»   » ಬಂದ..ಬಂದ..ನೋಡಿ ಹೊಸ ವೀರಪ್ಪನ್..

ಬಂದ..ಬಂದ..ನೋಡಿ ಹೊಸ ವೀರಪ್ಪನ್..

Posted By:
Subscribe to Filmibeat Kannada

ಕಾಡುಗಳ್ಳ, ದಂತಚೋರ, ನರಹಂತಕ ವೀರಪ್ಪನ್ ಹತ್ಯೆಯ ಸುತ್ತ ಕಾಂಟ್ರವರ್ಶಿಯಲ್ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ 'ಕಿಲ್ಲಿಂಗ್ ವೀರಪ್ಪನ್' ಚಿತ್ರಕ್ಕೆ ಚಾಲನೆ ನೀಡಿದ್ದಾರೆ.

ವೀರಪ್ಪನ್ ನ ಟ್ರ್ಯಾಪ್ ಮಾಡಿ ಕೊಲ್ಲುವ 'ಜೆಂಟಲ್ ಮ್ಯಾನ್' ಪಾತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕಾಣಿಸಿಕೊಳ್ಳುತ್ತಿದ್ದಾರೆ. ಶಿವಣ್ಣ ಜೊತೆ ಪೊಲೀಸ್ ಅಧಿಕಾರಿಯಾಗಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಂಚಾರಿ ವಿಜಯ್ ನಟಿಸುತ್ತಿದ್ದಾರೆ.

killing veerappan

ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿಯಾಗಿ ಯಜ್ಞಾ ಶೆಟ್ಟಿ ಇದ್ರೆ, ಪ್ರಮುಖ ಪಾತ್ರದಲ್ಲಿ ಪಾರುಲ್ ಯಾದವ್ ಅಭಿನಯಿಸುತ್ತಿದ್ದಾರೆ. ಆದ್ರೆ, ಎಲ್ಲರಿಗಿಂತ ಮುಖ್ಯವಾಗಿರುವ ವೀರಪ್ಪನ್ ಪಾತ್ರದಲ್ಲಿ ಯಾರು ಕಾಣಿಸಿಕೊಳ್ತಾರೆ? ಅವ್ರು ಹೇಗಿದ್ದಾರೆ ಅನ್ನುವ ಕುತೂಹಲ ಈವರೆಗೂ ಎಲ್ಲರಿಗೂ ಕಾಡ್ತಾನೇ ಇತ್ತು. [ವೀರಪ್ಪನ್ ಬೇಟೆಗೆ ಹೊರಟ ಆರ್.ಜಿ.ವಿ-ಶಿವಣ್ಣ..!]

ಆ ಕುತೂಹಲಕ್ಕೆ ನಿಮ್ಮ 'ಫಿಲ್ಮಿಬೀಟ್ ಕನ್ನಡ' ಬ್ರೇಕ್ ಹಾಕಿದೆ. 'ಕಿಲ್ಲಿಂಗ್ ವೀರಪ್ಪನ್' ಚಿತ್ರದಲ್ಲಿ ವೀರಪ್ಪನ್ ಆರ್ಭಟ ಹೇಗಿರುತ್ತೆ ಅನ್ನೋದರ ಝಲಕ್ ನಾವ್ ತೋರಿಸ್ತಾಯಿದ್ದೀವಿ ನೋಡಿ....

Artist Sandeep as Veerappan in RGV's 'Killing Veerappan'

ಯೆಸ್...ಇವ್ರೇ ಸ್ಯಾಂಡಲ್ ವುಡ್ ನ ಬ್ರ್ಯಾಂಡ್ ನ್ಯೂ ವೀರಪ್ಪನ್. ಮುಂಬೈ ಮೂಲದ ರಂಗಭೂಮಿ ಕಲಾವಿದ ಸಂದೀಪ್, 'ಕಿಲ್ಲಿಂಗ್ ವೀರಪ್ಪನ್' ಚಿತ್ರಕ್ಕಾಗಿ ವೀರಪ್ಪನ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಫೋಟೋ ನಿಮ್ಮ 'ಫಿಲ್ಮಿಬೀಟ್ ಕನ್ನಡ'ಗೆ ಲಭ್ಯವಾಗಿದೆ. [ದಂತಚೋರ ವೀರಪ್ಪನ್ ನ ಕೊಂದವರು ಯಾರು?]

ಈಗಾಗಲೇ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಸುತ್ತಮುತ್ತ 'ಕಿಲ್ಲಿಂಗ್ ವೀರಪ್ಪನ್' ಚಿತ್ರೀಕರಣ ನಡೆಯುತ್ತಿದೆ. ಕಾಡುಗಳಲ್ಲಿ 'ವೀರಪ್ಪನ್' ಆರ್ಭಟ ಶುರುವಾಗಿದೆ. ಅದನ್ನ ಅಡಗಿಸುವುದಕ್ಕೆ ಶಿವರಾಜ್ ಕುಮಾರ್ ಎಂಟ್ರಿ ಕೊಡಬೇಕಷ್ಟೆ. (ಫಿಲ್ಮಿಬೀಟ್ ಕನ್ನಡ ಎಕ್ಸ್ ಕ್ಲೂಸಿವ್)

English summary
Theater Artist Sandeep is roped into play Forest Brigand Veerappan in Controversial Director Ram Gopal Varma directorial, Century Star Shivarajkumar starrer 'Killing Veerappan'. Check out the brand new Veerappan's look.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada