For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್' ಶೀತಲ್ ಶೆಟ್ಟಿಗೆ 'ಪತಿ' ಸಿಕ್ಕಾಯ್ತು.!

  By Harshitha
  |

  ಶೀರ್ಷಿಕೆ ಓದಿದ ತಕ್ಷಣ ಕಣ್ಣರಳಿಸುವ ಮುನ್ನ ಇದು ರೀಲ್ ಸುದ್ದಿ ಎನ್ನುವುದು ನಿಮ್ಮ ಗಮನದಲ್ಲಿರಲಿ...

  ಸುದ್ದಿ ವಾಹಿನಿಗಳಲ್ಲಿ ಆಂಕರ್ ಆಗಿದ್ದ ಶೀತಲ್ ಶೆಟ್ಟಿ, ಸ್ಯಾಂಡಲ್ ವುಡ್ ಪ್ರವೇಶ ಮಾಡಿ... ನಂತರ 'ಬಿಗ್ ಬಾಸ್' ಮನೆಗೆ ಕಾಲಿಟ್ಟಿದ್ದು ನಿಮಗೆ ಗೊತ್ತಿರಲೇಬೇಕು.

  'ಬಿಗ್ ಬಾಸ್' ಮನೆಗೆ ಹೋಗಿ ಬಂದ್ಮೇಲೆ ಸ್ಯಾಂಡಲ್ ವುಡ್ ಅಂಗಳದಲ್ಲಿ ಬಿಜಿಯಾಗಿರುವ ಶೀತಲ್ ಶೆಟ್ಟಿ 'ಪತಿಬೇಕು.ಕಾಮ್' ಚಿತ್ರದಲ್ಲಿ ಆಕ್ಟ್ ಮಾಡಲು ಒಪ್ಪಿಕೊಂಡಿರುವುದನ್ನ ಇದೇ 'ಫಿಲ್ಮಿಬೀಟ್ ಕನ್ನಡ' ಪುಟದಲ್ಲಿ ನೀವು ಓದಿರಬಹುದು. ಈಗ ಇದೇ ಚಿತ್ರಕ್ಕೆ ಪತಿ ಅರ್ಥಾತ್ ನಾಯಕ ಸಿಕ್ಕಿದ್ದಾರೆ. ಮುಂದೆ ಓದಿರಿ...

  ಶೀತಲ್ ಶೆಟ್ಟಿ ಪತಿ ಯಾರು.?

  ಶೀತಲ್ ಶೆಟ್ಟಿ ಪತಿ ಯಾರು.?

  'ಮುದ್ದು ಮನಸೇ' ಸೇರಿದಂತೆ ಸ್ಯಾಂಡಲ್ ವುಡ್ ನ ಕೆಲವು ಚಿತ್ರಗಳಲ್ಲಿ ಅಭಿನಯಿಸಿರುವ ಅರು ಗೌಡ 'ಪತಿಬೇಕು.ಕಾಮ್' ಸಿನಿಮಾದಲ್ಲಿ ನಾಯಕರಾಗಿ ನಟಿಸುತ್ತಿದ್ದಾರೆ.

  'ಬಿಗ್ ಬಾಸ್' ಖ್ಯಾತಿಯ ಶೀತಲ್ ಶೆಟ್ಟಿಗೆ 'ಪತಿಬೇಕಂತೆ'.!'ಬಿಗ್ ಬಾಸ್' ಖ್ಯಾತಿಯ ಶೀತಲ್ ಶೆಟ್ಟಿಗೆ 'ಪತಿಬೇಕಂತೆ'.!

  ನಟನೆಗೆ ಕಡೆಗೆ ರಾಕೇಶ್

  ನಟನೆಗೆ ಕಡೆಗೆ ರಾಕೇಶ್

  'ತರ್ಲೆ ನನ್ಮಕ್ಳು' ಸಿನಿಮಾ ನಿರ್ಮಿಸಿದ ರಾಕೇಶ್, 'ಪತಿಬೇಕು.ಕಾಮ್' ಚಿತ್ರಕ್ಕೆ ನಿರ್ಮಾಣ ಮಾಡುವ ಜೊತೆಗೆ ಆಕ್ಟಿಂಗ್ ಕೂಡ ಮಾಡುತ್ತಿದ್ದಾರೆ.

  ಇಂದಿನಿಂದ ಚಿತ್ರೀಕರಣ ಪ್ರಾರಂಭ

  ಇಂದಿನಿಂದ ಚಿತ್ರೀಕರಣ ಪ್ರಾರಂಭ

  'ಪತಿಬೇಕು.ಕಾಮ್' ಚಿತ್ರದ ಚಿತ್ರೀಕರಣ ಇಂದಿನಿಂದ ಶುರುವಾಗಿದೆ. ಸತತ 35 ದಿನಗಳ ಕಾಲ ಬೆಂಗಳೂರಿನ ಸುತ್ತ ಮುತ್ತ ಚಿತ್ರೀಕರಣ ನಡೆಯಲಿದೆ.

  'ಪತಿಬೇಕು.ಕಾಮ್' ಕುರಿತು

  'ಪತಿಬೇಕು.ಕಾಮ್' ಕುರಿತು

  ಯುವತಿಯೊಬ್ಬಳು ಮದುವೆಗಾಗಿ ನಡೆಸುವ ಪರದಾಟವೇ ಈ ಸಿನಿಮಾದ ಕಥಾಹಂದರ. ಈ ಚಿತ್ರಕ್ಕೆ ರಾಕೇಶ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

  English summary
  Kannada Actor Aru Gowda is selected to play lead in Sheethal Shetty starrer 'Pathibeku.Com'

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X