»   » 'ಡಬ್ಬಿಂಗ್' ವಿರುದ್ಧ ಮತ್ತೊಂದು ಮಹಾಯುದ್ಧಕ್ಕೆ ಕಾರಣವಾಗುತ್ತಾ 'ಧೀರ'.!

'ಡಬ್ಬಿಂಗ್' ವಿರುದ್ಧ ಮತ್ತೊಂದು ಮಹಾಯುದ್ಧಕ್ಕೆ ಕಾರಣವಾಗುತ್ತಾ 'ಧೀರ'.!

Posted By:
Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್ ಪರ-ವಿರೋಧ ಚರ್ಚೆಗಳು ಬಹಳ ವರ್ಷಗಳಿಂದ ನಡೆಯುತ್ತಿದೆ. ಕನ್ನಡದ ನಟರು ಹಾಗೂ ಕನ್ನಡ ಪರ ಹೋರಾಟಗಾರರು ಡಬ್ಬಿಂಗ್ ವಿರೋಧ ಹೋರಾಟ ನಡೆಸಿದರೆ, ಇನ್ನೂ ಕೆಲವರು 'ಡಬ್ಬಿಂಗ್ ಬರಲಿ ಬಿಡಿ..' ಎನ್ನುತ್ತಿದ್ದಾರೆ.

ಹೀಗಿರುವಾಗ, ತಮಿಳು ನಟ ಅಜಿತ್ ಕುಮಾರ್ ಅಭಿನಯದ 'ಎನೈ ಅರಿಂದಾಲ್' ಸಿನಿಮಾ ಕನ್ನಡದಲ್ಲಿ 'ಸತ್ಯದೇವ್ ಐಪಿಎಸ್' ಆಗಿ ಬಿಡುಗಡೆಯಾಗಿತ್ತು. ಈ ಚಿತ್ರದ ವಿರುದ್ಧ ರಾಜ್ಯಾದ್ಯಂತ ಹೋರಾಟ, ಪ್ರತಿಭಟನೆ ನಡೆದಿತ್ತು.

ಇದೀಗ, ಮತ್ತೊಂದು ತಮಿಳು ಸಿನಿಮಾ ಕನ್ನಡಕ್ಕೆ ಡಬ್ ಆಗಿ ಬಿಡುಗಡೆಗೆ ಸಿದ್ದವಾಗಿದೆ. ಈಗಾಗಲೇ ಡಬ್ಬಿಂಗ್ ವಿರೋಧಿಸಿದ್ದಕ್ಕೆ ಕನ್ನಡ ನಟ ಜಗ್ಗೇಶ್, ಸಾರಾ ಗೋವಿಂದು, ವಾಟಳ್ ನಾಗರಾಜ್ ಅವರಿಗೆ 'ಸಿಸಿಐ'ನಿಂದ ನೋಟಿಸ್ ಬೇರೆ ಬಂದಿದೆ. ಈ ಎಲ್ಲಾ ಬೆಳವಣಿಗೆಗಳನ್ನ ಗಮಿನಿಸಿದ್ರೆ, ಡಬ್ಬಿಂಗ್ ವಿರುದ್ಧ ಮತ್ತೊಂದು ಮಹಾಯುದ್ಧ ಆಗುವ ಸೂಚನೆ ಸಿಗುತ್ತಿದೆ....ಮುಂದೆ ಓದಿ.....

ಮತ್ತೊಂದು ಡಬ್ಬಿಂಗ್ ಸಿನಿಮಾ

ಕಾಲಿವುಡ್ ನಟ ಅಜಿತ್ ನಟನೆಯ 'ಆರಂಭಂ' ಚಿತ್ರ ಸದ್ಯ ಕನ್ನಡಕ್ಕೆ ಡಬ್ ಆಗಿದ್ದು, 'ಧೀರ' ಎನ್ನುವ ಟೈಟಲ್ ನಲ್ಲಿ ಸಿನಿಮಾ ಬಿಡುಗಡೆಯಾಗುವುದಕ್ಕೆ ಸಿದ್ಧವಾಗಿದೆ.

ಮತ್ತೆ ಡಬ್ಬಿಂಗ್ ವಿರುದ್ಧ ಹೋರಾಟ.!

'ಸತ್ಯಜೀತ್ ಐಪಿಎಸ್' ಚಿತ್ರದ ಸಂಧರ್ಭದಲ್ಲಿ ಪ್ರತಿಭಟನೆ ನಡೆದಿತ್ತು. ಈಗ ಮತ್ತೆ ತಮಿಳು ಭಾಷೆಯ ಡಬ್ಬಿಂಗ್ ಸಿನಿಮಾ ಕನ್ನಡಕ್ಕೆ ಕಾಲಿಡಲಿದ್ದು, ಈ ಬಾರಿಯೂ ಅದೇ ರೀತಿಯ ಹೋರಾಟ ನಡೆಯಲಿದ್ಯಾ ಎನ್ನುವ ಪ್ರಶ್ನೆ ಎಲ್ಲರಲ್ಲಿ ಮೂಡಿದೆ.

ಡಬ್ಬಿಂಗ್ ಜನರಿಗೆ ಬೇಕಂದ್ರೆ ತಡೆಯಲು ನಾನ್ಯಾರು: ಶಿವಣ್ಣ

ಹೋರಾಟಗಾರರಿಗೆ ಸಿಸಿಐ ಕಡಿವಾಣ

ಈ ಬಾರಿ ಡಬ್ಬಿಂಗ್ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಯುವ ಸಾಧ್ಯತೆ ಕಡಿಮೆ ಇದೆ. ಯಾಕಂದ್ರೆ ಡಬ್ಬಿಂಗ್ ಹೋರಾಟಕ್ಕೆ ಸದ್ಯ ಸಿಸಿಐ (Competition Commission of India) ಕಡಿವಾಣ ಹಾಕಿದೆ.

ನೋಟಿಸ್ ಜಾರಿ

ಡಬ್ಬಿಂಗ್ ಚಿತ್ರಗಳಿಗೆ ವಿರೋಧಿಸಿದ ಕಾರಣಕ್ಕೆ ನಟ ಜಗ್ಗೇಶ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದ್, ಮತ್ತು ಕನ್ನಡಪರ ಹೋರಾಟಗಾರ ವಾಟಳ್ ನಾಗರಾಜ್ ಸೇರಿದಂತೆ ಹಲವರಿಗೆ ಸಿಸಿಐ ನೋಟಿಸ್ ಜಾರಿ ಮಾಡಿದೆ.

'ಡಬ್ಬಿಂಗ್, ರೀಮೇಕ್ ಬ್ಯಾನ್ ಮಾಡಿ' ಎಂದ ನಟ ಅನಂತ್ ನಾಗ್

Dubbed Kannada Cinema 'Sathyadev IPS' canceled most of Theaters | FilmIbeat Kannada

ಜಗ್ಗೇಶ್ ಹೇಳಿಕೆ

ಸಿಸಿಐ ನೋಟಿಸ್ ನೀಡಿರುವ ಬಗ್ಗೆ ಹೇಳಿಕೆ ನೀಡಿರುವ ನಟ ಜಗ್ಗೇಶ್ ''ನಾನೋಬ್ಬ ಕನ್ನಡಿಗ, ವೈಯಕ್ತಿಯವಾಗಿ ನನಗೆ ಅಭಿವ್ಯಕ್ತಿ ಸ್ವಾತಂತ್ಯ ಇದೆ. ಈ ಹಿನ್ನಲೆಯಲ್ಲಿ ಡಬ್ಬಿಂಗ್ ಬೇಡ ಅಂತ ಹೇಳಿದ್ದೆ. ಈ ನೋಟಿಸ್ ಗೆ ನಾನು ಪ್ರತಿಕ್ರಿಯೆ ನೀಡುತ್ತೇನೆ'' ಎಂದಿದ್ದಾರೆ.

English summary
'Dheera' movie dubbed version of Thamil actor Ajith Kumar starrer Arrambam is all set to release in Karnataka.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada