ್ಜುನ್ ಸರ್ಜಾ ಬೇಸರಕ್ಕೆ ಕಾರಣ: ಸರ್ಜಾ ಹೇಳೋದ್ರಲ್ಲಿ ಸತ್ಯ ಇದೆಯಾ?

  By Bharath Kumar
  |
  ಸರ್ಜಾ ಹೇಳೋದ್ರಲ್ಲಿ ಸತ್ಯ ಇದೆಯಾ? | Filmibeat kannada

  ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ನಿರ್ದೇಶನ ಮಾಡಿರುವ 'ಪ್ರೇಮ ಬರಹ' ಸಿನಿಮಾ ರಾಜ್ಯಾದ್ಯಂತ ಅದ್ಧೂರಿಯಾಗಿ ಪ್ರದರ್ಶನವಾಗ್ತಿದೆ. ಅರ್ಜುನ್ ಮಗಳು ಐಶ್ವರ್ಯ ಅವರನ್ನ ಸ್ಯಾಂಡಲ್ ವುಡ್ ಭರ್ಜರಿಯಾಗಿ ಸ್ವಾಗತ ಮಾಡಿದೆ. ಈ ಮಧ್ಯೆ ಅರ್ಜುನ್ ಸರ್ಜಾ ಬೇಸರ ಮಾಡಿಕೊಂಡಿದ್ದ ಘಟನೆ ನಡೆದಿತ್ತು.

  ಸಿನಿಮಾ ಯಶಸ್ವಿಯಾಗಿದ್ದರೂ, ಅರ್ಜುನ್ ಸರ್ಜಾ ಮಾತ್ರ ಬೇಜಾರು ಮಾಡಿಕೊಂಡಿದ್ರು. ''ಹೌದು, ನನಗೆ ಬೇಜಾರಾಗಿದೆ'' ಎಂದು ಹೇಳಿಕೊಂಡಿದ್ದ ಅರ್ಜುನ್ ಸರ್ಜಾ, ಅದಕ್ಕೆ ಕಾರಣವೇನು ಎಂಬುದನ್ನ ಹೇಳಿರಲಿಲ್ಲ. ಬಟ್, ಇತ್ತೀಚೆಗೆ ತಮ್ಮ ಬೇಸರಕ್ಕೆ ಕಾರಣವೇನು ಎಂಬುದನ್ನ ಸುದ್ದಿಗೋಷ್ಠಿಯಲ್ಲಿ ಬಹಿರಂಗಪಡಿಸಿದ್ದಾರೆ.

  ಅರ್ಜುನ್ ಸರ್ಜಾ ಬೇಸರಕ್ಕೆ ಕಾರಣವಾಯ್ತು 'ಪ್ರೇಮಬರಹ' ರಿವ್ಯೂ

  'ಪ್ರೇಮ ಬರಹ' ಚಿತ್ರದ ಬಗ್ಗೆ ಕೆಲವು ಪತ್ರಿಕೆಗಳಲ್ಲಿ ಬಂದಿರುವ ವಿಮರ್ಶೆ ಕುರಿತು ಅರ್ಜುನ್ ಸರ್ಜಾ ಮಾತನಾಡಿದ್ದು, ಅದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಹಾಗಿದ್ರೆ, ಸರ್ಜಾ ಅವರ ಬೇಸರಕ್ಕೆ ಕಾರಣವಾದ ಆ ವಿಮರ್ಶೆ ಯಾವುದು? ಮುಂದೆ ಓದಿ.....

  ಅರ್ಜುನ್ ಸರ್ಜಾ ಬೇಸರಕ್ಕೆ ಕಾರಣ ಇದು

  ಅರ್ಜುನ್ ಸರ್ಜಾ ಬೇಸರಕ್ಕೆ ಕಾರಣ ಇದು

  ''ಯಾವಗಲೂ ವಿಮರ್ಶೆ ಚೆನ್ನಾಗಿ ಬರಬೇಕು ಎನ್ನುವಂತಿಲ್ಲ. ಯಾರಿಗೆ ಏನು ಅನಿಸುತ್ತೇ ಎನ್ನುವುದು ಬರೆಯಬಹುದು. ನಾವು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇದ್ದೀವಿ. ನಮಗೆ ಎಲ್ಲದಕ್ಕೂ ಸ್ವತಂತ್ರ ಇದೆ. ಬರೆಯೋದಕ್ಕೆ, ಮಾತನಾಡುವುದಕ್ಕೆ ಸ್ವತಂತ್ರ ಇದೆ. ವಿಮರ್ಶೆ ಮಾಡೋದು ತಲ್ಲ. ಆದ್ರೆ, ಇದಕ್ಕೆ ಇಷ್ಟೇ ಮಾರ್ಕ್ಸ್, ಇದಕ್ಕೆ ಇಷ್ಟೇ ಅಂಕ ಅನ್ನೋದು ಇದೆ ಅಲ್ವಾ, ಅದು ಸಿನಿಮಾ ಮಾಡಿರುವ ನಿರ್ಮಾಪಕನ ಹೊಟ್ಟೆ ಮೇಲೆ ಏಟು ಬೀಳುತ್ತೆ ಎನ್ನುವುದಾರೇ ಅದು ಮಾಡಬಾರದು ಅಲ್ವಾ''

  'ಪ್ರೇಮ ಬರಹ'ಕ್ಕೆ ಮನಸೋತ ಸುದೀಪ್ ಗೆ ಇಷ್ಟವಾಗಿದ್ದೇನು?

  ಒಬ್ಬರೂ ಬರೆಯುವುದು ವಿಮರ್ಶೆ ಅಲ್ಲ

  ಒಬ್ಬರೂ ಬರೆಯುವುದು ವಿಮರ್ಶೆ ಅಲ್ಲ

  ''ವಿಮರ್ಶೆ ಅಂದ್ರೆ ಒಬ್ಬ ಮನುಷ್ಯ ಅಲ್ಲ. ಸಾವಿರಾರು ಜನ ಸಿನಿಮಾ ನೋಡ್ತಾರೆ. ಅವರಲ್ಲಿ ಒಂದಿಷ್ಟು ಜನ ಕೂತು ರೇಟಿಂಗ್ ಕೊಟ್ರೆ, ಅದು ಅರ್ಥವಿದೆ. ಆದ್ರೆ, ಒಬ್ಬರೇ ಕೂತು ವಿಮರ್ಶೆ ಮಾಡೋದು ಸರಿಯಿಲ್ಲ ಅನಿಸುತ್ತೆ''

  ವಿಮರ್ಶೆ : ಕಾರ್ಗಿಲ್ ಕದನದಲ್ಲಿ ಕಣ್ಬಿಟ್ಟ ಶುಭ್ರ 'ಪ್ರೇಮ' ಬರಹ

  ವಿಮರ್ಶೆ ನೋಡಿ ಜನ ಬರ್ತಾರೆ

  ವಿಮರ್ಶೆ ನೋಡಿ ಜನ ಬರ್ತಾರೆ

  ''ಕೆಲವು ಜನ ಈ ವಿಮರ್ಶೆ ನೋಡಿ ಸಿನಿಮಾ ನೋಡೋಕೆ ನಿರ್ಧರಿಸುತ್ತಾರೆ. ಈ ಸಿನಿಮಾಗೆ ಇಷ್ಟು ರೇಟಿಂಗ್ ನೋಡ್ಬಹುದಾ? ಅಂತ ಡಿಸೈಡ್ ಮಾಡ್ತಾರೆ. ಇದು ಜನಗಳ ತಪ್ಪಲ್ಲ. ವ್ಯವಸ್ಥೆ ಹಾಗೆ ಇದೆ''

  ರೇಟಿಂಗ್ ಕೊಡೋದು ಬೇಡ

  ರೇಟಿಂಗ್ ಕೊಡೋದು ಬೇಡ

  ''ಅಭಿನಯದ ಬಗ್ಗೆ ಇನ್ನು ಚೆನ್ನಾಗಿ ಮಾಡಬಹುದಿತ್ತು. ಅಭಿನಯ ಕಲಿಬೇಕು ಎಂದು ಬರೆಯಬಹುದು. ಆದ್ರೆ, ಇದಕ್ಕೆ ಇಷ್ಟು ಪಾಯಿಂಟ್ ಎನ್ನುವ ಹಕ್ಕಿಲ್ಲ''

  ನನ್ನ ಪ್ರಕಾರ ಸೂಪರ್ ಡೂಪರ್ ಹಿಟ್

  ನನ್ನ ಪ್ರಕಾರ ಸೂಪರ್ ಡೂಪರ್ ಹಿಟ್

  ''ಪ್ರೇಮ ಬರಹ ಸಿನಿಮಾ ಎಲ್ಲ ಸೆಂಟರ್ ಗಳಲ್ಲೂ ಚೆನ್ನಾಗಿ ಪ್ರದರ್ಶನವಾಗ್ತಿದೆ. ಸಿನಿಮಾ ಸೂಪರ್ ಹಿಟ್ ಅಂತ ಬಂದಾಗಿದೆ. ಆದ್ರೆ, ನನ್ನ ಪ್ರಕಾರ ಇದು ಸೂಪರ್ ಡೂಪರ್ ಹಿಟ್. ನಮ್ಮ ಚಿತ್ರದ ಹೀರೋ ಮತ್ತು ಹೀರೋಯಿನ್ ಇಬ್ಬರನ್ನ ಜನ ಮೆಚ್ಚಿಕೊಂಡಿದ್ದಾರೆ''

  ನನ್ನ ಉದ್ದೇಶ ನೆರವೇರಿದೆ

  ನನ್ನ ಉದ್ದೇಶ ನೆರವೇರಿದೆ

  ''ಯಾವ ಕಾರಣಕ್ಕಾಗಿ ಈ ಸಿನಿಮಾ ಶುರು ಮಾಡಿದ್ನೋ ಅದು ನೆರವೇರಿದೆ. ನನ್ನ ಮಗಳನ್ನ ಕನ್ನಡಕ್ಕೆ ಒಬ್ಬ ನಟಿಯಾಗಿ ಪರಿಚಯ ಮಾಡ್ಬೇಕಿತ್ತು. ನೋಡೋದಕ್ಕೆ ಚೆನ್ನಾಗಿದ್ದಾರೇ, ಡ್ಯಾನ್ಸ್ ಚೆನ್ನಾಗಿ ಮಾಡ್ತಾರೆ ಅನ್ನೋದಲ್ಲ. ಎಲ್ಲರೂ ಮೆಚ್ಚಿಕೊಳ್ಳುವ ನಟಿ ಆಗಬೇಕಿತ್ತು'' ಎಂದು ಅರ್ಜುನ್ ಸರ್ಜಾ ಅಭಿಪ್ರಾಯ ಪಟ್ಟಿದ್ದಾರೆ.

  English summary
  Actor Arjun Sarja expressed Bored on kannada movie 'Prema Baraha' review. the movie directed by arjun sarja.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X