»   » ಬಹುನಿರೀಕ್ಷಿತ ತುಳು ಸಿನಿಮಾ 'ಅರೆ ಮರ್ಲೆರ್' ಈ ವಾರ ಬಿಡುಗಡೆ

ಬಹುನಿರೀಕ್ಷಿತ ತುಳು ಸಿನಿಮಾ 'ಅರೆ ಮರ್ಲೆರ್' ಈ ವಾರ ಬಿಡುಗಡೆ

By: ಕಿರಣ್, ಮಂಗಳೂರು ಪ್ರತಿನಿಧಿ
Subscribe to Filmibeat Kannada

ಮಂಗಳೂರು: ತುಳು ಚಿತ್ರರಂಗದಲ್ಲಿ ಮತ್ತೊಂದು ಹಾಸ್ಯ ಪ್ರಧಾನ ಚಿತ್ರ ತೆರೆ ಕಾಣಲು ಸಿದ್ಧವಾಗಿದೆ. ಬೊಳ್ಳಿ ಮೂವೀಸ್ ಲಾಂಛನದಲ್ಲಿ 'ತೆಲಿಕೆದ ಬೊಳ್ಳಿ' ಎಂದೇ ಪ್ರಸಿದ್ಧರಾಗಿರುವ ದೇವದಾಸ್ ಕಾಪಿಕಾಡ್ ನಿರ್ದೇಶನದಲ್ಲಿ 'ಅರೆ ಮರ್ಲೆರ್' ತುಳು ಸಿನಿಮಾ ನಾಳೆ ತೆರೆ ಕಾಣಲಿದೆ.

ತುಳು ಪ್ರೇಕ್ಷಕರು ಬಹು ನಿರೀಕ್ಷೆಯಿಂದ ಕಾಯುತ್ತಿರುವ ಚಿತ್ರ ಇದಾಗಿದ್ದು, ನಾಳೆ ಕರಾವಳಿಯ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಏಕಕಾಲಕ್ಕೆ ಪ್ರದರ್ಶನಗೊಳ್ಳಲಿದೆ.

Arrey Marler tulu movie all set to release on Aug 11

ಈಗಾಗಲೇ ಬಿಡುಗಡೆಗೊಂಡಿರುವ ಸಿನಿಮಾ ಪೋಸ್ಟರ್ ಗಳು ಜನರನ್ನು ಆಕರ್ಷಿಸಿವೆ. ಚಿತ್ರದಲ್ಲಿ ನಾಯಕ ನಟ ಅರ್ಜುನ್ ಕಾಪಿಕಾಡ್ ಈ ಬಾರಿ ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಂಡು ಗಮನ ಸೆಳೆಯಲಿದ್ದಾರೆ.

ಚಿತ್ರದಲ್ಲಿ ನಾಯಕ ನಟ ಅರ್ಜುನ್ ಕಾಪಿಕಾಡ್ ಅವರಿಗೆ ಹಾಸ್ಯ ಕಲಾವಿದರಾದ ಅರವಿಂದ್ ಬೋಳಾರ್ ಹಾಗೂ ಭೋಜರಾಜ್ ವಾಮಂಜೂರು ಸಾಥ್ ನೀಡಲಿದ್ದಾರೆ. ಚಿತ್ರಕ್ಕೆ ಮಣಿಕಾಂತ್ ಕದ್ರಿ ಹಿನ್ನೆಲೆ ಸಂಗೀತ ನೀಡಿದ್ದಾರೆ.

ಚಿತ್ರಕ್ಕೆ ಉದಯ್ ಬಲ್ಲಾಳ್ ಛಾಯಾಗ್ರಹಣ ಇದ್ದರೆ, ಚಿತ್ರದ ಕಥೆ ಚಿತ್ರಕಥೆ ಸಂಭಾಷಣೆ, ಸಾಹಿತ್ಯ, ಸಂಗೀತ ಮತ್ತು ನಿರ್ದೇಶನ ದೇವದಾಸ್ ಕಾಪಿಕಾಡ್ ಅವರದ್ದಾಗಿದೆ.

ಬೊಳ್ಳಿ ಮೂವೀಸ್ ಲಾಂಛನದಡಿ ಈ ಹಿಂದೆ 'ತೆಲಿಕೆದ ಬೊಳ್ಳಿ', 'ಚಂಡಿಕೋರಿ', ಬರ್ಸ ಸಿನಿಮಾ ತಯಾರಾಗಿದ್ದು, 'ಅರೆ ಮರ್ಲೆರ್' ಚಿತ್ರ ನಾಳೆ ತೆರೆ ಕಾಣಲಿದೆ.

English summary
The most awaited Tulu Movie 'Arrey Marler' is all set to release on Aug 11th. The Movie is directed by Devdas Kapikad.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada