For Quick Alerts
  ALLOW NOTIFICATIONS  
  For Daily Alerts

  ನಾಗರಹಾವು ರಾಮಾಚಾರಿಯ ಜಪದಲ್ಲಿ ಕನ್ನಡ ಚಿತ್ರರಂಗ

  By Pavithra
  |

  ಕನ್ನಡ ಸಿನಿಮಾರಂಗದಲ್ಲಿ ಎವರ್ ಗ್ರೀನ್ ಚಿತ್ರಗಳಲ್ಲಿ ಒಂದಾದ 'ನಾಗರಹಾವು' ಚಿತ್ರ ಹೊಸ ರೂಪ ಪಡೆದುಕೊಂಡು ತೆರೆಗೆ ಬರಲು ಸಿದ್ದವಾಗಿದೆ. 1973ರಲ್ಲಿ ರಿಲೀಸ್ ಆಗಿದ್ದ ಈ ಸೂಪರ್ ಹಿಟ್ ಸಿನಿಮಾ ಡಿಜಿಟಲ್ ವರ್ಷನ್ ನಲ್ಲಿ ರೀ-ರಿಲೀಸ್ ಆಗುತ್ತಿರುವ ವಿಚಾರ ಎಲ್ಲರಿಗೂ ತಿಳಿದಿದೆ. 30 ಎಂಎಂ ನಲ್ಲಿದ್ದ ಚಿತ್ರವೀಗ ಸಿನಿಮಾ ಸ್ಕೋಪ್ ಮತ್ತು 7.1 ಡಿಟಿಎಸ್ ಸೌಂಡ್‌ ಎಫೆಕ್ಟ್ನಲ್ಲಿ ತಯಾರಾಗಿದ್ದು ನಿನ್ನೆಯಷ್ಟೇ ಚಿತ್ರದ ಟೀಸರ್ ಬಿಡುಗಡೆ ಆಗಿದೆ.

  'ನಾಗರಹಾವು' ಸಿನಿಮಾವನ್ನು ನಿರ್ಮಾಪಕ ವೀರಸ್ವಾಮಿ ನಿರ್ಮಾಣ ಮಾಡಿದ್ದರು. ಈಗ ಅವರ ಎರಡನೇ ಪುತ್ರ, ರವಿಚಂದ್ರನ್ ಸಹೋದರ ಬಾಲಾಜಿ ಈ ಚಿತ್ರವನ್ನು ಮತ್ತೆ ರೀ ರಿಲೀಸ್ ಮಾಡಲು ಮುಂದಾಗಿದ್ದು ಕಿಚ್ಚ ಸುದೀಪ್ ಅವರಿಂದ ಟೀಸರ್ ಬಿಡುಗಡೆ ಮಾಡಿಸಿದ್ದಾರೆ.

  ಟ್ರೆಂಡ್ ನಲ್ಲಿ 'ನಾಗರಹಾವು' ಟೀಸರ್: ಇತಿಹಾಸ ಸೃಷ್ಟಿಸಲು ಮತ್ತೆ ಬಂದ ರಾಮಾಚಾರಿಟ್ರೆಂಡ್ ನಲ್ಲಿ 'ನಾಗರಹಾವು' ಟೀಸರ್: ಇತಿಹಾಸ ಸೃಷ್ಟಿಸಲು ಮತ್ತೆ ಬಂದ ರಾಮಾಚಾರಿ

  ರಾಮಾಚಾರಿಯನ್ನು ಹೊಸ ಅವತಾರದಲ್ಲಿ ತೆರೆ ಮೇಲೆ ನೋಡಲು ಕನ್ನಡ ಸಿನಿಮಾ ಕಲಾವಿದರು ಸಾಕಷ್ಟು ಕಾತುರರಾಗಿದ್ದಾರೆ. 'ನಾಗರಹಾವು' ಚಿತ್ರದ ಹೊಸ ಟೀಸರ್ ಬಿಡುಗಡೆ ಆಗುತ್ತಿದ್ದಂತೆ ಕನ್ನಡದ ಬಹುತೇಕ ಕಲಾವಿದರು, ತಂತ್ರಜ್ಙರು ಸಾಹಸಸಿಂಹನನ್ನು ಹಾಡಿ ಹೊಗಳಿದ್ದಾರೆ. ಹಾಗಾದ್ರೆ ವಿಷ್ಣು ಅಭಿನಯದ ಚಿತ್ರದ ಬಗ್ಗೆ ಕನ್ನಡಚಿತ್ರರಂಗದ ಅಭಿಪ್ರಾಯವೇನು? ಇಲ್ಲಿದೆ ಸಂಪೂರ್ಣ ಮಾಹಿತಿ. ಮುಂದೆ ಓದಿ

  ಮೈ ರೋಮಾಂಚನ ಆಯಿತು

  ನಟ ಜಗ್ಗೇಶ್ 'ನಾಗರಹಾವು' ಚಿತ್ರದ ಬಗ್ಗೆ ಟ್ವೀಟ್ ಮಾಡಿದ್ದಾರೆ. "ಮತ್ತೆ ಬರುತ್ತಿದ್ದಾರೆ ಸಾಹಸ ಸಿಂಹ..ಮೈ ರೋಮಾಂಚನ..ಗುಡುಗು ಸಿಡಿಲು ಆರ್ಭಟಿಸಿದಂತೆ ಆಯಿತು..ಈ ಸಿನಿಮಾದಂತೆ ನನ್ನ ತಂದೆ ತಾಯಿ ಹೊಸ ಅವತಾರದಲ್ಲಿ ಬರಬಾರದೆ ಎಂಬ ಆಸೆ ಆಯಿತು..ಅಪ್ಪ ಅಮ್ಮ ಅಕ್ಕಂದಿರ ಜೊತೆಯಲ್ಲಿ #ಗೀತಾಂಜಲಿಯಲ್ಲಿ ನೋಡಿದ ಚಿತ್ರ ಬಾಲ್ಯದ ನೆನಪು ಮರುಕಳಿಸಲು ಬರುತ್ತಿದೆ..ಧನ್ಯವಾದ #ಈಶ್ವರಿ ಫಿಲಂಸ್" ಎಂದಿದ್ದಾರೆ.

  ಇತಿಹಾಸ ಮರುಕಳಿಸಲಿದೆ.

  "ಇದು ಅತೀ ದೊಡ್ಡ ಸುದ್ದಿ. ವಿಷ್ಣುವರ್ಧನ್ ಸರ್ ಅವರ ನೆನಪಿನಲ್ಲಿ ನಮ್ಮ ಈಶ್ವರಿ ಪ್ರೊಡಕ್ಷನ್ಸ್ ನಲ್ಲಿ 'ನಾಗರಹಾವು' ಚಿತ್ರ ಸಿನಿಮಾ ಸ್ಕೋಪ್ ತಂತ್ರಜ್ಞಾನ ಅಳವಡಿಕೆಯಲ್ಲಿ ಬಿಡುಗಡೆ ಆಗುತ್ತಿದೆ. ಮತ್ತೆ ಇತಿಹಾಸವನ್ನು ಸೃಷ್ಟಿ ಮಾಡೋಣ" ಎಂದಿದ್ದಾರೆ ನಟ ಮನೋರಂಜನ್.

  ಮತ್ತೆ ತೆರೆ ಮೇಲೆ ದಾದ

  ನಟ ಹಾಗೂ ನಿರ್ದೇಶಕ ಪವನ್ ಒಡೆಯರ್ ಕೂಡ 'ನಾಗರಹಾವು' ಸಿನಿಮಾ ಬಗ್ಗೆ ಟ್ವೀಟ್ ಮಾಡಿದ್ದಾರೆ. ವಿಷ್ಣು ದಾದರನ್ನು ನೋಡಿ ಕಣ್ಣು ತುಂಬಿಕೊಳ್ಳಿ. ಇತಿಹಾಸ ಮರುಕಳಿಸಿದೆ". ಎಂದಿದ್ದಾರೆ.

  ಖುಷಿ ಹಾಗೂ ಹೆಮ್ಮೆ ವಿಚಾರ

  ಖುಷಿ ಹಾಗೂ ಹೆಮ್ಮೆ ವಿಚಾರ

  ನಿರ್ದೇಶಕ ರಘುರಾಮ್ ಕೂಡ 'ನಾಗರಹಾವು' ಚಿತ್ರ ಮತ್ತೆ ಬಿಡುಗಡೆ ಆಗುತ್ತಿರುವುದಕ್ಕೆ ಖುಷಿಯನ್ನು ವ್ಯಕ್ತ ಪಡಿಸಿದ್ದಾರೆ. 'ನಾಗರಹಾವು'... ತುಂಬಾ ಖುಷಿ ಹಾಗೂ ಹೆಮ್ಮೆ ಆಗುತ್ತಿದೆ. ವೀರಸ್ವಾಮಿ ಬಾಲಾಜಿ ಅವರಿಗೆ ತುಂಬು ಹೃದಯದ ಧನ್ಯವಾದಗಳು. ಪುಟ್ಟಣ್ಣ ಕಣಗಾಲ್ ಹಾಗೂ ರಾಮಾಚಾರಿಯನ್ನು ಮತ್ತೆ ಅಭಿಮಾನಿಗಳ ಮುಂದೆ ತಂದಿದಕ್ಕೆ.

  English summary
  Kannada film artists and technicians have expressed their happiness over the release of Nagarahavu. Many directors and artists have expressed their happiness through Twitter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X