For Quick Alerts
  ALLOW NOTIFICATIONS  
  For Daily Alerts

  ಇದೇ ವಾರ ಬೆಳ್ಳಿತೆರೆ ಮೇಲೆ 'ಮುದ್ದು ಮನಸೇ'

  By Harshitha
  |

  ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ 'ಮುದ್ದು ಮನಸೇ' ಚಿತ್ರ ಈ ವಾರ ರಾಜ್ಯಾದ್ಯಂತ ತೆರೆಕಾಣಲು ಸಜ್ಜಾಗಿದೆ. ರೋಮ್ಯಾಂಟಿಕ್, ಆಕ್ಷನ್ ಜೊತೆಗೆ ತ್ರಿಕೋನ ಪ್ರೇಮಕಥೆ ಹೊಂದಿರುವ ಈ ಚಿತ್ರದಲ್ಲಿ ಅರುಣ್ ಗೌಡ, ನಿತ್ಯಾ ರಾಮ್, ಐಶ್ವರ್ಯ ನಾಗ್ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ.

  'ಮುದ್ದು ಮನಸೇ' ಚಿತ್ರದ ಟ್ರೈಲರ್ ಈಗಾಗಲೇ ಭಾರಿ ಸದ್ದು ಮಾಡಿದೆ. ಎರಡು ವಿಭಿನ್ನ ಶೇಡ್ ಗಳಲ್ಲಿ ನಾಯಕ ಅರುಣ್ ಗೌಡ ಕಾಣಿಸಿಕೊಂಡಿದ್ದಾರೆ. ಹಳ್ಳಿ ಶೇಡ್ ನಲ್ಲಿ ಅರುಣ್ ಗೆ ನಿತ್ಯಾ ರಾಮ್ ನಾಯಕಿಯಾದರೆ, ಸಿಟಿಯಲ್ಲಿ ಗಂಡು ಬೀರಿ ನಾಯಕಿ ಐಶ್ವರ್ಯ ಜೊತೆಯಾಗುತ್ತಾರೆ.

  'ಬುಲ್ ಬುಲ್' ಬೆಡಗಿ ರಚಿತಾ ರಾಮ್ ಅಕ್ಕ ನಿತ್ಯಾ ರಾಮ್ ಹಾಗೂ ಐಶ್ವರ್ಯ ನಾಗ್ ಅರುಣ್ ಗೆ ಜೋಡಿಯಾಗಿದ್ದಾರೆ. ಅನಂತ್ ಶೈನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

  'ಮುದ್ದು ಮನಸೇ' ಚಿತ್ರಕ್ಕೆ ವಿನೀತ್ ರಾಜ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಖತ್ ಡೈಲಾಗ್ಸ್, ಹಾಡುಗಳ ಜೊತೆ ಲವ್ ಸೆಂಟಿಮೆಂಟ್ ಇರುವ 'ಮುದ್ದು ಮನಸೇ' ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಅನ್ನೋ ಭರವಸೆ ಚಿತ್ರತಂಡಕ್ಕಿದೆ. ['ಮುದ್ದು ಮನಸೇ' ಚಿತ್ರದ ಮುದ್ದಾದ ಟ್ರೈಲರ್ ನೋಡಿ]

  ನಿರ್ದೇಶಕ ಶಶಾಂಕ್, ಯೋಗರಾಜ್ ಭಟ್ ಸೇರಿದಂತೆ ಒಟ್ಟು ಆರು ನಿರ್ದೇಶಕರು ಚಿತ್ರದ ಆರು ಹಾಡುಗಳಿಗೆ ಸಾಹಿತ್ಯ ಬರೆದಿರುವುದು 'ಮುದ್ದು ಮನಸೇ' ವಿಶೇಷ. ಇದೇ ಶುಕ್ರವಾರ 'ಮುದ್ದು ಮನಸೇ' ತೆರೆ ಮೇಲೆ ಬರುತ್ತದೆ. ನೋಡುವುದಕ್ಕೆ ನೀವು ರೆಡಿಯಾಗಿ.

  English summary
  Arun Gowda, Aishwarya Nag, Nithya Ram starrer 'Muddu Manase' is all set to release this Friday (Aug 28th).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X